×
Ad

ಬೇಟಿ ಬಚಾವೋಗೆ ಈತನಿಗಿಂತ ಮಾದರಿ ಬೇಕೇ ?

Update: 2016-09-28 12:32 IST

ಹೈದರಾಬಾದ್, ಸೆ.28: ಆಂಧ್ರ ಪ್ರದೇಶದಾದ್ಯಂತ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಸಿರುವಂತೆಯೇ ಬಡ ವ್ಯಕ್ತಿಯೊಬ್ಬ ತನ್ನ ಜ್ವರಪೀಡಿತಪುಟ್ಟ ಹೆಣ್ಣು ಮಗಳನ್ನು ಆಸ್ಪತ್ರೆಗೆ ಸೇರಿಸಲು ಮಾಡಿದ ಸಾಹಸ ನಿಜವಾಗಿಯೂ  ಯಾರಾದರೂ ಮೆಚ್ಚುವಂತಹದ್ದೇ. ಆತ ಮಗುವನ್ನು ಕರೆದುಕೊಂಡು ಹೋದ ರೀತಿಯಂತೂ ಥೇಟ್ ಬಾಹುಬಲಿ ಚಿತ್ರದ ದೃಶ್ಯವೊಂದನ್ನು ನೆನಪಿಸುವಂತಿತ್ತು.

ವುೂವತ್ತಾರು ವರ್ಷದ ಪಂಗಿ ಸತಿಬಾಬುಚಿಂತಾಪಳ್ಳಿ ಮಂಡಲದ ಕುದುಮುಸರೆ ಗ್ರಾಮದವ. ಕಳೆದ ಕೆಲ ದಿನಗಳಿಂದ ಆತನ ಆರು ತಿಂಗಳಿನ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಜ್ವರ ಕಡಿಮೆಯಾಗುವ ಲಕ್ಷಣ ಕಾಣಿಸದೇ ಇದ್ದಾಗ ಆತ ನ್ನ ಗ್ರಾಮಕ್ಕೆ ಹತ್ತಿರದ, ಅಂದರೆಸುಮಾರು ಆರು ಕಿ.ಮೀ. ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಆತಆ ನೆರೆ ಹಾವಳಿಯಲ್ಲಿ ಹರಸಾಹಸವನ್ನೇ ಮಾಡಿದ. ತನ್ನ ಪುಟ್ಟ ಕಂದಮ್ಮನನ್ನು ತಲೆಯ ಮೇಲೆ ಹೊತ್ತು ಕುತ್ತಿಗೆ ತನಕ ನೀರು ತುಂಬಿದ್ದ ರಸ್ತೆಯಲ್ಲಿ ಸಾಗಿದ್ದ. ಆತನ ಮನೆ ಮಂದಿ ಹಾಗೂ ಸ್ನೇಹಿತರು ಇಂತಹ ಒಂದು ಅಪಾಯಕಾರಿ ಕಾರ್ಯಕ್ಕೆ ಕೈಹಾಕದಿರುವಂತೆ ಬೇಡಿದರೂ ಕೇಳದೆ, ತನ್ನ ಮುದ್ದು ಮಗುವನ್ನು ಆ ತಂದೆ ಕಷ್ಟ ಪಟ್ಟು ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಸಮಾಧಾನಪಟ್ಟುಕೊಂಡ. ಸರಕಾರದ ಬೇಟಿ ಬಚಾವೋ ಆಂದೋಲನಕ್ಕೆ ಈತನಿಗಿಂತ ಉತ್ತಮ ಮಾದರಿ ಬೇರೆ ಇದೆಯೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News