ಇಂದಿನಿಂದ ಕ್ಯಾಲಿಕಟ್ ನಲ್ಲಿ ಬಿಜೆಪಿಯ ರಾಷ್ಟ್ರೀಯ ಸಮ್ಮೇಳನ
ಕ್ಯಾಲಿಕಟ್ ಸೆ. 23: ಕೇಂದ್ರ ಮತ್ತು ರಾಜ್ಯಗಳಲ್ಲಿ ಸರಕಾರಗಳ ಮುಂದುವರಿಕೆಗೆ ಮತ್ತು ಪಕ್ಷದ ವಿಸ್ತರಣೆಯ ಉದ್ದೇಶವನ್ನಿರಿಸಿಕೊಂಡು ತಂತ್ರಗಳನ್ನು ರೂಪಿಸಲಿಕ್ಕಾಗಿ ಬಿಜೆಪಿ ರಾಷ್ಟ್ರೀಯ ಕೌನ್ಸಿಲ್ ಸಮ್ಮೇಳನ ಕೋಝಿಕ್ಕೋಡ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ.
ಕಾಶ್ಮೀರ ಸಮಸ್ಯೆ, ಭಾರತ-ಪಾಕ್ ಸಂಬಂಧ ಸಂಕೀರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಸರಕಾರದ ನಿಲುವುಗಳನ್ನು ತಿಳಿಯಲು ಜನರ ಗಮನ ಕೋಝಿಕ್ಕೋಡ್‌ನತ್ತ ಹರಿಯಲಿದೆ. ಜನಸಂಘದ ಅಧ್ಯಕ್ಷ ಮತ್ತು ಸಿದ್ಧಾಂತಿ ಆದ ದೀನ್ ದಯಾಳ್ ಉಪಾಧ್ಯರ ಜನ್ಮಶತಾಬ್ದಿಯ ವೇಳೆ ಇಲ್ಲಿ ಬಿಜೆಪಿಯ ಸಮ್ಮೇಳನಡೆಯುತ್ತಿದ್ದು, ಕಳೆದ ಜೂನ್‌ನಲ್ಲಿ ಅಲಹಾಬಾದ್‌ನಲ್ಲಿ ಸೇರಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ತಳೆಯಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.
ಸಮ್ಮೇಳನಲ್ಲಿ ಭಾಗವಹಿಸಲು ಈಗಾಗಲೇ ಪಕ್ಷದ ಅಧ್ಯಕ್ಷ ಅಮಿತ್‌ಶಾ ಆಗಮಿಸಿದ್ದಾರೆ. ಅವರುಬೆಳಗ್ಗೆ ಒಂಬತ್ತು ಗಂಟೆಗೆ ನಡೆಯಲಿರುವ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳ ಸಭೆಯ ಅಧ್ಯಕ್ಷೆತೆ ವಹಿಸಲಿದ್ದಾರೆ. ಸಮ್ಮೇಳನದ ಅಜೆಂಡಾ, ಠರಾವುಗಳು ಮುಂತಾದ ವಿಷಯಗಳಿಗೆ ಅಂತಿಮ ರೂಪ ನೀಡಲಿದ್ದಾರೆ. ಶನಿವಾರ ಮಧ್ಯಾಹ್ನ ಪ್ರಧಾನಿ ಕೋಝಿಕ್ಕೊಡ್‌ಗೆ ಬರಲಿದ್ದಾರೆ.ಮೂರು ಗಂಟೆಗೆ ನಡೆಯುವ ಸಾರ್ವಜನಿಕ ಸಮ್ಮೇಳನದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.