×
Ad

ಬುಗ್ತಿಗೆ ರಾಜಕೀಯ ಆಶ್ರಯಕ್ಕಾಗಿ ಹಕ್ಕು ಕಾರ್ಯಕರ್ತರಿಂದ ಕೇಂದ್ರಕ್ಕೆ ಆಗ್ರಹ

Update: 2016-09-24 19:15 IST

ಕೋಲ್ಕತಾ, ಸೆ.24: ಬಲೂಚಿಸ್ತಾನದ ಜನರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿರುವ ಕೋಲ್ಕತಾದ ಮಾನವ ಹಕ್ಕು ಕಾರ್ಯಕರ್ತರು, ಬಲೂಚ್ ನಾಯಕ ಬ್ರಹಂದಾಘ್ ಬುಗ್ತಿಯವರಿಗೆ ರಾಜಕೀಯ ಆಶ್ರಯ ನೀಡುವಂತೆ ಶುಕ್ರವಾರ ಭಾರತ ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಜಕೀಯ ಆಶ್ರಯ ಕೋರಿದ ಬಲೂಚ್ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷ ಹಾಗೂ ಸ್ಥಾಪಕ ಬ್ರಹಂದಾಘ್ ಬುಗ್ತಿಯವರ ಅರ್ಜಿಯು ನಿನ್ನೆ ಗೃಹ ಸಚಿವಾಲಯಕ್ಕೆ ತಲುಪಿದೆ. ಅದನ್ನು ಪರಿಶೀಲಿಸಲಾಗುತ್ತಿದೆಯೆಂದು ಸಚಿವಾಲಯ ಹೇಳಿದೆ.

ಈ ವಿಷಯವನ್ನು ವಿಶ್ವ ವೇದಿಕೆಗೊಯ್ದು, ಪಾಕಿಸ್ತಾನ ನಡೆಸುತ್ತಿರುವ ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆಯನ್ನು ಬಹಿರಂಗಗೊಳಿಸುವಂತೆಯೂ ಕಾರ್ಯಕರ್ತರು ಸರಕಾರವನ್ನು ಕೋರಿದ್ದಾರೆ.

ಬಲೂಚಿಸ್ತಾನದ ನಿವಾಸಿಗಳ ವಿರುದ್ಧ ಐಎಸ್‌ಐ ಹಾಗೂ ಅದರ ಜೊತೆಗಾರ ಸಂಘಟನೆಗಳು ನಡೆಸುತ್ತಿರುವ ಮಾನವ ಹತ್ಯೆ ಹಾಗೂ ಸಾರಾಸಗಟು ಮಾನವ ಹಕ್ಕು ಉಲ್ಲಂಘನೆಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಲು ತಾವು ಬಯಸುತ್ತಿದ್ದೇವೆಂದು ಆಲ್ ಇಂಡಿಯಾ ಲೀಗಲ್ ಏಯ್ಡಿ ಫೋರಂನ ಪ್ರಧಾನ ಕಾರ್ಯದರ್ಶಿ ಜಯದೀಪ್ ಮುಖರ್ಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News