ಈ ಸ್ಪುರದ್ರೂಪಿ ಮುಖವನ್ನು ಗುರುತಿಸಿ !

Update: 2016-09-30 09:17 GMT

ಮಲಯಾಳಂ ಚಿತ್ರರಂಗಕ್ಕೆ ಇನ್ನೊಬ್ಬ 'ಮೋಹನ್‌ಲಾಲ್‌'  ಎಂಟ್ರಿಯಾಗಿದೆ.  ಸೂಪರ್ ಸ್ಟಾರ್ ಹಾಗೂ ಅದ್ಭುತ ನಟ ಮೋಹನ್‌ಲಾಲ್‌ ಪುತ್ರ ಪ್ರಣವ್ ಮೋಹನ್‌ಲಾಲ್‌ ತಮ್ಮ ಪ್ರಪ್ರಥಮ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇದನ್ನು ಸ್ವತಃ ತಂದೆಯೇ ಶುಕ್ರವಾರ ಹೆಮ್ಮೆಯಿಂದ ಘೋಷಿಸಿದ್ದಾರೆ. 

ಜೀತು ಜೋಸೆಫ್ ನಿರ್ದೇಶನ ಹಾಗೂ ಆಂಟನಿ ಪೆರುಂಬಾವೂರ್ ನಿರ್ಮಾಣದ ತ್ರಿಲ್ಲರ್ ಚಿತ್ರದಲ್ಲಿ ಪ್ರಣವ್  ಮುಖ್ಯ ಪಾತ್ರಧಾರಿ.  
ಇನ್ನೊಬ್ಬ ಸೂಪರ್ ಸ್ಟಾರ್ ಮಮ್ಮುಟ್ಟಿಯ ಪುತ್ರ ದುಲ್ಖರ್ ಸಲ್ಮಾನ್ ಈಗಾಗಲೇ ಸ್ಟಾರ್ ಆಗಿ ಯುವಜನತೆಯ ಮನ ಗೆದ್ದಿದ್ದಾರೆ. ಈಗ ಪ್ರಣವ್ ಮೋಹನ್‌ಲಾಲ್‌ ಸರದಿ. 
ಆಲ್ ದಿ ಬೆಸ್ಟ್ ಪ್ರಣವ್  ! 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News