ನ್ಯಾ. ಕಾಟ್ಜುಗೆ ನಿತೀಶ್ ತಿರುಗೇಟು
Update: 2016-09-28 11:51 IST
ಪಾಟ್ನ,ಸೆ. 28: ಬಿಹಾರವನ್ನು ತೆಗೆದುಕೊಳ್ಳುವುದಾದರೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬಹುದು ಎಂದು ಜಸ್ಟಿಸ್ ಮಾರ್ಕಂಡೇಯ ನ್ಯಾ. ಕಾಟ್ಜು ನೀಡಿದ್ದ ಹೇಳಿಕೆಯನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೀಕಿಸಿದ್ದಾರೆ. ಮನೆಯಲ್ಲಿ ಕುಳಿತು ಕೆಲವರು ರಾಜ್ಯದ ಸಂರಕ್ಷಕರಾಗಲು ಯತ್ನಿಸುತ್ತಿದ್ದಾರೆಂದು ಕಾಟ್ಜು ಹೆಸರನ್ನು ಉದ್ಧರಿಸದೆಯೇ ನಿತೀಶ್ ಗೆ ಟಾಂಗ್ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ಮನೆಗೂ ಶೌಚಾಲಯ ಮತ್ತು ಕುಡಿಯುವ ನೀರು ಯೋಜನೆ ಉದ್ಘಾಟನೆಯ ಸಂದರ್ಭದಲ್ಲಿ ಕಾಟ್ಜುರ ವಿವಾದಾತ್ಮಕ ಹೇಳಿಕೆಗೆ ನಿತೀಶ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕೆಲವು ಜನರು ಪತ್ರಿಕೆಗಳಲ್ಲಿ ಹೆಸರು ಬರಲಿಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ನಿತೀಶ್, ಬಿಹಾರದ ಗತ ಇತಿಹಾಸವನ್ನು ವಿವರಿಸಿದರು. ದೇಶದ ಸಂಪೂರ್ಣ ಪ್ರದೇಶಗಳನ್ನು ಒಳಗೊಂಡ ಮಗಧ ಸಾಮ್ರಾಜ್ಯದ ರಾಜಧಾನಿ ಬಿಹಾರದ ಪಾಟಲಿಪುತ್ರ(ಪಾಟ್ನ)ವಾಗಿತ್ತು ಎಂದು ಅವರು ನೆನಪಿಸಿದ್ದಾರೆ.