×
Ad

ಪಾಕ್ ಹೇಳಿಕೆ ಸುಳ್ಳು ಸೇನೆ ಸ್ಪಷ್ಟನೆ

Update: 2016-09-30 23:35 IST

ಹೊಸದಿಲ್ಲಿ, ಸೆ.30: ನಿಯಂತ್ರಣ ರೇಖೆಯಾಚೆ ಭಾರತದ ವಿಶೇಷ ಕಾರ್ಯಾಚರಣೆ ಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಸ್ ಸಂದರ್ಭ ಓರ್ವ ಭಾರತೀಯ ಯೋಧನಿಗೆ ಸಣ್ಣಮಟ್ಟಿನ ಗಾಯವಾಗಿದ್ದು ಇದು ವಿರೋಧಿ ಪಾಳಯದ ಸೈನಿಕರಿಂದ ಅಥವಾ ಉಗ್ರರ ಗುಂಡಿನಿಂದ ಆದ ಗಾಯವಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಾಕಿಸ್ತಾನ ನೀಡುತ್ತಿರುವ ಹೇಳಿಕೆ ಸುಳ್ಳಿನ ಸರಮಾಲೆಯಾಗಿದೆ.ಪಾಕಿಸ್ತಾನದ ಟಿವಿ ಚಾನೆಲ್‌ಗಳಲ್ಲಿ ತಿರುಚಲಾದ ವಿಡಿಯೋ ಕ್ಲಿಪಿಂಗ್‌ಗಳನ್ನು ಪ್ರದರ್ಶಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
 ಇನ್ನೊಂದು ಪ್ರಕರಣದಲ್ಲಿ 37 ರಾಷ್ಟ್ರೀಯ ರೈಫಲ್ ಪಡೆಗೆ ಸೇರಿದ ಯೋಧನೋರ್ವ ಮೆಂಧಾರ್ ವಲಯದಲ್ಲಿ ಅಕಸ್ಮಾತ್ ಆಗಿ ನಿಯಂತ್ರಣ ರೇಖೆಯನ್ನು ದಾಟಿದ್ದಾನೆ. ಈ ಬಗ್ಗೆ ಪಾಕಿಸ್ತಾನ ಸೇನೆಗೆ ಹಾಟ್‌ಲೈನ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News