ಆಶಾ ಭೋಸ್ಲೆ 'ನಾಯಿಗಳು' ಎಂದು ಹೇಳಿದ್ದು ಯಾರಿಗೆ ?

Update: 2016-09-30 14:07 GMT

ಮುಂಬೈ, ಸೆ. ೩೦ : ಭಾರತ - ಪಾಕಿಸ್ತಾನದ ನಡುವಿನ ತಿಕ್ಕಾಟದ ಮಧ್ಯೆ ಕಲಾವಿದರ ನಿಲುವು ಭಾರೀ ಚರ್ಚೆಗೆ ಬಂದಿದೆ. ಪಾಕ್ ಕಲಾವಿದರಿಗೆ ಭಾರತದಲ್ಲಿ ಅವಕಾಶ ನೀಡಬಾರದು ಎಂದು ಬಲಪಂಥೀಯರು ಹೇಳುತ್ತಿದ್ದರೆ , ಅವರು ಕೇವಲ ಕಲಾವಿದರು ರಾಜಕೀಯಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ. 

ಈ ನಡುವೆ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ತಮ್ಮ ಟ್ವೀಟ್ ಮೂಲಕ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. " ನನ್ನನ್ನು ಫಾಲೋ ಮಾಡುವವರಲ್ಲಿ ಬೈಗುಳ ನೀಡುವ ಬಹಳಷ್ಟು ನಾಯಿಗಳು ಇರುವುದು ನನಗೆ ಗೊತ್ತಿರಲಿಲ್ಲ. ಅವರನ್ನು ನಾನು ಡಿಲೀಟ್ ಮಾಡಿದ್ದೇನೆ. ಇದರಿಂದ ಎಲ್ಲವೂ ಸ್ಪಷ್ಟವಾಗಲಿದೆ. ನನ್ನ ಕೆಲವು ಸಹೋದ್ಯೋಗಿಗಳೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ ." ಎಂದು ಅವರು ಟ್ವೀಟ್ ಮಾಡಿದರು. 

ಆದರೆ ಇದಾಗಿ ಕೆಲವೇ ಸಮಯದ ಬಳಿಕ ಮತ್ತೆ ಟ್ವೀಟ್ ಮಾಡಿದ ಅವರು " ನಾನು ಬೈಗುಳ ನೀಡುವ ನಾಯಿಗಳು ಎಂದೆ. ನಾನು ಪಾಕಿಸ್ತಾನಿ ಎಂದು ಹೇಳಿಲ್ಲ ತಾನೇ ? ಮತ್ತೇಕೆ ಪಾಕಿಸ್ತಾನಿಯರು ಬೇಸರಗೊಂಡಿದ್ದಾರೆ ? ಬೈಗುಳ ನೀಡುವವರು ಯಾರೂ ಆಗಿರಬಹುದು  " ಎಂದು ಹೇಳಿದ್ದಾರೆ ಆಶಾ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News