ತಂದೆತಾಯಿಯನ್ನು ಕಟ್ಟಿಹಾಕಿ 12 ವರ್ಷದ ಬಾಲಕಿಯ ಬರ್ಬರ ಅತ್ಯಾಚಾರ
ಲಕ್ನೊ,ಸೆ.28: ಉತ್ತರಪ್ರದೇಶದ ಲಕ್ನೊದಲ್ಲಿ ತಂದೆತಾಯಿಯನ್ನು ಕಟ್ಟಿಹಾಕಿ ಹನ್ನೆರಡು ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಾಲಕಿ ತನ್ನನ್ನು ಐವರು ಸೇರಿ ಅತ್ಯಾಚಾರ ಮಾಡಿದ್ದಾರೆಂದು ಪೊಲೀಸರಿಗೆ ತಿಳಿಸಿದ್ದಾಳೆ.ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಹನ್ನೆರಡು ಮಂದಿ ಮನೆಗೆ ನುಗ್ಗಿದ್ದು, ತನ್ನನ್ನು ಎತ್ತಿಒಯ್ಯಲು ಶ್ರಮಿಸಿದಾಗ ತಡೆಯಲು ಬಂದ ತಂದೆ ತಾಯಿಯರನ್ನು ಕಟ್ಟಿಹಾಕಿ ಮನೆಗೆ ಹತ್ತಿರವಿರುವ ಇನ್ನೊಂದು ಸ್ಥಳದಲ್ಲಿ ಐದು ಮಂದಿ ತನ್ನನ್ನು ಅತ್ಯಾಚಾರವೆಸಗಿದ್ದಾರೆ ಎಂದು ಪೀಡಿತಳಾದ ಬಾಲಕಿ ಹೇಳಿದ್ದಾಳೆ. ಬಾಲಕಿಯ ಮನೆಯಿಂದ ಎಂಟುನೂರು ಮೀಟರ್ ದೂರದಲ್ಲಿ ಅತ್ಯಾಚಾರ ಘಟನೆ ನಡೆದಿದೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನ್ಸಿಲ್ ಸೈನಿ ಹೇಳಿದ್ದಾರೆ. ಕಳೆದ ಜುಲೈಯಲ್ಲಿ ಉತ್ತರಪ್ರದೇಶದ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ತಾಯಿ ಮಗಳ ಅತ್ಯಾಚಾರಗೈದ ಘಟನೆ ನಡೆದಿತ್ತು. ಈ ಕೇಸಿನಲ್ಲಿ ಸುಪ್ರೀಂ ಕೋರ್ಟು ಮಧ್ಯಪ್ರವೇಶಿಸಿತ್ತು. ರಾಜಕೀಯ ವಿವಾದಗಳಿಗೂ ಕಾರಣವಾಗಿತ್ತು.
ಮಹಿಳೆಯರ ಮೇಲೆ ನಡೆಯುವ ಆಕ್ರಮಣಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ರಾಜ್ಯಸರಕಾರ ಆದೇಶಿಸಿದ್ದರೂ ಅತ್ಯಾಚಾರ ಘಟನೆಗಳು ಉತ್ತರಪ್ರದೇಶದಲ್ಲಿ ಮುಂದುವರಿಯುತ್ತಿದೆ ಎಂದು ವರದಿ ತಿಳಿಸಿದೆ.