ಗುಡಾರಕ್ಕೆ ಬೆಂಕಿ ಹಚ್ಚಿ ಯೋಧರು ಹೊರಬಂದಾಗ ಗುಂಡು?
Update: 2016-09-18 20:29 IST
ಹೊಸದಿಲ್ಲಿ, ಸೆ.18: ಉರಿ ಸೇನಾ ನೆಲೆಯಲ್ಲಿ ಭಯೋತ್ಪಾದಕರು ಬಹುಶಃ ಗುಡಾರಗಳಿಗೆ ಬೆಂಕಿ ಹಚ್ಚಿರಬೇಕು. ಸೈನಿಕರು ಹೊರಗೋಡಿ ಬರುವ ವೇಳೆ ಗುಂಡು ಹಾರಿಸಿ ಹತ್ಯೆ ನಡೆಸಿರುವ ಸಾಧ್ಯತೆಯಿದೆಯೆಂದು ಹಿರಿಯ ಸೇನಾಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.
ಸೇನಾ ನೆಲೆಯೊಳಗೆ ಕನಿಷ್ಠ ಇನ್ನಿಬ್ಬರು ಭಯೋತ್ಪಾದಕರು ಅವಿತುಕೊಂಡಿರುವ ಶಂಕೆಯಿಂದ ಅಲ್ಲಿ ಎಚ್ಚರಿಕೆಯ ಶೋಧ ಕಾರ್ಯ ನಡೆಸುತ್ತಿದ್ದೇವೆಂಬ ಸೂಚನೆಯನ್ನು ಅವರು ನೀಡಿದ್ದಾರೆ.
ಉರಿ ದಾಳಿಯ ವಿವರವನ್ನು ಗಮನಿಸಿದರೆ, ಸಾಧ್ಯವಾದಷ್ಟು ಹೆಚ್ಚು ಪ್ರಾಣ ಹಾನಿ ಮಾಡುವ ಯೋಜನೆಯನ್ನು ಭಯೋತ್ಪಾದಕರು ಹಾಕಿಕೊಂಡಂತಿದೆ. ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾಗಿದ್ದು, ಇನ್ನೂ 2-3 ಮಂದಿ ಜೀವಂತವಾಗಿರುವ ಶಂಕೆಯಿದೆ. ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆಯೆಂದು ಅಧಿಕಾರಿ ಹೇಳಿದ್ದಾರೆ.
ಉಗ್ರರ ದಾಳಿಗೆ ಬಲಿಯಾದ ಸೈನಿಕರಲ್ಲಿ ಹೆಚ್ಚಿನವರು 6 ಬಿಹಾರ್ ರೆಜಿಮೆಂಟ್‌ಗೆ ಸೇರಿದವರೆನ್ನಲಾಗಿದೆ.