×
Ad

ಸೋಮೇಶ್ ಶರ್ಮ ಐಎನ್‌ಎಸ್ ಅಧ್ಯಕ್ಷ

Update: 2016-09-30 23:39 IST

ಬೆಂಗಳೂರು, ಸೆ.30: ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐಎನ್‌ಎಸ್) ಅಧ್ಯಕ್ಷರಾಗಿ ರಾಷ್ಟ್ರದೂತ್ ಸಾಪ್ತಾಹಿಕದ ಸೋಮೇಶ್ ಶರ್ಮ ಚುನಾಯಿತರಾಗಿದ್ದಾರೆ. ಸಂಸ್ಥೆಯ 77ನೆ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

  
ಸಹಾಯಕ ಅಧ್ಯಕ್ಷರಾಗಿ ಅಕಿಲ ಉರಂಕರ್(ಬ್ಯುಸಿನೆಸ್ ಸ್ಟಾಂಡರ್ಡ್) ಉಪಾಧ್ಯಕ್ಷರಾಗಿ ಕೆ.ಬಾಲಾಜಿ (ದಿ ಹಿಂದು ವೀಕ್ಲಿ), ಗೌರವ ಖಜಾಂಚಿಯಾಗಿ ಶರದ್ ಸಕ್ಸೇನ (ಹಿಂದೂಸ್ತಾನ್ ಟೈಮ್ಸ್) ಅವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ವಿ.ಶಂಕರನ್ ಪುನರಾಯ್ಕೆಯಾಗಿದ್ದಾರೆ. .....................................................................
ಉರಿ ದಾಳಿಯಲ್ಲಿ ಗಾಯಗೊಂಡಿದ್ದ
ಇನ್ನೊಬ್ಬ ಯೋಧ ಹುತಾತ್ಮ
ಹೊಸದಿಲ್ಲಿ, ಸೆ.30: ಉರಿ ಭಯೋತ್ಪಾದಕ ದಾಳಿಯ ವೇಳೆ ಗಾಯಗೊಂಡಿದ್ದ ಇನ್ನೊಬ್ಬ ಯೋಧ ಇಂದು ಕೊನೆಯುಸಿರೆಳೆಯುವುದರೊಂದಿಗೆ ದಾಳಿಯಲ್ಲಿ ಹುತಾತ್ಮರಾದವರ ಸಂಖ್ಯೆ 19ಕ್ಕೇರಿದೆ.
ಯೋಧ ಇಲ್ಲಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆತನಿಂದು ಕೊನೆಯುಸಿರೆಳೆದನೆಂದು ರಕ್ಷಣಾ ಮೂಲಗಳೂ ತಿಳಿಸಿವೆ.


ಪ್ರಧಾನಿಗೆ ರಾಹುಲ್ ಶ್ಲಾಘನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News