×
Ad

ವಾಹನವಿಲ್ಲದೆ ತಂದೆಯ ಪಾರ್ಥಿವ ಶರೀರವನ್ನು ತಳ್ಳುಗಾಡಿಯಲ್ಲಿ ತಂದ ಯುವಕ

Update: 2016-09-25 11:17 IST

ಲಕ್ನೊ,ಸೆಪ್ಟಂಬರ್ 25: ಮೃತದೇಹಗಳ ಕುರಿತ ಅವಗಣನೆಯ ಅನುಭವಗಳು ಮುಂದುವರಿಯುತ್ತಿದೆ. ಉತ್ತರಪ್ರದೇಶದ ಪಿಲಿಬಿತ್‌ನಲ್ಲಿ ಆಸ್ಪತ್ರೆಯಲ್ಲಿಮೃತರಾದ ತನ್ನ ತಂದೆಯ ಪಾರ್ಥಿವಶರೀರವನ್ನು ಯುವಕನೊಬ್ಬ ತಳ್ಳುಬಂಡಿಯ ಸಹಾಯದಲ್ಲಿ ಮನೆಗೆ ತಂದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಎಪ್ಪತ್ತು ವರ್ಷದ ತುಳಸಿರಾಮ್‌ರ ಮೃತದೇಹವನ್ನು ಪುತ್ರ ಸೂರಜ್ ತಳ್ಳುಗಾಡಿಯಲ್ಲಿ ಕೊಂಡೊಯ್ಯತ್ತಿರುವ ದೃಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಫಿಲಿಬಿತ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ತುಳಸೀರಾಂ ನಿಧನರಾಗಿದ್ದರು. ಅವರನ್ನು ಅವರ ಪುತ್ರ ಸೂರಜ್ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆತಂದಿದ್ದನು. ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಗಂಟೆಗಳಾಗುವಷ್ಟರಲ್ಲಿ ತುಳಸೀರಾಂ ಇಹಲೋಕ ತ್ಯಜಿಸಿದ್ದರು.

ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇಲ್ಲದ್ದರಿಂದ ಸೂರಜ್ ತಂದೆಯ ಮೃತದೇಹವನ್ನು ತಳ್ಳುಗಾಡಿಯ ಸಹಾಯದಿಂದ ಮನೆಗೆ ತಂದಿದ್ದಾನೆ. ಆ್ಯಂಬುಲೆನ್ಸ್‌ಗಾಗಿ ಎಷ್ಟೇ ಫೋನ್ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಆತ ತಂದೆಯ ಮೃತದೇಹವನ್ನು ತಳ್ಳುಗಾಡಿಯಲ್ಲಿರಿಸಿ ಮನೆಗೆ ತಂದಿದ್ದಾನೆ, ಆದರೆ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಆರ್.ಸಿ ಶರ್ಮ ಆ್ಯಂಬುಲೆನ್ಸ್‌ನ್ನು ಮೃತರ ಸಂಬಂಧಿಕರು ಕೇಳಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಒರಿಸ್ಸಾ ಮತ್ತು ಉತ್ತರಪ್ರದೇಶದಲ್ಲಿ ಮೃತದೇಹವನ್ನು ಹೊತ್ತು ಸಾಗಿದ ಘಟನೆಗಳು ವರದಿಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News