ವಿದೇಶಿ ತಜ್ಞ ವೈದ್ಯರಿಂದ ಜಯಲಲಿತಾರ ಆರೋಗ್ಯ ತಪಾಸಣೆ

Update: 2016-10-01 07:04 GMT

ಚೆನ್ನೈ, ಅಕ್ಟೋಬರ್ 1: ಒಂಬತ್ತು ದಿವಸಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತಮಿಳ್ನಾಡು ಮುಖ್ಯಮಂತ್ರಿ ಜೆ.ಜಯಲಲಿತಾರ ಆರೋಗ್ಯ ತಪಾಸಣೆಯನ್ನು ಲಂಡನ್‌ನ ಬ್ರಿಡ್ಜ್ ಆಸ್ಪತ್ರೆಯ ವೈದ್ಯರಾದ ಜಾನ್ ರಿಚಾರ್ಡ್ ಬೇಲಿ ‘ಅಮ್ಮ’ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಶುಕ್ರವಾರ ರಾತ್ರೆ ಜಾನ್ ರಿಚಾರ್ಡ್ ಚೆನ್ನೈಗೆ ಬಂದು ಅಪೊಲೊ ಆಸ್ಪತ್ರೆಯಲ್ಲಿ ಜೈಲಲಿತಾರ ತಪಾಸಣೆ ನಡೆಸಿದ್ದು ಹೆಚ್ಚಿನ ತಪಾಸಣೆಗಾಗಿ ಅವರು ಇನ್ನೆರಡು ದಿವಸ ಚೆನ್ನೈಯಲ್ಲಿಯೇ ಉಳಿಯಲಿದ್ದಾರೆ. ಆದರೆ, ಜಾನ್ ರಿಚಾರ್ಡ್‌ರ ಸಂದರ್ಶನದ ಬಗ್ಗೆ ಅಣ್ಣಾ ಡಿಎಂಕೆಆಗಲಿ, ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 ಸೆಪ್ಟಂಬರ್ 22ಕ್ಕೆ ಕಠಿಣ ಜ್ವರ ಮತ್ತು ನಿರ್ಜಲತೆಯ ಕಾರಣದಿಂದಾಗಿ ಜಯಲಲಿತಾರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಒಂಬತ್ತು ದಿವಸಗಳಿಂದ ಜಯಲಲಿತಾ ಆಸ್ಪತ್ರೆಯಲ್ಲಿಯೇ ಇರುವುದರಿಂದಾಗಿ ಅವರ ಆರೋಗ್ಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಡಿವೆ. ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಜಯಲಲಿತಾರ ಆರೋಗ್ಯದ ಮಾಹಿತಿಯನ್ನು ಜನರಿಗೆ ನಿರಂತರ ನೀಡಬೇಕೆಂದು ಡಿಎಂಕೆ ಅಧ್ಯಕ್ಷರಾದ ಎಂ ಕರುಣಾನಿಧಿ ಆಗ್ರಹಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News