ಸ್ಫೋಟ : ಈಗ ಐಫೋನ್ 7 ಸರದಿ !

Update: 2016-09-30 15:35 GMT

ಹೊಸದಿಲ್ಲಿ, ಸೆ. 30 : ಸ್ಯಾಮ್ ಸಂಗ್ ನೋಟ್ 7 ಸ್ಮಾರ್ಟ್ ಫೋನ್ ಗಳು ಜಗತ್ತಿನ ವಿವಿಧೆಡೆ ಸ್ಪೋಟಿಸಿ ಗ್ರಾಹಕರಿಗೆ ಭಯ ಹುಟ್ಟಿಸಿರುವಾಗಲೇ ಇದೀಗ ಮತ್ತೊಂದು ಸುದ್ದಿ ಬಂದಿದೆ. ಅದು ಹೊಸ ಐಫೋನ್ 7 ಸರಣಿಯ ಮೊಬೈಲ್ ಸ್ಫೋಟಿಸಿದ ಸುದ್ದಿ !
ರೆಡ್ಡಿಟ್ ಬಳಕೆದಾರರೊಬ್ಬರ ಪ್ರಕಾರ ಅವರ ಸಹೋದ್ಯೋಗಿಯ ಐಫೋನ್ 7 ಪ್ಲಸ್ ಮೊಬೈಲ್ ಸಾಗಾಟದ ಸಂದರ್ಭದಲ್ಲಿ ಸ್ಪೋಟಿಸಿದೆ. ಆದರೆ ಇದು ನೋಟ್ 7 ನಂತೆ ಬಳಸುತ್ತಿರುವಾಗ ಅಥವಾ ಚಾರ್ಜ್ ಮಾಡಲು ಇಟ್ಟಾಗ ಸ್ಪೋಟಿಸಿಲ್ಲ. ಮಾತ್ರವಲ್ಲ ಇದು ದೊಡ್ಡ ಬೆಂಕಿ ದುರಂತಕ್ಕೂ ಕಾರ್ನಾವಾಗಿಲ್ಲ. ಇದು ಸಾಗಾಟದ ಸಂದರ್ಭದಲ್ಲಿ ಬ್ಯಾಟರಿ ಮೇಲೆ ತೀವ್ರ ಒತ್ತಡ ಬಿದ್ದು ಸ್ಪೋಟಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಮೊಬೈಲ್ ಸುತ್ತಿದ್ದು ಅದರ ಪ್ಯಾಕ್ ಗೆ  ಕೂಡ ಹಾನಿಯಾಗಿಲ್ಲ. 
ಆಪಲ್ ತನ್ನ ಈ ಗ್ರಾಹಕನನ್ನು ಸಂಪರ್ಕಿಸಿ ಈ ಬಗ್ಗೆ ಸಾಗಾಟ ಕಂಪೆನಿ ಜೊತೆ ಮಾತನಾಡಿ ಬೇರೆ ಮೊಬೈಲ್ ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದೆ ಎಂದು ಈ ರೆಡ್ಡಿಟ್ ಬಳಕೆದಾರ ಹೇಳಿದ್ದಾರೆ.
 
ತನ್ನ ನೋಟ್ 7 ಹೊಸ ಮೊಬೈಲ್ ಬ್ಯಾಟರಿ ಲೋಪದಿಂದ ಸ್ಫೋಟಿಸಿದ ಹಲವು ವರದಿಗಳು ಬಂದ ಬಳಿಕ ಸ್ಯಾಮ್ ಸಂಗ್ ೨೫ ಲಕ್ಷ ಮೊಬೈಲ್ ಗಳನ್ನು ಮಾರುಕಟ್ಟೆಯಿಂದ ವಾಪಾಸ್ ತರಿಸಿ ಅದಕ್ಕೆ ಬದಲಿ ಮೊಬೈಲ್ ಅಥವಾ ಹಣ ವಾಪಸ್ ನೀಡುವ ಕ್ರಮ ಕೈಗೊಂಡಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News