'ಗಡಿ ದಾಟಿರುವ ಭಾರತೀಯ ಸೆನಿಕನ ಬಿಡುಗಡೆಗೆ ಯತ್ನ'
ಹೊಸದಿಲ್ಲಿ, ಸೆ.30: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಸೈನಿಕನೊಬ್ಬನ ಬಿಡುಗಡೆಗೆ ಪ್ರಯತ್ನ ನಡೆಯುತ್ತಿದೆ. ಆತ ಗುರುವಾರ ನಿಯಂತ್ರಣ ರೇಖೆಯನ್ನು ದಾಟಿದ್ದನೆಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಹೇಳಿದ್ದಾರೆ.
ನಮ್ಮ ಯೋಧನೊಬ್ಬ ಪಾಕಿಸ್ತಾನದ ವಶದಲ್ಲಿದ್ದಾನೆಂಬ ಮಾಧ್ಯಮ ವರದಿಗಳನ್ನು ಸರಕಾರ ಗಮನಿಸಿದೆ. ಭಾರತವು ಈ ವಿಷಯವನ್ನು ಪಾಕಿಸ್ತಾನ ದೊಂದಿಗೆ ಪ್ರಸ್ತಾವಿಸಲಿದೆಯೆಂದು ಅವರು ತಿಳಿಸಿದ ರೆಂದು ಟಿವಿ ವಾಹಿನಿಯೊಂದು ವರದಿ ಮಾಡಿವೆ.
37 ರಾಷ್ಟ್ರೀಯ ರೈಫಲ್ಸ್‌ನ ಯೋಧನೊಬ್ಬ ಶಸ್ತ್ರಧಾರಿ ಯಾಗಿ ನಿಯಂತ್ರಣ ರೇಖೆಯ ಆ ಕಡೆಗೆ ಅನುದ್ದೇಶಿತ ವಾಗಿ ಹೋಗಿದ್ದನೆಂದು ಮೂಲಗಳು ಈ ಮೊದಲು ಹೇಳಿದ್ದವು. ಆ ಕಡೆಯಿಂದಲೂ ನಾಗರಿಕರು ಹಾಗೂ ಯೋಧರು ಅನುದ್ದೇಶಿತವಾಗಿ ನಿಯಂತ್ರಣ ರೇಖೆ ದಾಟಿ ಬರುವುದು ಹೊಸದೇನಲ್ಲ. ಅಂತಹ ಸಂದರ್ಭ ದಲ್ಲಿ ಅವರನ್ನು ಹಾಲಿ ವ್ಯವಸ್ಥೆಯ ಮೂಲಕ ಹಿಂದಿರುಗಿಸಲಾಗುತ್ತದೆ. ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆ.ಜ. ರಣಬೀರ್ ಸಿಂಗ್ ಈ ಘಟನೆಯ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದಾರೆಂದು ರಾಜನಾಥ್ ತಿಳಿಸಿದ್ದಾರೆ. ಯೋಧನನ್ನು ಗುರುವಾರ ಮಧ್ಯಾಹ್ನ 1:30ರ ವೇಳೆ ಸೆರೆ ಹಿಡಿಯಲಾಗಿದೆಯೆಂದು ಪಾಕ್‌ನ ಛಂಬಾ ವಲಯದ ಅಧಿಕಾರಿಗಳು ರಾಯ್ಟರ್‌ಗೆ ಮಾಹಿತಿ ನೀಡಿದ್ದಾರೆ.