×
Ad

ಆತಂಕ ಸೃಷ್ಟಿಸಿದ ಅನಾಥ ಬ್ರೀಫ್‌ಕೇಸ್

Update: 2016-09-20 22:55 IST

ಚಂಡಿಗಡ, ಸೆ.20: ಈ ವರ್ಷದ ಜನವರಿಯಲ್ಲಿ ಸೇನಾನೆಲೆಯ ಮೇಲೆ ಭಯೋತ್ಪಾದಕರ ದಾಳಿಗೆ ಸಾಕ್ಷಿಯಾಗಿದ್ದ ಪಠಾಣಕೋಟ್‌ನಲ್ಲಿ ಮಂಗಳವಾರ ಅನಾಥ ಬ್ರೀಫ್‌ಕೇಸೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ತಪಾಸಣೆಯ ಬಳಿಕ ಯೋಧನೋರ್ವ ಅದನ್ನು ಅಲ್ಲಿ ಅನುದ್ದಿಷ್ಟವಾಗಿ ಬಿಟ್ಟು ಹೋಗಿದ್ದ ಎನ್ನುವುದು ಬೆಳಕಿಗೆ ಬಂದಿದೆ.

ಹಿಮಾಚಲ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ ಯೋಧ ತನ್ನ ಬ್ರೀಫ್‌ಕೇಸ್‌ನ್ನು ಸಾಂಬಾ ಚೌಕ್ ಬಳಿ ಮರೆತಿದ್ದ. ಅದರಲ್ಲಿ ಯಾವುದೇ ಶಂಕಾಸ್ಪದ ವಸ್ತುವಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ನೆರೆಯ ಜಮ್ಮು-ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ಭಯೋತ್ಪಾದಕರ ದಾಳಿಯ ಬಳಿಕ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News