ಶಿರವಸ್ತ್ರ ತೊರೆದರೆ ಕೆಲಸ: ನಾರ್ವೆಯಲ್ಲಿ ಭರವಸೆ

Update: 2016-09-25 06:15 GMT

ಓಸ್ಲೊ,ಸೆ.25: ನಾರ್ವೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಕೆಲಸ ನೀಡಬಹುದು. ಆದರೆ ಶಿರವಸ್ತ್ರವನ್ನು ಕಡ್ಡಾಯವಾಗಿ ತೆಗೆದಿರಿಸಬೇಕೆಂದು 21ವರ್ಷ ವಯಸ್ಸಿನ ಯುವತಿಯೊಬ್ಬರಿಗೆ ಮೊಬೈಲ್ ಫೋನ್‌ನಲ್ಲಿ ಅಪರಿಚಿತ ಸಂದೇಶ ರವಾನೆಯಾಗಿದೆ. ಆದರೆ ಮುಸ್ಲಿಂ ಯುವತಿ ಉದ್ಯೋಗ ಕೊಡುಗೆಯನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ಆಕೆ ತನ್ನ ವ್ಯಕ್ತಿತ್ವದ ಭಾಗವಾದ ಶಿರವಸ್ತ್ರವನ್ನು ತೆಗೆದಿರಿಸುವ ಸಲಹೆಯನ್ನು ಮಾತ್ರವಲ್ಲ ಕೆಲಸವನ್ನೂತಿರಸ್ಕರಿಸಿದ್ದಾರೆ. ಈಘಟನೆ ಕೆಲವು ನೋರ್ವೀಜಿಯನ್ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ತನ್ನನ್ನು ನಿರಾಶೆಗೊಳಪಡಿಸಿದೆ ಎಂದು ಯುವತಿ ಪ್ರತಿಕ್ರಿಯಿಸಿದ್ದಾರೆ. " ಎಲ್ಲ ನೋರ್ವೀಜಿಯನ್ ನಾಗರಿಕರಂತೆ ಅವಕಾಶಗಳು ಸಿಗಬೇಕೆಂದು ತನ್ನಲ್ಲಿ ನಿರೀಕ್ಷೆ ಇದೆ. ಆದರೆ ಇದು ನಿರಾಶೆ ತಂದಿದೆ ಮತ್ತು ಕೆಲಸ ಹುಡುಕುವ ಯತ್ನವನ್ನೂ ತೊರೆದಿದ್ದೇನೆ" ಎಂದು ಯುವತಿ ಹೇಳಿದ್ದಾರೆ. ನೋರ್ವೆಯಲ್ಲಿ ಇತ್ತೀಚೆಗೆ ಸಾಮುದಾಯಿಕ ತಾರತಮ್ಯ ಅಧಿಕಗೊಳ್ಳುತ್ತಿದ್ದು, ಈವರ್ಷ ಇಂತಹ 45 ದೂರುಗಳು ಕೇಳಿಬಂದಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News