×
Ad

ಮೊದಲ ದಿನ 'ಎಂ. ಎಸ್. ಧೋನಿ 'ಯ ಸ್ಕೋರ್ ಎಷ್ಟು ಗೊತ್ತೇ ?

Update: 2016-09-30 19:49 IST

ಮುಂಬೈ, ಸೆ. 30: ಬಹುನಿರೀಕ್ಷಿತ ಚಿತ್ರ 'ಎಂ. ಎಸ್. ಧೋನಿ : ದಿ ಅನ್ ಟೋಲ್ಡ್ ಸ್ಟೋರಿ'  ಶುಕ್ರವಾರ ಬಿಡುಗಡೆಯಾಗಿದೆ.  ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಧೋನಿಯ ಕುರಿತ ಚಲನಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಸ್ಪಂದನೆ ನೀಡುವ ಲಕ್ಷಣಗಳು ಮೊದಲ ದಿನವೇ ಕಂಡಿವೆ.

ಚಿತ್ರದ ಕುರಿತು ವಿಮರ್ಶಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಧೋನಿಯ ಖ್ಯಾತಿ ಇನ್ನೂ ಕಡಿಮೆಯಾಗಿಲ್ಲ ಎಂಬುದಕ್ಕೆ ತುಂಬಿದ ಚಿತ್ರ ಮಂದಿರಗಳು ಸಾಕ್ಷಿಯಾಗಿವೆ.  ಧೋನಿ ಪಾತ್ರ ಮಾಡಿರುವ ಸುಶಾಂತ್ ಸಿಂಗ್ ರಜಪೂತ್ ಅವರೂ ನಟನೆಯಲ್ಲಿ ಮಿಂಚಿದ್ದಾರೆ.

ಮೊದಲ ದಿನ ಚಿತ್ರ 18 ರಿಂದ 20 ಕೋಟಿ ರೂಪಾಯಿ ಸಂಪಾದಿಸುವ ನಿರೀಕ್ಷೆಯಿದೆ.  ಇದು ಶನಿವಾರ ಖಚಿತವಾಗಿ ಗೊತ್ತಾಗಲಿದೆ.

ಪುಟ್ಟ ಗ್ರಾಮದಿಂದ ಬಂದು ಕ್ರಿಕೆಟ್ ದಂತಕತೆಯಾದ ಧೋನಿಯ ಕತೆ ಸೂಪರ್ ಹಿಟ್ ಆಗುವ ಸಾಧ್ಯತೆ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News