×
Ad

ಮಕ್ಕಳಿಗೆ ಚಿತ್ರಹಿಂಸೆ ನೀಡುವ ಸ್ವಯಂ ಘೋಷಿತ ಮಾಂತ್ರಿಕ ಫಯಾಝ್ ಮಹಮೂದ್ ಬಂಧನ

Update: 2016-09-29 13:56 IST

ಹೈದರಾಬಾದ್, ಸೆ.29: ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಸ್ವಯಂಘೋಷಿತ ಮಾಂತ್ರಿಕ ಫಯಾಝ್

ಮಹಮೂದ್ ಅನ್ಸಾರಿ(38) ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ಮಾಟ ಮಂತ್ರ ನಡೆಯುತ್ತಿದ್ದ ಹಲವಾರು ಸ್ಥಳಗಳಿಗೆ ಪೊಲೀಸರು ದಾಳಿ ನಡೆಸಿ ಕನಿಷ್ಠ 16 ಮಂದಿ ನಕಲಿ ಮಾಂತ್ರಿಕರನ್ನು ಬಂಧಿಸಿದ್ದಾರೆ.

ತನ್ನ 12 ವರ್ಷದ ಪುತ್ರನನ್ನುಅಪಹರಿಸಿ ಆತನ ತಾಯಿಯನ್ನು ತಪ್ಪು ದಾರಿಗೆಳೆದು ಆಕೆಯ ಅನುಮತಿ ಪಡೆದು ಆತನಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ವ್ಯಕ್ತಿಯೊಬ್ಬ ದಾಖಲಿಸಿದ ದೂರಿನನ್ವಯ ಅನ್ಸಾರಿಯನ್ನು ಬಂಧಿಸಲಾಗಿದೆ. ಅನ್ಸಾರಿ ತನ್ನ ಪುತ್ರನನ್ನು ಕೊಲ್ಲಲೆತ್ನಿಸಿದ್ದನೆಂದೂ ಆ ವ್ಯಕ್ತಿ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
ಅನ್ಸಾರಿಯ ಮನೆಯಿಂದ ವಶಪಡಿಸಿಕೊಳ್ಳಲಾದ ಲ್ಯಾಪ್ ಟಾಪ್ ನಲ್ಲಿದ್ದ ಹಲವಾರು ವೀಡಿಯೋಗಳಲ್ಲಿ ಈ ನಕಲಿ ಮಾಂತ್ರಿಕ ಕುದಿಯುವ ನೀರನ್ನು ಮಗುವೊಂದು ಚೀತ್ಕರಿಸುತ್ತಿದ್ದಂತೆಯೇ ಆದರ ಕಾಲಿಗೆ ಸುರಿಯುತ್ತಿರುವ ದೃಶ್ಯಗಳಿವೆ. ಅಂತೆಯೇ ಮಗುವೊಂದರ ಕಿವಿಗೆ ಚುಚ್ಚುವುದು ಹಾಗೂ ಇನ್ನೊಬ್ಬ ನಗ್ನ ಬಾಲಕನನ್ನು ಕುರ್ಚಿಯೊಂದಕ್ಕೆಕಟ್ಟಿ ಹಾಕಿರುವ ವೀಡಿಯೋಗಳೂ ಕಂಡು ಬಂದಿವೆ.
ದೂರು ನೀಡಿದಾತನಪುತ್ರನ ದೇಹದ ವಿವಿಧ ಭಾಗಗಳಿಗೆ ಬ್ಲೇಡ್ನಿಂದ ಗೀರಿ ಗಾಯ ಮಾಡುವಾಗ ಆತನನ್ನು ಹಲವಾರು ಗಂಟೆಗ ಕಾಲ ನಗ್ನವಾಗಿರುವಂತೆ ಮಾಡಿದಾಗ ಬಾಲಕನ ತಾಯಿ ಅಲ್ಲಿಯೇ  ಇದ್ದಳೆಂದು ಹೇಳಲಾಗುತ್ತಿದೆ. ಆಕೆಯ ಪುತ್ರನ ಮೈಮೇಲೆ ದೆವ್ವ ಬಂದಿದೆಯೆಂದು ಮಾಂತ್ರಿಕ ಆಕೆಯನ್ನು ನಂಬಿಸುವಲ್ಲಿ ಸಫಲನಾಗಿದ್ದ.
ಅನ್ಸಾರಿಯ ಲ್ಯಾಪ್ ಟಾಪ್ ನಲ್ಲಿ ಕನಿಷ್ಠ 30 ವೀಡಿಯೋಗಳಿದ್ದು, ಅವುಗಳಲ್ಲಿ ಒಬ್ಬಳು ಬಾಲಕಿಯನ್ನುಕೂಡ ಆತ ಶೋಷಿಸಿದ ದೃಶ್ಯಗಳಿವೆ. ಮಕ್ಕಳ ಮೈಗೆ ಸೂಜಿಯಿಂದ ಚುಚ್ಚಿ, ಬಿಸಿ ಮೇಣವನ್ನು ಅವರ ಖಾಸಗಿ ಭಾಗಗಳಿಗೆ ಸುರಿದು ಅವರಿಗೆ ಹಿಂಸೆ ನೀಡಲಾಗಿರುವುದು ಕಂಡುಬಂದಿದೆಯೆಂದ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಹೈದರಾಬಾದ್ ನಗರಕ್ಕೆ ನಾಲ್ಕು ವರ್ಷಗಳ ಹಿಂದೆ ಬಂದಿದ್ದ ಅನ್ಸಾರಿ ಹಲವಾರು ಮುಗ್ಧ ಹೆಂಗಸರನ್ನು ನಂಬಿಸಿ ಶೋಷಿಸಿದ್ದನಲ್ಲದೆ ಕೆನಡಾ, ಸೌದಿ ಅರೇಬಿಯಾ, ದುಬೈ ಹಾಗೂ ಕತಾರ್ ನಲ್ಲಿರುವ ಅನಿವಾಸಿ ಭಾರತೀಯರನ್ನೂ ಆನ್ ಲೈನ್ ಕೌನ್ಸೆಲಿಂಗ್ ಹೆಸರಿನಲ್ಲಿ ವಂಚಿಸಿದ್ದನೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News