ಸರ್ವಪಕ್ಷ ಸಭೆಯಲ್ಲಿ ಎಂಬಿ ಪಾಟೀಲ್-ಡಿವಿಎಸ್ ಜಟಾಪಟಿ
Update: 2016-09-28 14:43 IST
ಬೆಂಗಳೂರು, ಸೆ.28: ಕಾವೇರಿ ನದಿಯ ನೀರು ವಿವಾದಕ್ಕೆ ಸಂಬಂಧಿಸಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಮತ್ತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ನಡುವೆ ಜಟಾಪಟಿ ಕಂಡು ಬಂತು.
ಸಭೆಯಲ್ಲಿ ಎಲ್ಲರೂ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಚಿವ ಪಾಟೀಲ್ ಹೇಳಿದಾಗ ಸಚಿವ ಡಿವಿಎಸ್ ಕಿಡಿಕಿಡಿಯಾದರು.ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
"ನಮ್ಮ ಜವಾಬ್ದಾರಿಯ ಬಗ್ಗೆ ನೀವು ಹೇಳಬೇಡಿ. ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಭಾರತಿ ಅವರನ್ನು ಭೇಟಿಯಾಗಿ ಕಾವೇರಿ ನದಿ ನೀರು ವಿವಾದವನ್ನು ಬಗಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದೇವೆ ” ಎಂದು ಡಿವಿ ಅಬ್ಬರಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು "ಎಂಬಿ ಪಾಟೀಲರ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ "ಎಂದು ಡಿ.ವಿ ಸದಾನಂದ ಗೌಡ ಅವರನ್ನು ಸಮಧಾನ ಪಡಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.