ಮಸೀದಿ ಸಮೀಪ ಬಾಂಬ್ ಎಸೆದ ದುಷ್ಕರ್ಮಿಗಳು
Update: 2016-09-30 23:37 IST
ಕೊಯಮತ್ತೂರು, ಸೆ.30: ದಕ್ಷಿಣ ಕೊಯಮತ್ತೂರ್‌ನ ಪೊದನೂರ್ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಕೆಲವು ಅಜ್ಞಾತ ವ್ಯಕ್ತಿಗಳು ಮಸೀದಿಯ ಸಮೀಪಕ್ಕೆ ನಾಲ್ಕು ಕಚ್ಚಾ ಬಾಂಬ್ ಎಸೆದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಬಾಂಬ್‌ಗಳು ಸುನ್ನತ್ ಜಮಾತ್ ಮಸೀದಿಯ ಬಳಿಯ ಮನೆಗಳ ಮೇಲೆ ಬಿದ್ದರೆ, ಇನ್ನೆರಡು ಮಸೀದಿಗಿಂತ ಸುಮಾರು 30 ಮೀಟರ್ ದೂರದಲ್ಲಿರುವ ರಿಯಾಝ್ ಸುಲೇಮಾನ್ ಮತ್ತು ಮೀರನ್ ಕುಟ್ಟಿ ಎಂಬವರ ಮನೆಗೆ ಬಿದ್ದವು. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಪೆಟ್ರೋಲ್ ಬಳಸಿ ಈ ಬಾಂಬ್ ತಯಾರಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.