ಗಂಗಾನದಿಯ ದಡದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 315 ಕೋ.ರೂ.ಬಿಡುಗಡೆ

Update: 2016-09-23 15:04 GMT

ಹೊಸದಿಲ್ಲಿ,ಸೆ.23: ಗಂಗಾನದಿಯ ದಡದಲ್ಲಿ ಶೌಚಾಲಯಗಳ ನಿರ್ಮಾಣಕ್ಕಾಗಿ ಕೇಂದ್ರ ಜಲ ಸಂಪನ್ಮೂಲ,ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯವು 315 ಕೋ.ರೂ.ಗಳನ್ನು ಬಿಡುಗಡೆಗೊಳಿಸಿದೆ.
2016-17ನೇ ಸಾಲಿನಲ್ಲಿ ಸ್ವಚ್ಛ ಭಾರತ ಅಭಿಯಾನ(ಗ್ರಾಮೀಣ)ದಡಿ ಕ್ರಿಯಾ ಯೋಜನೆಯಂತೆ ಶೌಚಾಲಯಗಳ ನಿರ್ಮಾಣಕ್ಕಾಗಿ ಸಚಿವಾಲಯವು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಕ್ಕೆ ಹಣವನ್ನು ಬಿಡುಗಡೆಗೊಳಿಸಿದೆ. ಸಚಿವಾ ಲಯವು ಈ ಉದ್ದೇಶಕ್ಕಾಗಿ ಹಿಂದಿನ ಹಣಕಾಸು ವರ್ಷದಲ್ಲಿ 263 ಕೋ.ರೂ. ಬಿಡುಗಡೆಗೊಳಿಸಿತ್ತು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
 ಈ ಯೋಜನೆಯಡಿ ಈವರೆಗೆ 14,500 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News