ಫಾಸ್ಟ್ ಎಂಡ್ ಫ್ಯೂರಿಯಸ್ ಸರಣಿಯ ಕೊನೆಯ ಚಿತ್ರದಲ್ಲಿ ನಟಿಸಲಿದ್ದಾರೆ ದಿವಂಗತ ಪೌಲ್ ವಾಕರ್

Update: 2016-09-19 10:33 GMT

ಹೊಸದಿಲ್ಲಿ, ಸೆ.19: ನಟ ಪೌಲ್ ವಾಕರ್ ಅವರು ಫ್ಯೂರಿಯಸ್ 7 ಚಿತ್ರ ಅರ್ಧ ಹಂತದಲ್ಲಿರುವಾಗಲೇ ಕಾರು ಅಪಘಾತವೊಂದರಲ್ಲಿ ಪ್ರಾಣ ಕಳೆದುಕೊಂಡಾಗ ಚಿತ್ರದ ನಿರ್ದೇಶಕ ಜೇಮ್ಸ್ ವಾನ್ ಹಾಗೂ ನಿರ್ಮಾಣ ಸಂಸ್ಥೆ ಯುನಿವರ್ಸಲ್ ಪಿಕ್ಚರ್ಸ್ ಹತಾಶೆಗೊಂಡಿತ್ತು. ಅವರಿಲ್ಲದೆ ಚಿತ್ರವನ್ನು ಹೇಗೆ ನಿರ್ಮಿಸುವುದೆಂದೇ ತಿಳಿಯದೆ ಕೊನೆಗೆ ಪೌಲ್ ವಾಕರ್ ಅವರ ಸಹೋದರರು ಹಾಗೂ ಕೆಲ ಅತ್ಯುತ್ಕೃಷ್ಟ ವಿಷುವಲ್ ಎಫೆಕ್ಟ್ಸ್ ಮೂಲಕ ಈ ಚಿತ್ರದಲ್ಲಿ ವಾಕರ್ ಅವರನ್ನು ಕಾಣಿಸಿ ಅವರಿಗೆ ಹೃದಯಸ್ಪರ್ಶಿ ವಿದಾಯ ಕೋರಲಾಗಿತ್ತು.

ಫಾಸ್ಟ್ ಆ್ಯಂಡ್ ಫ್ಯೂರಿಯಸ್ ನಲ್ಲಿನ ತಮ್ಮ ಪಾತ್ರ ಬ್ರಿಯಾನ್ ಒ ಕಾನ್ನರ್ ಆಗಿ ವಾಕರ್ ಅವರನ್ನು ನಾವು ಇದೇ ಕೊನೆಯ ಬಾರಿಗೆ ನೋಡುತ್ತಿದ್ದೇವೆಂಬುದು ಪ್ರೇಕ್ಷಕರು ತಿಳಿದಿದ್ದರು. ಆದರೆ ನಿಜಸ್ಥಿತಿ ಹಾಗಿಲ್ಲ. ಪೌಲ್ ವಾಕರ್ ಅವರ ಸಹೋದರರಾದ ಕೆಲಬ್ ಹಾಗೂ ಕೋಡಿ ವಾಕರ್ ಇತ್ತೀಚೆಗೆ ಪೌಲ್ ಅವರಿಗೆ ನಿಧಿ ಸಂಗ್ರಹಿಸಲು ನಡೆಸಿದ ಸಮಾರಂಭವೊಂದರಲ್ಲಿ ಮಾತನಾಡಿ ತಾವು ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8 ಹೇಗೆ ಮುಂದುವರಿಯಬಹುದೆಂಬುದನ್ನು ವಿನ್ ಡೀಸೆಲ್ ಅವರ ಬಳಿ ಮಾತನಾಡಿದ್ದಾಗಿ ಹೇಳಿದ್ದರು.

ಮುಂದಿನ ಚಿತ್ರದಲ್ಲಿ ಪೌಲ್ ಅವರ ಪಾತ್ರವನ್ನು ಮತ್ತೆ ಹಿಂದಕ್ಕೆ ತರುವ ಅವರ ಇಚ್ಛೆ ಹಾಗೂ ಅದಕ್ಕಾಗಿ ನಮ್ಮ ಸಹಕಾರವನ್ನು ಅವರು ನಮ್ಮ ಜತೆ ಮಾತನಾಡುವಾಗ ಕೋರಿದರು ಎಂದು ಪೌಲ್ ಅವರ ಸಹೋದರರು ಹೇಳಿದ್ದಾರೆ.

ಫ್ಯೂರಿಯಸ್ 7 ಚಿತ್ರದಲ್ಲಿ ಮಾಡಿದಂತೆ ಈ ಚಿತ್ರದಲ್ಲೂ ವಿಷುವಲ್ ಎಫೆಕ್ಟ್ಸ್ ಮೂಲಕ ಬ್ರಿಯಾನ್ ಒ’ ಕಾನ್ನರ್ ಪ್ರೇಕ್ಷಕರ ಮುಂದೆ ಬರಲಿದ್ದಾರೆಂದು ಹೇಳಲಾಗುತ್ತಿದೆ. ಇದು ನಿಜವೇ ಆಗಿದ್ದಲ್ಲಿ ವಾಕರ್ ಅವರ ಸಹೋದರರು ಬಾಡಿ ಡಬಲ್ ವರ್ಕ್ ಮೂಲಕ ಈ ಕಾರ್ಯಕ್ಕೆ ತಮ್ಮ ಕೊಡುಗೆ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News