ಲಂಚ ಪಡೆಯುವಾಗ ಸಿಕ್ಕಿ ಬಿದ್ದ ನ್ಯಾಯಾಧೀಶೆಯ ಬಂಧನ
Update: 2016-09-29 17:17 IST
ಹೊಸದಿಲ್ಲಿ, ಸೆ. 29 : ವಕೀಲರೊಬ್ಬರಿಂದ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದರೆನ್ನಲಾದ ಸಂದರ್ಭದಲ್ಲಿ ಇಲ್ಲಿನ ತೀಸ್ ಹಝಾರಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರೊಬ್ಬರನ್ನು ಸಿಬಿಐ ಬಂಧಿಸಿದೆ.
ಬಂಧಿತ ನ್ಯಾಯಾಧೀಶರನ್ನು ರಚನಾ ತಿವಾರಿ ಲಖನ್ ಪಾಲ್ ಎಂದು ಹೇಳಲಾಗಿದೆ. ತಾನು ಸ್ಥಳೀಯ ಆಯುಕ್ತರಾಗಿ ನೇಮಿಸಿದ ವಕೀಲರಿಂದ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗ ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಒಟ್ಟು ೨೦ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಈ ಮಹಿಳಾ ನ್ಯಾಯಾಧೀಶೆ ಮೊದಲ ಕಂತಿನಲ್ಲಿ ನಾಲ್ಕು ಲಕ್ಷ ರೂಪಾಯಿ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.