ಮಾಜಿ ಅಧಿಕಾರಿ ಬಿಕೆ ಬನ್ಸಾಲ್‌ ಮಗನೊಂದಿಗೆ ಆತ್ಮಹತ್ಯೆ

Update: 2016-09-27 06:38 GMT

ಹೊಸದಿಲ್ಲಿ , ಸೆ.27:  ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮಾಜಿ ಮಹಾನಿರ್ದೇಶಕ  ಬಿ ಕೆ ಬನ್ಸಾಲ್‌ ಅವರು ಮಂಗಳವಾರ  ತಮ್ಮ ಪುತ್ರನ ಜತೆಗೆ   ದಿಲ್ಲಿಯ ಮನೆಯಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಜುಲೈನಲ್ಲಿ ಬನ್ಸಾಲ್‌ ಅವರು  ಸಿಬಿಐನಿಂದ ಬಂಧಿಸಲ್ಪಟ್ಟ ಎರಡು ದಿನಗಳ ಬಳಿಕ ಬನ್ಸಾಲ್‌ ಅವರ ಪತ್ನಿ  ಸತ್ಯಬಾಲಾ ಬನ್ಸಾಲ್‌ ಹಾಗೂ ಪುತ್ರಿ ನೇಹಾ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದರು.  ಇದೀಗ "ಸಿಬಿಐ ದಾಳಿಯಿಂದ  ಆಗಿರುವ ಅವಮಾನವನ್ನು ಸಹಿಸಲು ಸಾಧ್ಯವಾಗುತಿಲ್ಲ” ಎಂದು ದೆತ್ ನೋಟ್‌ ಬರೆದಿಟ್ಟು ಬನ್ಸಾಲ್  ಅವರು ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜುಲೈ 16ರಂದು ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸಿಬಿಐ  ಬನ್ಸಾಲ್‌ರನ್ನು ಬಂಧಿಸಿತ್ತು.  ಸಿಬಿಐ ಅವರ ಮನೆಯನ್ನು ಶೋಧಿಸಿ‌ದ ಸಂದರ್ಭದಲ್ಲಿ ಅವರ ಮನೆಯಲ್ಲಿ 60 ಲಕ್ಷ ರೂ. ನಗದು, 20 ಆಸ್ತಿಪಾಸ್ತಿಗಳ ದಾಖಲೆ ಪತ್ರಗಳು ಹಾಗೂ 60 ಬ್ಯಾಂಕ್‌ ಖಾತೆ ಪುಸ್ತಕಗಳು ಪತ್ತೆಯಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News