×
Ad

ಅರ್ನಬ್ ಗೋಸ್ವಾಮಿ ವಿರುದ್ಧ ಮುಗಿಬಿದ್ದ ಜನತೆ

Update: 2016-09-16 20:21 IST

ಹೊಸದಿಲ್ಲಿ, ಸೆ. 16 : ಶುಕ್ರವಾರ ಟೈಮ್ಸ್ ನೌ ಸುದ್ದಿ ವಾಹಿನಿ ಹಾಗು ಅದರ ಸಂಪಾದಕ ಅರ್ನಬ್ ಗೋಸ್ವಾಮಿ ಪಾಲಿಗೆ ಕೆಟ್ಟ ದಿನವಾಗಿ ಪರಿಣಮಿಸಿದೆ. ಆಮ್ ಆದ್ಮಿ ಪಕ್ಷ ಹಾಗು ದಿಲ್ಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ #AAPHaiAbroad ಅಭಿಯಾನ ಆರಂಭಿಸಿದ್ದು ಅರ್ನಬ್ ಪಾಲಿಗೆ ದುಬಾರಿಯಾಗಿದೆ. 

ದಿಲ್ಲಿ ಜನತೆ ಚಿಕುನ್ ಗುನ್ಯಾ ಹಾಗು ಡೆಂಗ್ ನಿಂದ ಕಂಗೆಟ್ಟಿರುವಾಗ ಸಿಸೋಡಿಯಾ ಫಿನ್ ಲ್ಯಾನ್ಡ್ ನಲ್ಲಿ ರಜೆಯ ಮೋಜಿನಲ್ಲಿದ್ದಾರೆ ಎಂದು ಅರ್ನಬ್ ಕೆಲವು ಫೋಟೋಗಳನ್ನು ಹಾಗು ಒಂದು ವೀಡಿಯೊವನ್ನು ಹಾಕಿದ್ದರು. ಈ ಬಗ್ಗೆ ಒಂದು ಜನಮತವನ್ನೂ ನಡೆಸಿದ್ದರು. ಆದರೆ ಪ್ರತಿಬಾರಿ ಬಿಜೆಪಿ ವಿರೋಧಿ ಪಕ್ಷಗಳನ್ನೇ ಟಾರ್ಗೆಟ್ ಮಾಡುವ ಅರ್ನಬ್ ಹಾಗು ಟೈಮ್ಸ್ ನೌ ವಿರುದ್ಧ ಟ್ವಿಟ್ಟರ್ ನಲ್ಲಿ ಜನತೆ ಮುಗಿಬಿದ್ದಿದ್ದಾರೆ. ಈ ಬಗ್ಗೆ ಜನಸತ್ತಾ  ವರದಿ ಮಾಡಿದೆ. 

ಈ ಬಾರಿ ಅರ್ನಬ್ ವಿರುದ್ಧದ ಆಕ್ರೋಶ ತೀವ್ರ ಸ್ವರೂಪ ಪಡೆದಿದೆ. ಶುಕ್ರವಾರ #ArnabModiKaKuttaHai ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿತ್ತು. ಟೈಮ್ಸ್ ನೌ ಯಾವಾಗಲೂ ಬಿಜೆಪಿ ವಿರೋಧಿ ಪಕ್ಷಗಳ ವಿರುದ್ಧದ ಸುದ್ದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ, ಬಿಜೆಪಿಗೆ ಋಣಾತ್ಮಕವಾಗಿರುವ ಸುದ್ದಿಗಳನ್ನು ನಿರ್ಲಕ್ಷಿಸುತ್ತದೆ ಎಂಬುದು ಜನರ ವ್ಯಾಪಕ ಆರೋಪವಾಗಿತ್ತು. 

ಇದಕ್ಕೆ ಸಂಬಂಧಪಟ್ಟಂತೆ ಕೆಲವು ಅಂಕಿ ಅಂಶಗಳನ್ನೂ  ನೀಡಲಾಯಿತು. ಈವರೆಗೆ ಟೈಮ್ಸ್ ನೌ ಆಪ್ ವಿರುದ್ಧ 11 ಹ್ಯಾಶ್ ಟ್ಯಾಗ್ ಅಭಿಯಾನ ನಡೆಸಿದ್ದರೆ , ಕಾಂಗ್ರೆಸ್ ವಿರುದ್ಧ 5 ಹಾಗು ಬಿಜೆಪಿ ವಿರುದ್ಧ ಕೇವಲ ಒಂದು ಹ್ಯಾಶ್ ಟ್ಯಾಗ್ ಮಾತ್ರ ನಡೆಸಿದೆ ಎಂದು ಆರೋಪಿಸಲಾಗಿದೆ. ಬೆಲೆ ಏರಿಕೆ, ಅಚ್ಛೆದಿನ್ , ಕಪ್ಪು ಹಣ ಇತ್ಯಾದಿಗಳ ಕುರಿತು ಅರ್ನಬ್ ಬಾಯಿ ಬಿಡುವುದಿಲ್ಲ ಎಂದೂ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಅರ್ನಬ್ ಅವರ ತಂದೆ ಹಾಗು ಚಿಕ್ಕಪ್ಪ ಬಿಜೆಪಿ ಪಕ್ಷದಲ್ಲಿರುವುದು ಹಾಗು ಬಿಜೆಪಿ ಟಿಕೆಟ್ ನಿಂದ ಚುನಾವಣೆಗೆ ಸ್ಪರ್ಧಿಸಿರುವದನ್ನು ಉಲ್ಲೇಖಿಸಿ, ಅರ್ನಬ್ ಕೂಡ ಪತ್ರಿಕೋದ್ಯಮ ಬಿಟ್ಟು ಬಿಜೆಪಿ ಸೇರುವುದು ಒಳ್ಳೆಯದು ಎಂದು ಹೇಳಿದ್ದಾರೆ. 

ಈ ಪೈಕಿ ಕೆಲವು ಟ್ವೀಟ್ ಗಳು ಇಲ್ಲಿವೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News