2019ರ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ 12 ಸೀಟು ಗಳಿಸಬೇಕು: ಅಮಿತ್‌ ಶಾ

Update: 2016-09-24 12:12 GMT

ಕೋಝಿಕ್ಕೋಡ್, ಸೆಪ್ಟಂಬರ್ 24: 2019ರಲ್ಲಿ ಲೋಕಸಭಾ ಚುನಾವಣೆಗೆ ಕೇರಳದಲ್ಲಿ ಈಗಲೇ ಅಂಕಣ ಸಿದ್ಧಪಡಿಸುವ ಕುರಿತು ಬಿಜೆಪಿಯಲ್ಲಿ ಚಿಂತನೆ ಆರಂಭವಾಗಿದೆ ಎಂದು ವರದಿಯಾಗಿದೆ. ಮುಂಬರುವ ಲೋಕಸಭಾಚುನಾವಣೆಯಲ್ಲಿ ಬಿಜೆಪಿ ಕೇರಳದಲ್ಲಿ ಹನ್ನೆರಡು ಸೀಟುಗಳನ್ನು ಪಡೆಯಬೇಕೆಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳ ರಾಜ್ಯದ ಬಿಜೆಪಿಯ ನಾಯಕರಿಗೆ ನಿರ್ದೇಶ ನೀಡಿದ್ದಾರೆ.

ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ತಯಾರಿಸಿ ಕೇಂದ್ರಕ್ಕೆ ನೀಡಬೇಕು. ಸಕ್ರಿಯ ರಾಜಕೀಯದಲ್ಲಿಲ್ಲದ ಪ್ರಮುಖರನ್ನೂ ಪರಿಗಣಿಸಬೇಕು. ಗೆಲ್ಲುವ ಸಾಧ್ಯತೆಯೇ ಇದರ ಮಾನದಂಡ ಆಗಿರಬೇಕು.ಅಭ್ಯರ್ಥಿಗಳಾಗಲಿರುವವರು ಮೊದಲೇ ಆಯಾ ಕ್ಷೇತ್ರದತ್ತ ಗಮನ ಹರಿಸಬೇಕು ಎಂದು ಅಮಿತ್‌ಶಾ ಕೋಝಿಕ್ಕೋಡ್‌ನಲ್ಲಿ ನಡೆದ ಪಕ್ಷದ ಕೌನ್ಸಿಲ್ ಸಭೆಯಲ್ಲಿ ಕೇರಳ ಘಟಕಕ್ಕೆ ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News