ರವಿಚಂದ್ರನ್ ಜತೆ ನಟಿಸುವಾಗ ನರ್ವಸ್ ಆಗಿದ್ದೆ!

Update: 2016-09-24 10:32 GMT

ಮಂಗಳೂರು, ಸೆ.24: ‘‘ಸ್ಯಾಂಡಲ್‌ವುಡ್‌ನ ಕ್ರೇಝಿ ಸ್ಟಾರ್ ರವಿಚಂದ್ರನ್ ಎದುರು ನಟಿಸಲು ನಿಜಕ್ಕೂ ನರ್ವಸ್ ಆಗಿತ್ತು. ಆದರೆ, ಅವರು ನನ್ನ ಜತೆ ಅತ್ಯಂತ ವಿನಯ ಹಾಗೂ ಆತ್ಮೀಯತೆಯಿಂದ ನನ್ನಲ್ಲಿ ಧೈರ್ಯ ತುಂಬುವ ಮೂಲಕ ಸ್ಫೂರ್ತಿ ನೀಡಿದರು. ಅವರ ಜತೆಗಿನ ನಟನೆ ಅದ್ಭುತ ಅನುಭವ’’.

ಹೀಗೆಂದು ರವಿಚಂದ್ರನ್ ಬಗ್ಗೆ ದಿಟ್ಟವಾದ ಮಾತುಗಳನ್ನಾಡುತ್ತಾರೆ ಮುಂಗಾರು ಮಳೆ- 2 ಚಿತ್ರದ ಬೆಡಗಿ ನೇಹಾ ಶೆಟ್ಟಿ. ಮಂಗಳೂರು ಮೂಲದ 19ರ ಹರೆಯದ ನೇಹಾ ಶೆಟ್ಟಿ ನಟನೆಯಲ್ಲಿ ಮಾತ್ರವಲ್ಲ, ಮಾತುಗಾರಿಕೆಯಲ್ಲೂ ಯಾವುದೇ ಅಳುಕಿಲ್ಲ. ಕನ್ನಡ, ತುಳು, ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ, ಪ್ರಬುದ್ಧವಾಗಿ ಮಾತನಾಡುವ ನೇಹಾ, ಮಂಗಳೂರಿನ ಬೆಡಗಿ, ಬೆಂಗಳೂರಿನಲ್ಲಿ ಬಿಸಿಎ ಓದುತ್ತಿರುವ ವಿದ್ಯಾರ್ಥಿನಿ ಕೂಡಾ.
ನಗರದ ಸಿಟಿ ಸೆಂಟರ್‌ನ ಸಿನೆಪೊಲೀಸ್‌ನಲ್ಲಿ ಶನಿವಾರ, ಶರ್ಮಿಳಾ ದೇವದಾಸ್ ಕಾಪಿಕಾಡ್ರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 
ಮಿಸ್ ಮಂಗಳೂರು ನನಗೆ ಈ ಅವಕಾಶ ನೀಡಿತು!
2014ರ ಮಿಸ್ ಮಂಗಳೂರು ಆಗಿರುವ ನೇಹಾ ಶೆಟ್ಟಿಗೆ ಈ ಪಟ್ಟವೇ ಈ ಅವಕಾಶ ಪಡೆಯಲು ಕಾರಣವಂತೆ.
‘‘ನಾನು 12ನೆ ತರಗತಿಯಲ್ಲಿರುವಾಗಲೇ ನನಗೆ ಸಿನೆಮಾದಲ್ಲಿ ನಟಿಸುವ ಅವಕಾಶ ದೊರೆಯುತಿ. ಮುಂಗಾರು ಮಳೆ 2ರಲ್ಲಿ ಮುಂಗಾರು ಮಳೆಯ ಮಳೆ ಹುಡುಗಿಗೆ ವಿಶೇಷ ಸ್ಥಾನವಿತ್ತು. ಆ ಸ್ಥಾನವನ್ನು ನಾನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ನಾನು ಇತರರನ್ನು ನೋಡಿಯೇ ನಟನೆಯನ್ನು ಕಲಿತಿದ್ದೇನೆಯೇ ಹೊರತು, ನಟನಾ ತರಬೇತಿಯನ್ನು ಪಡೆದಿಲ್ಲ. ಮಾಡೆಲಿಂಗ್ ನನ್ನ ಹವ್ಯಾಸವಾಗಿತ್ತು. ಅದನ್ನೀಗ ನಿಲ್ಲಿಸಿದ್ದೇನೆ’’ ಎಂದು ಮಾತನಾಡುತ್ತಾ ಸಾಗುವ ನೇಹಾ ಶೆಟ್ಟಿಗೆ ಯಾವುದೇ ನಿರ್ದಿಷ್ಠ ಪಾತ್ರಗಳಲ್ಲಿ ಅಭಿನಯಿಸಬೇಕೆಂಬ ಹಂಬಲವಿಲ್ಲ. ತಾನೀಗ ಚಲನಚಿತ್ರ ಕ್ಷೇತ್ರಕ್ಕೆ ಹೊಸಬಳಾಗಿರುವ ಕಾರಣ ಎಲ್ಲಾ ಪಾತ್ರಗಳನ್ನೂ ಮಾಡ ಬಯಸುತ್ತೇನೆ ಎನ್ನುತ್ತಾರೆ.
ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ಸಂದರ್ಭ ನಾನು ಚಿಕ್ಕವಳಾಗಿದ್ದೆ. ಅದರಲ್ಲಿ ಮೊಲ ನನಗೆ ತುಂಬಾ ಇಷ್ಟವಾಗಿತ್ತು. ಇದೀಗ ನನ್ನ ಮೊದಲ ಚಿತ್ರದಲ್ಲೆಗೋಲ್ಡನ್ ಸ್ಟಾರ್ ಜತೆ ನಟಿಸುವ ಅವಕಾಶ ದೊರಕಿದೆ. ಮುಂದೆಯೂ ಚಿತ್ರದಲ್ಲಿ ನಟಿಸಬೇಕೆಂದಿದ್ದೇನೆ. ಈಗಾಗಲೇ ಹಲವಾರು ಆಫರ್‌ಗಳು ಬಂದಿವೆ. ಆದರೆ, ನನ್ನ ಪ್ರಥಮ ಚಿತ್ರದ ಬಗ್ಗೆ ನಾನು ಬಹಳಷ್ಟು ಕುತೂಹಲಿಯಾಗಿದ್ದೇನೆ. ಹಾಗಾಗಿ ಬಂದಿರುವ ಆಫರ್‌ಗಳನ್ನು ಇನ್ನೂ ಒಪ್ಪಿಕೊಂಡಿಲ್ಲ. ತುಳು ಚಿತ್ರದಲ್ಲೂ ನಟಿಸುವ ಆಸೆ ಇದೆ. ಅವಕಾಶ ಸಿಕ್ಕರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ ಎಂದು ನೇಹಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News