ಇನ್ನು ಅಮ್ಮ ಉಚಿತ ವೈಫೈ!
ಚೆನ್ನೈ, ಸೆ.24: ತಮಿಳ್ನಾಡಿನಲ್ಲಿ ಇನ್ನು ಉಚಿತ ಇಂಟರ್ ನೆಟ್ ಅಮ್ಮ ನೀಡಲಿದ್ದಾರೆ. ಅಂದರೆ ಐವತ್ತು ಸ್ಥಳಗಳಲ್ಲಿ ಅಮ್ಮ ಉಚಿತ ವೈಫೈ ಝೋನ್ಗಳನ್ನು ಆರಂಭಿಸಲಾಗುವುದು ಎಂದು ವರದಿಯಾಗಿದೆ. ಅಣ್ಣಾ ಡಿಎಂಕೆಯ ಪ್ರಧಾನ ಚುನಾವಣಾ ಭರವಸೆ ಇದಾಗಿದ್ದು. ಬಸ್ ಟರ್ಮಿನಸ್, ವ್ಯಾಪಾರ ಸಮುಚ್ಚಯಗಳು, ಪಾರ್ಕುಗಳಲ್ಲಿ, ಹೈಯರ್ ಸೆಕಂಡರಿ ಶಾಲೆಗಳಲ್ಲಿ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಐವತ್ತು ಶಾಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕಾಗಿ ಹತ್ತುಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದೆ.
ಶೋಲಿಂಗನೆಲ್ಲೂರಿನ ಎಲ್ಕೋಟ್ಟ್ ವಿಶೇಷ್ ಆರ್ಥಿಕ ವಲಯದಲ್ಲಿ ಎಂಬತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಐಟಿ ಕಾಂಪ್ಲೆಕ್ಸ್ ನಿರ್ಮಿಸಲು ಮುಖ್ಯಮಂತ್ರಿ ಜಯಲಲಿತಾ ನಿರ್ದೇಶ ನೀಡಿದ್ದಾರೆ. ಇಲ್ಲಿಂದ ಸಾಫ್ಟ್ವೇರ್ ರಫ್ತು ಶೇ. 25ರಷ್ಠು ಹೆಚ್ಚಳ ಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಜಯಲಲಿತಾ ಕೈಗೆತ್ತಿಕೊಂಡಿದ್ದಾರೆ. 650 ರಿಜಿಸ್ಟ್ರೇಶನ್ ಕೇಂದ್ರಗಳನ್ನು ಆರಂಭಿಸಲು 25 ಕೋಟಿರೂಪಾಯಿಯನ್ನು ಮೀಸಲಿರಿಸಲಾಗಿದೆ ಎಂದು ವರದಿಯಾಗಿದೆ.