ಅರ್ಜಿ ವಿಚಾರಣೆಗೆ ಅವಸರವಿಲ್ಲ: ಸುಪ್ರೀಂಕೋರ್ಟ್
Update: 2016-09-26 18:56 IST
ಹೊಸದಿಲ್ಲಿ,ಸೆ.26: ಭಾರತ-ಪಾಕ್ ನಡುವಿನ ಸಿಂಧು ಜಲ ಒಪ್ಪಂದವನ್ನು ಅಸಾಂವಿ ಧಾನಿಕವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಯನ್ನು ನಡೆಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿತು.
ಈ ವಿಷಯದಲ್ಲಿ ಅವಸರವೇನಿಲ್ಲ. ಅರ್ಜಿಯು ಕಾಲಕ್ರಮೇಣ ವಿಚಾರಣೆಗೆ ಬರುತ್ತದೆ ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ ಮತ್ತು ನ್ಯಾ.ಎ.ಎಂ.ಖನ್ವಿಲ್ಕರ್ ಅವರ ಪೀಠವು ಹೇಳಿತು.
ಸಂವಿಧಾನಕ್ಕನುಗುಣವಾಗಿ ಒಪ್ಪಂದಕ್ಕೆ ಸಹಿ ಬಿದ್ದಿಲ್ಲವಾದ್ದರಿಂದ ಅದು ಅಸಂವಿಧಾನಿ ಕವಾಗಿದೆ. ಹೀಗಾಗಿ ಅದನ್ನು ಅಸಿಂಧು ಎಂದು ಘೋಷಿಸಬೇಕು. ಆದ್ದರಿಂದ ತುರ್ತು ವಿಚಾರಣೆಯನ್ನು ನಡೆಸಬೇಕು ಎಂದು ಅರ್ಜಿದಾರರಾದ ವಕೀಲ ಎಂ.ಎಲ್.ಶರ್ಮಾ ಪ್ರತಿಪಾದಿಸಿದ್ದರು.