ಕಲಿಕೆ ಮುಗಿದರೆ ನೀವೂ ಮುಗಿದಂತೆ!

Update: 2016-09-24 18:31 GMT

ಕಲಿಕೆ ಎಂದಿಗೂ ಮುಗಿಯುವುದಿಲ್ಲ. ಆದರೆ ನಿಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲವು ವಿಧಾನಗಳಿವೆ. ಇಲ್ಲಿದೆ ಕೆಲವು ವಿವರಗಳು.

ಚಿತ್ತ ಚಾಂಚಲ್ಯವಾಗಲು ಬಿಡಬೇಡಿ

ನೀವು ಓದುತ್ತಿದ್ದರೆ ಎಲ್ಲಾ ರೀತಿಯಲ್ಲೂ ಗಮನ ಬೇರೆಡೆಗೆ ಹರಿಯದಂತೆ ಖಾತರಿಯಿರಲಿ. ಸಂಗೀತವನ್ನು ಆಫ್ ಮಾಡಿ. ಮೊಬೈಲ್ ಸಂದೇಶ ಬೇಡ, ಸಾಮಾಜಿಕ ಮಾಧ್ಯಮಗಳನ್ನು ಪರಿಶೀಲಿಸಬೇಡಿ. ನೀವು ಪೂರ್ಣವಾಗಿ ನಿಮ್ಮ ಮುಂದಿರುವ ವಿಷಯದ ಮೇಲೆ ಗಮನಹರಿಸಿ. ಸಂಗೀತ ಕೇಳುತ್ತಾ, ಸ್ನೇಹಿತರ ಜೊತೆ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯುಸಿಯಾಗಿ ಏನೂ ಕಲಿಯಲು ಸಾಧ್ಯವಿಲ್ಲ. ಕೆಲವು ವಿದ್ಯಾರ್ಥಿಗಳು ಬಹಳಷ್ಟು ಓದಿದರೂ ಗಮನ ಬೇರೆಡೆಗೆ ಕೇಂದ್ರೀಕರಿಸುವ ಕಾರಣ ಏನನ್ನೂ ಕಲಿಯುವುದಿಲ್ಲ.

ಜಗತ್ತಿಗೆ ನೆರವಾಗುವ ದಾರಿ ಹುಡುಕಿ

ನಮ್ಮ ಜಗತ್ತು ಇಂದು ಪ್ರತಿಯೊಬ್ಬರಿಗೂ ಅವಕಾಶ ಕೊಡುವುದರಲ್ಲಿ ಮುಂದು. ಡಿಜಿಟಲ್ ತಂತ್ರಜ್ಞಾನ ಮತ್ತು ಆಧುನಿಕ ಸಂಪರ್ಕ ವ್ಯವಸ್ಥೆ, ಕಲ್ಪನೆಗಳು ಮತ್ತು ಉತ್ಪನ್ನಗಳನ್ನು ಹಿಂದೆಂದಿಗಿಂತಲೂ ವೇಗವಾಗಿ ಹರಡಬಹುದು. ಸರಿಯಾದ ಕಲ್ಪನೆಗಳು ಮತ್ತು ಉತ್ತಮವಾಗಿ ಅದನ್ನು ಅಳವಡಿಸುವ ಮೂಲಕ ಯಾವುದೇ ವ್ಯಕ್ತಿಯೂ ತ್ವರಿತವಾಗಿ ಸಹಾಯ ಮಾಡಬಹುದು. ಹೀಗಾಗಿ ಸ್ವತಃ ಪ್ರಶ್ನಿಸಿಕೊಳ್ಳಿ. ನಿಮ್ಮ ಕನಸುಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಸಾಧ್ಯವೆ? ಇಲ್ಲದಿದ್ದರೆ ಇನ್ನೇನಾದರೂ ವಿಷಯ ಆರಿಸಿಕೊಂಡು ಕೆಲಸ ಮಾಡಿ.

ಪ್ರಶ್ನೆಗಳನ್ನು ಕೇಳಿಕೊಳ್ಳಿ

ವಿದ್ಯಾರ್ಥಿಯಾಗಿ ಸಾಕಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳಿ. ನೀವೇಕೆ ವಿದ್ಯಾಭ್ಯಾಸ ಮಾಡುತ್ತಿದ್ದೀರಿ ಎಂದು ಸ್ವತಃ ಪ್ರಶ್ನಿಸಿಕೊಳ್ಳಿ. ನಿಮ್ಮ ವಾಸ್ತವಿಕ ಜೀವನದ ಜತೆಗೆ ಅದನ್ನು ಹೋಲಿಸಿಕೊಳ್ಳಿ. ನಿಜವಾದ ಜೀವನದ ಉದಾಹರಣೆಗಳನ್ನು ಪಡೆಯಿರಿ. ಇದೆಲ್ಲ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಕುರುಡಾಗಿ ನೆನಪಿಟ್ಟುಕೊಳ್ಳಲು ಹೋಗಬೇಡಿ. ದೃಶ್ಯರೂಪದಲ್ಲಿ ಕಲ್ಪಿಸಿಕೊಂಡು ನೆನಪಿಸಿ. ಭೌತಶಾಸ್ತ್ರವಾಗಿದ್ದಲ್ಲಿ ಪ್ರಯೋಗಿಸಿ ನೋಡಿ.

ತರಗತಿಯಲ್ಲಿ ಪ್ರೇರಣೆಗೆ ಕಾಯಬೇಡಿ

ಬಹಳಷ್ಟು ವಿಶ್ವವಿದ್ಯಾಲಯದ ತರಗತಿಗಳು ಒಂದು ಕಾಲದಲ್ಲಿ ಒಬ್ಬ ವ್ಯಕ್ತಿ ಮುಖ್ಯ ಮತ್ತು ಉತ್ತಮ ಎಂದು ಪರಿಗಣಿಸಿದ ಪಠ್ಯಗಳನ್ನು ಹೊಂದಿರುತ್ತವೆ. ನಿಮ್ಮ ಈಗಿನ ಪ್ರೊಫೆಸರ್ ಅದನ್ನೇ ತಿಳಿದಿರಬಹುದು. ಹಾಗಿದ್ದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ. ಮೆಟೀರಿಯಲ್ ಕಡೆಗೆ ನೋಡಿ ಮತ್ತು ಅದು ಏಕೆ ಉತ್ತಮ ಎಂದು ಪರಿಶೀಲಿಸಿ. ಆ ರೀತಿಯಲ್ಲಿ ಅದನ್ನು ನೋಡಿ. ಆಗ ನಿಮಗೆ ಅದೇ ಮೆಟೀರಿಯಲ್‌ನಲ್ಲಿ ಕಲಿಕೆಗೆ ವಸ್ತು ವಿಷಯ ಸಿಗುತ್ತದೆ ಮತ್ತು ಅದರಲ್ಲಿ ಇನ್ನಷ್ಟು ಖುಷಿ ಸಿಗಲಿದೆ.

ನೆಟ್‌ವರ್ಕ್

ಎಲ್ಲಾ ತರಗತಿಗಳಿಗಿಂತಲೂ ಉತ್ತಮ ಸ್ನೇಹಿತರು ಅಗತ್ಯ. ಬಹಳಷ್ಟು ಸ್ನೇಹಿತರನ್ನು ಬೆಳೆಸಿ. ಭವಿಷ್ಯದ ಯಶಸ್ಸಿಗೆ ಅವರು ಸಹಕಾರ ನೀಡಲಿದ್ದಾರೆ. ನೀವು ಶಾಲೆಯಲ್ಲಿ ಮಾಡುವ ಸ್ನೇಹಿತರು ಮ್ಯಾನೇಜರ್, ಉದ್ಯಮಿಗಳಾಗಿ ಭವಿಷ್ಯದಲ್ಲಿ ನಿಮಗೆ ನೆರವಾಗಬಹುದು. ನಿಮಗೆ ಉದ್ಯೋಗದ ಅಗತ್ಯವಿದ್ದಾಗ ಅವರ ನೆರವು ಸಿಗಬಹುದು. ಸ್ನೇಹಿತರು ಭವಿಷ್ಯದಲ್ಲಿ ಲಾಭ ತರುವ ದೊಡ್ಡ ಆಸ್ತಿ.

ಪದವಿ ಮೇಲೆ ನಂಬಿಕೆ ಬೇಡ

ಪದವಿ ಮೇಲೆ ಹೆಚ್ಚು ನಂಬಿಕೆ ಬೇಡ. ಅದು ನಿಮ್ಮ ಭವಿಷ್ಯಕ್ಕೆ ಪ್ರಸ್ತುತವೆನಿಸಿದರೂ ಅದು ಸಂಪೂರ್ಣ ಭಿನ್ನವಾದ ಉದ್ಯಮದ ಕಡೆಗೆ ನಿಮಗೆ ಕರೆದೊಯ್ಯಲಿದೆ. ಕಲಿಕೆ ಮುಂದುವರಿಸಿ. ಕೋರ್ಸ್‌ಗಳು, ಓದು ಮತ್ತು ಪುಸ್ತಕದಿಂದ ದೂರವಾಗಬೇಡಿ. ಕಠಿಣ ಶ್ರಮ ಹಾಕಿ ಜಾಣತನ ತೋರಿಸಿ. ಗುರಿಯೆಡೆಗೆ ಮುನ್ನುಗ್ಗಿ ಮತ್ತು ಸಮಯ ವ್ಯರ್ಥ ಮಾಡಬೇಡಿ. ಸಮಯವೇ ಒಂದು ಸಂಪನ್ಮೂಲ.

ಸ್ವತಃ ಮತ್ತೊಬ್ಬರಿಗೆ ಹೋಲಿಕೆ ಬೇಡಿ

ಪ್ರತೀ ವ್ಯಕ್ತಿಗಳೂ ವಿಶಿಷ್ಟವಾಗಿರುತ್ತಾರೆ ಮತ್ತು ಅವರದ್ದೇ ಉದ್ದೇಶ ಹೊಂದಿರುತ್ತಾರೆ. ನಿಮ್ಮ ಜೀವನವನ್ನು ಇತರರಿಗೆ ಹೋಲಿಸಿಕೊಳ್ಳಬೇಡಿ. ಬದಲಾಗಿ ನಿಮ್ಮ ಜೀವನವನ್ನು ನಿಮ್ಮದೇ ಇತಿಹಾಸಕ್ಕೆ ಹೋಲಿಸಿ. ನೀವು ಸುಧಾರಿಸಿದ್ದೀರೇ ಎಂದು ಪ್ರಶ್ನಿಸಿಕೊಳ್ಳಿ.

ಸ್ಪಷ್ಟ ಗುರಿ ಮತ್ತು ಕಾರ್ಯತಂತ್ರವಿರಲಿ

ಸ್ಪಷ್ಟವಾದ ಗುರಿ ಅಗತ್ಯ. ನಿಮಗೇನು ಬೇಕು ಎಂದು ಗೊತ್ತಿರಬೇಕು. ನಿಮಗೇನು ಬೇಕು ಎಂದು ಗೊತ್ತಿದ್ದಾಗ ಅದನ್ನು ಪಡೆಯುವುದು ಹೇಗೆ ಎನ್ನುವುದೂ ತಿಳಿಯುತ್ತದೆ. ಆಳವಾಗಿ ಯೋಚಿಸುವ ಮೂಲಕ ನೀವು ಪಡೆದ ಮಾಹಿತಿಯನ್ನು ಹೇಗೆ ಕಾರ್ಯತಂತ್ರವಾಗಿ ರೂಪಿಸುವುದು ಎಂದು ತಿಳಿದಿರಬೇಕು. ಕಾರ್ಯತಂತ್ರ ಒಂದು ಯೋಜನೆಯಲ್ಲ. ಯೋಜನೆಗಳನ್ನು ಕಾರ್ಯಸೂಚಿಯಾಗಿ ಮುಂದಿಡಲಾಗುತ್ತದೆ. ಕಾರ್ಯತಂತ್ರ ಬಹು ಆಯಾಮದ ಯೋಜನೆಯಾಗಿ ಮಾಹಿತಿಯ ಆಧಾರದಲ್ಲಿ ನಿರ್ಮಾಣವಾಗಿರುತ್ತದೆ. ದಾರಿಯಲ್ಲಿ ಬರುವ ಸವಾಲುಗಳಿಗೆ ಪ್ರತಿಕ್ರಿಯಿಸುತ್ತಾ ಹೋಗುತ್ತದೆ.

ಕಲಿಯಲು ಸಿದ್ಧವಿರಿ

ಯಾರೇ ಆಗಿದ್ದರೂ, ವಯಸ್ಸು, ಅನುಭವ, ಶಿಕ್ಷಣದ ಬೇಧವಿಲ್ಲದ ಒಳ್ಳೆಯದನ್ನು ಕಲಿಯಿರಿ.

ಕೃಪೆ: http://www.businessinsider.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News