×
Ad

ಉರಣ್‌ ನಲ್ಲಿ ಮೂವರು ಶಂಕಿತ ಉಗ್ರರು ಪೊಲೀಸರ ವಶಕ್ಕೆ

Update: 2016-09-24 18:31 IST

ಮುಂಬೈ, ಸೆ.24: ಮುಂಬೈ ಉರಣ್‌ ನಲ್ಲಿ ಮೂವರು ಶಂಕಿತ  ಉಗ್ರರನ್ನು ಮುಂಬೈ ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಉರಣ್‌ನಲ್ಲಿರುವ ನೌಕಾ ನೆಲೆ  ಸಮೀಪ ಸೇನಾ ಸಮವಸ್ತ್ರ ಧರಿಸಿದ ನಾಲ್ಕಕ್ಕೂ ಹೆಚ್ಚು ಜನರು ಅನುಮಾನಾಸ್ಪದವಾಗಿ ಗುರುವಾರ ಓಡಾಡುತ್ತಿದ್ದ ಬಗ್ಗೆ ಶಾಲಾ ಮಕ್ಕಳು  ಮಾಹಿತಿ ನೀಡಿದ್ದು, ಅದರಂತೆ ಮುಂಬೈ ಕರಾವಳಿ  ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ಪೊಲೀಸರು ಶಂಕಿತ ಮೂವರನ್ನು ಇಂದು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News