ದಿಲ್ಲಿಯ ರಸ್ತೆಬದಿ ಪಾಕ್ ವಿರೋಧಿ ಪೋಸ್ಟರ್: ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಲು ಕರೆ

Update: 2016-09-24 10:47 GMT

ಹೊಸದಿಲ್ಲಿ, ಸೆಪ್ಟಂಬರ್ 24: ರಾಜಧಾನಿ ದಿಲ್ಲಿಯಲ್ಲಿ ಶುಕ್ರವಾರ ಪಾಕಿಸ್ತಾನ ವಿರೊಧಿ ಪೋಸ್ಟರ್‌ಗಳು ಕಂಡು ಬಂದಿವೆ. ಪೋಸ್ಟರ್‌ನಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದುಘೋಷಿಸಲು ಭಾರತದ ಸಂಸತ್ತನ್ನುವಿನಂತಿಸಲಾಗಿದೆ. ಹಾಗೂ ಇತ್ತೀಚೆಗೆ ಉರಿಯಲ್ಲಿ ನಡೆದಿರುವ ಭಯೋತ್ಪಾದನಾ ದಾಳಿಯನ್ನು ಖಂಡಿಸಲಾಗಿದೆ. ಇನ್ನೊಂದು ಕಡೆ ಪಾಕಿಸ್ತಾನದ ದೂತವಾಸದ ಮುಂದೆ ಆಲ್ ಇಂಡಿಯ ರಾಜೀವ್‌ಗಾಂಧಿ ಕ್ರಾಂತಿಕಾರಿ ಪಾರ್ಟಿಪ್ರತಿಭಟನೆ ನಡೆಸಿದೆಎಂದು ವರದಿಯಾಗಿದೆ.

ಎನ್‌ಡಿಎಸ್‌ಎಂ ಪ್ರದೇಶದ ಹೆಚ್ಚಿನ ಪ್ರಮುಖ ರಸ್ತೆಗಳ ಬದಿ ಪಾಕಿಸ್ತಾನ ವಿರೋಧಿ ಪೋಸ್ಟರ್ ಹಚ್ಚಲಾಗಿದ್ದು. ಪ್ರವೀಣ್ ಶಂಕರ್ ಎಂಬವರ ಹೆಸರಿನಲ್ಲಿರುವ ಪೊಸ್ಟರ್‌ನಲ್ಲಿ ಪಾಕಿಸ್ತಾನಿ ಧ್ವಜವನ್ನು ಹರಿದಿರುವ ಚಿತ್ರವಿದೆ.

ಭಾರತದ ಸಂಸತ್ತಿನ ತುರ್ತು ಅಧಿವೇಶನ ಕರೆದು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕು ಎಂದು ಆಗ್ರಹಿಸಿಲಾಗಿದೆ. ಚಾಣಕ್ಯಪುರಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಮುಂದೆ ಪ್ರತಿಭಟನಾಕಾರರು ಉರಿ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಘೋಷಣೆ ಕೂಗಿದ್ದಾರೆ. ಉರಿಯಲ್ಲಾದ ದಾಳಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ತಾಜಾ ಉದಾಹರಣೆಯಾಗಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ಪಾಕಿಸ್ತಾನಕ್ಕೆ ಸಿಗಲಿದೆ ಎಂದು ಅವರು ಕೂಗುಹಾಕಿದ್ದಾರೆ.

ಪಾಕಿಸ್ತಾನದ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯನ್ನಾಗಿಸಬೇಕೆಂದು ಪ್ರತಿಭಟನಾನಿರತರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News