ಭರವಸೆ ನೀಡುವ ಯಂತ್ರ ಮೋದಿ: ರಾಹುಲ್
Update: 2016-09-20 14:54 IST
ಹಾಮಿರ್‌ಪುರ್,ಸೆ.20: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳುಹೇಳಲು ಆರೆಸ್ಸೆಸ್‌ನಿಂದ ತರಬೇತಿ ಪಡೆದಿರುವ ವ್ಯಕ್ತಿ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜೊತೆಗೆ ಮೋದಿ ಅವರು “ಭರವಸೆ ನೀಡುವ ಯಂತ್ರ”ವೆಂದು ರಾಹುಲ್ ವ್ಯಂಗ್ಯವಾಡಿದ್ದಾರೆಂದು ವರದಿ ತಿಳಿಸಿದೆ.
ಈ ಜಗತ್ತಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಅತ್ಯಂತ ಹೆಚ್ಚು ವಿಶ್ವಾಸಪಾತ್ರರು ಸ್ವಂತ ಸಹೋದರಿ ಪ್ರಿಯಾಂಕಾ ಗಾಂಧಿ ಆಗಿದ್ದಾರೆ. ಪ್ರಿಯಾಂಕಾ ಸಕ್ರಿಯ ರಾಜಕೀಯವನ್ನು ಪ್ರವೇಶಿಸಬೇಕೆಂದು ತಾನು ಬಯಸುವುದಾಗಿ ಅವರು ಹೇಳಿದ್ದಾರೆ. ಆದರೆ ತನ್ನ ಸಹೋದರಿಯ ಮೇಲೆ ಈ ನಿರ್ಧಾರವನ್ನು ಹೇರಿಕೆ ಮಾಡಲು ಅವರು ಬಯಸುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ.
ಪ್ರಿಯಾಂಕಾರಿಗೆ ಇಷ್ಟವಿರುವಾಗ ರಾಜಕೀಯಕ್ಕೆ ಬಂದರೆ ಸಾಕು. ಅದು ಕೂಡಾ ಅವರು ಬಯಸುವುದಾದರೆ ಮಾತ್ರ ಎಂದು ರಾಹುಲ್ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.