ಸಿಂಗೂರಿಗೆ ‘ಟಾಟಾ’ ಹೇಳಲು ಚಾಲನೆ
Update: 2016-09-20 15:34 IST
ಕೊಲ್ಕತಾ,ಸೆಪ್ಟಂಬರ್ 20: ಟಾಟಾ ಕಾರು ಕಂಪೆನಿಗಾಗಿ ಸಿಂಗೂರಿನಲ್ಲಿ ರೈತರಿಂದ ವಶಪಡಿಸಲಾಗಿದ್ದ ಭೂಮಿಯನ್ನು ಮರಳಿಸಬೇಕೆಂಬ ಸುಪ್ರೀಂಕೋರ್ಟಿನ ತೀರ್ಪಿನ ನಂತರ ಅಲ್ಲಿದ್ದ ಟಾಟಾ ನಿರ್ಮಿಸಿದ ಕಟ್ಟಡಗಳನ್ನು ಕೆಡಹುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ವರದಿಯಾಗಿದೆ.
ಸಚಿವ ಪಾರ್ಥಚಟರ್ಜಿಯವರ ಮೇಲ್ನೋಟದಲ್ಲಿ ಕೆಡಹುವ ಕಾರ್ಯ ಚಾಲನೆಗೊಂಡಿದ್ದು ಪ್ರಗತಿಯಲ್ಲಿದೆ. ರೈತರಿಂದ ಜಮೀನು ವಶಕ್ಕೆಪಡೆಯುವಾಗ ಲೋಪವಾಗಿದೆ ಎಂದು ಸುಪ್ರೀಂಕೋರ್ಟು ಆಗಸ್ಟ್ 31ಕ್ಕೆ ನೀಡಿದ ತೀರ್ಪಿನಲ್ಲಿ ತಿಳಿಸಿದ್ದು ರೈತರಿಗೆ ಮರಳಿಸುವಂತೆ ಆದೇಶಿಸಿತ್ತು. ಭೂಮಿಯ ಪಟ್ಟೆ. ನಷ್ಟಪರಿಹಾರ ಮೊತ್ತವನ್ನು ವಿತರಿಸುವ ಕಾರ್ಯ ಕಳೆದ ವಾರ ನಡೆದಿತ್ತು ಎಂದು ವರದಿ ತಿಳಿಸಿದೆ.