ನಿಮ್ಮ ಜೀನ್ಸ್‌ನಲ್ಲಿ ಆ ಚಿಕ್ಕ ಜೇಬು ಯಾಕೆ ಇದೆ?
ಜೀನ್ಸ್‌ನಲ್ಲಿರುವ ಆ ಚಿಕ್ಕ ಜೇಬು ಏನಾದರೂ ಬಳಕೆಗೆ ಇದೆಯೇ ಅಥವಾ ಕೇವಲ ಫ್ಯಾಷನ್‌ಗೆ ರಚಿಸಲಾಗಿದೆಯೆ? ನೀವು ಜೀನ್ಸ್ ಧರಿಸಿದಾಗ ಈ ಚಿಕ್ಕ ಜೇಬನ್ನು ಕಂಡು ಹೀಗೆ ಯೋಚಿಸಿದ್ದೀರಾ? ಈ ಮಿನಿ ಪ್ಯಾಕೆಟ್‌ಗಳು ಫ್ಯಾಷನ್‌ಗಿಂತ ಹೆಚ್ಚು ಮತ್ತು ನಿಜವಾದ ಜೇಬಿಗಿಂತಲೂ ಉತ್ತಮವಾಗಿ ಬಳಕೆಯಾಗುತ್ತದೆ ಎನ್ನುವುದು ಗೊತ್ತೆ? ಮುಖ್ಯವಾಗಿ 1973ರಿಂದಲೇ ಈ ಬಗ್ಗೆ ಚಿಂತಿಸಿ ಸಿದ್ಧ ಮಾಡಿರುವ ಕಾರಣದಿದಲೇ ಈ ಮಿನಿ ಜೇಬಿದೆ.
ಮೊದಲಿಗೆ ಈ ಮಿನಿ ಜೇಬುಗಳಿಗೆ ಫಿಫ್ತ್ ಪ್ಯಾಕೆಟ್ ಎಂದು 18ನೇ ಶತಮಾನದಲ್ಲೇ ಹೆಸರಿಸಲಾಗಿತ್ತು. ಆರಂಭದಲ್ಲಿ ಮಿನಿ ಜೇಬುಗಳು ಸಣ್ಣ ಕಾಯಿನ್ ಗಳನ್ನು ಹಾಕಲು ಬಳಕೆಯಾಗುತ್ತಿತ್ತು. ಆದರೆ ಅಲ್ಲಿಂದ ಅದನ್ನು ತೆಗೆಯುವುದು ಬಹಳ ಕಷ್ಟದ ಕೆಲಸವಾಗಿರುತ್ತಿತ್ತು. ಆದರೆ ಬ್ಲೂ ಜೀನ್ ನಿರ್ಮಾಣದ ಹಿಂದಿರುವ ಲೆವಿ ಸ್ಟ್ರಾಸ್ ಆ್ಯಂಡ್ ಕಂಪೆನಿ ಹೇಳಿರುವ ಪ್ರಕಾರ ಆರಂಭದಲ್ಲಿ ಅವುಗಳನ್ನು ಪ್ಯಾಕೆಟ್ ವಾಚ್‌ಗಳನ್ನು ರಕ್ಷಿಸಲು ನಿರ್ಮಿಸಲಾಗಿತ್ತು. "ಕೌಬಾಯ್‌ಗಳ ಪಾಕೆಟ್ ವಾಚ್‌ಗಳು ಕುದುರೆ ಸವಾರಿ ಮಾಡುವಾಗ ಪ್ಯಾಂಟ್‌ನಿಂದ ಬೀಳದಂತೆ ವಿನ್ಯಾಸ ಮಾಡಲಾಗಿತ್ತು. ಆ ಕಾಲದಲ್ಲಿ ಜನರು ತಮ್ಮ ವಾಚ್‌ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಇವುಗಳನ್ನು ವಾಚ್ ಪ್ಯಾಕೆಟ್ ಎಂದೂ ಕರೆಯಲಾಗಿತ್ತು" ಎನ್ನುತ್ತಾರೆ ಲೀ ಪ್ರತಿನಿಧಿ.
ಆದರೆ ನಾಡಿಗೆ ಕಟ್ಟುವ ವಾಚ್ ಆರಂಭವಾದ ಮೇಲೆ ಈ ಮಿನಿ ಜೇಬುಗಳ ಬಳಕೆ ಕಡಿಮೆಯಾಯಿತು. ಆದರೆ ಜೀನ್ಸ್ ಕಂಪೆನಿಗಳು ಇದರ ರಚನೆಯನ್ನು ಬದಲಿಸಲಿಲ್ಲ. ಹೆಚ್ಚುವರಿ ಜೇಬು ಹಲವು ರೀತಿಯಲ್ಲಿ ನೆರವಾಗಿತ್ತು. ಫ್ರಂಟಿಯರ್ ಪಾಕೆಟ್, ಕಾಂಡಂ ಪಾಕೆಟ್, ಕಾಯ್ನ್ ಪಾಕೆಟ್, ಮ್ಯಾಚ್ ಪಾಕೆಟ್ ಮತ್ತು ಟಿಕೆಟ್ ಪಾಕೆಟ್ ಆಗಿ ಬದಲಾಗಿತ್ತು. ಇದರ ವಿನ್ಯಾಸವು ಜೀನ್ಸ್‌ಗೆ ಲುಕ್ ಕೊಡುವ ಕಾರಣದಿಂದಲೂ ಅದನ್ನು ಹಾಗೇ ಇಡಲಾಗಿತ್ತು. ಆಧುನಿಕ ಕಾಲದಲ್ಲಿ ಮಿನಿ ಜೇಬು ಬಳಕೆಯಾಗದ ಸಂದರ್ಭದಲ್ಲಿ ಅವುಗಳ ನಿಜವಾದ ಬಳಕೆಯ ಬಗ್ಗೆ ತಿಳಿದುಕೊಳ್ಳೋಣ.
ಕಾಯ್ನ್ ಪಾಕೆಟ್ ಆಗಿ ಬಳಸಿ : ಮಿನಿ ಜೇಬು ಸ್ವಲ್ಪ ಆಳವಾಗಿ ಇರುವ ಕಾರಣದಿಂದ ಅದರಲ್ಲಿ ಕೈ ಹಾಕಿ ಕಾಯ್ನ ತೆಗೆಯುವುದು ಕಷ್ಟವಾದರೂ, ಬೀಳದಂತೆ ಕಾಯ್ನ ಇಡಲು ಇದು ಉತ್ತಮ. ಮ್ಯೂಸಿಕ್ ಪ್ಲೇಯರ್ ಪಾಕೆಟ್ ಆಗಿಯೂ ಸಣ್ಣ ಐಪಾಡ್ ಅನ್ನು ಅಲ್ಲಿಡಬಹುದು. ತುರ್ತು ಕೂದಲು ಬಾಚಬೇಕೆಂದರೆ ಬಾಚಣಿಗೆಯನ್ನೂ ಇಡಬಹುದು.
ಫ್ಲಾಸ್ ಪಾಕೆಟ್ ಆಗಿ ಬಳಸಿ: ಅಗತ್ಯವಿರುವ ಬಾಯಿ ವಾಸನೆ ಓಡಿಸಲು ಫ್ಲಾಸ್ ಇಡಲು ಇದನ್ನು ಬಳಸಬಹುದು. ಟೂತ್‌ಪಿಕ್ಸ್ ಇಡಲೂ ಉತ್ತಮ ಜಾಗ. ಆದರೆ ಅದನ್ನು ತೆಗೆಯುವಾಗ ಜಾಗ್ರತೆವಹಿಸಿ.
ಸ್ನಾಕ್ ಹೋಲ್ಡರ್ ಆಗಿ ಬಳಸಿ: ಸಣ್ಣ ಸ್ನಾಕ್ ಬಾರ್ ಹಾಕಲು ಉತ್ತಮ ಜಾಗ.
ಮೌತ್ ಫ್ರೆಶ್ನರ್ ಇಡಲು ಬಳಸಿ: ಸಣ್ಣ ಗಮ್ ಅಥವಾ ಮೌತ್ ಫ್ರೆಶ್ನೆರ್ ಪ್ಯಾಕ್ ಇಲ್ಲಿಡಬಹುದು.
ಪ್ಲೆಕ್ಟ್ರಮ್ ಹೋಲ್ಡರ್: ಪ್ಲೆಕ್ಟ್ರಮ್ ಗಳನ್ನು ಸುಲಭವಾಗಿ ಕಳೆದುಕೊಳ್ಳುತ್ತೇವೆ. ಹೀಗಾಗಿ ಈ ಮಿನಿಜೇಬಿನಲ್ಲಿಟ್ಟರೆ ಅಷ್ಟು ಬೇಗ ಕಳೆದು ಹೋಗದು.
ಪ್ರಿಯ ಕಾಸ್ಮೆಟಿಕ್: ಲಿಪ್‌ಸ್ಟಿಕ್ ಅಥವಾ ಲಿಪ್ ಬಾಮ್ ಇಡಲು ಉತ್ತಮ. ಮಸ್ಕರಾಗಳು ಅಥವಾ ಸಣ್ಣ ಕನ್ನಡಿಯೂ ಇಡಬಹುದು. ನೈಲ್ ಫೈಲ್ ಇಡಬಹುದು.
ಪ್ಲಾಸ್ಟರ್ ಪಾಕೆಟ್ :ಬ್ಯಾಂಡ್ ಏಯ್ಡಾಗಳನ್ನು ಇಡಲು ಬಳಸಬಹುದು.
ಟಿಶ್ಯೂ ಪ್ಯಾಕೆಟ್: ನಿಮಗೆ ಟಿಶ್ಯೂ ಯಾವಾಗ ಅಗತ್ಯವಾಗುತ್ತದೆ ಎಂದು ಹೇಳಲಾಗದು. ಸಣ್ಣ ಪ್ಯಾಕೆಟನ್ನು ಈ ಜೇಬಲ್ಲಿಡಬಹುದು.
ಟಿಕೆಟ್ ಪ್ಯಾಕೆಟ್ : ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಟಿಕೆಟು ಇಡಬಹುದು. ಸಿನಿಮಾ ಟಿಕೆಟುಗಳನ್ನೂ ಇಟ್ಟುಕೊಲ್ಳಬಹುದು. ಆದರೆ ಟಿಕೆಟು ಮುದ್ದೆಯಾದರೆ ಸಮಸ್ಯೆಯಿಲ್ಲ ಎಂದಾದಲ್ಲಿ ಮಾತ್ರ ಇಟ್ಟುಕೊಳ್ಳಿ.
ಸ್ವಿಸ್ ಆರ್ಮಿ ನೈಫ್ ಪಾಕೆಟ್ :ಕ್ಯಾನ್ ಓಪನರ್ ಅಥವ ಕಾರ್ಕ್ಸ್ ಕ್ರ್ಯೂ ಬೇಕೆಂದಲ್ಲಿ ಇಡಲು ಉತ್ತಮ ಜಾಗವಿದು.
ಪೆನ್/ ಪೆನ್ಸಿಲ್ ಹೋಲ್ಡರ್: ಸಣ್ಣ ಮಡಚುವ ಪೇಪರ್ ಅಥವಾ ನೋಟ್‌ಬುಕ್ ಅನ್ನು ಪೆನ್ ಅಥವಾ ಪೆನ್ಸಿಲ್ ಜೊತೆಗೆ ಇಡಬಹುದು. ತುರ್ತಾಗಿ ನೋಟ್ ಮಾಡಬೇಕಾದರೆ ಅದನ್ನು ಬಳಸಬಹುದು.
ಫ್ಲಾಗ್ ಹೋಲ್ಡರ್ : ಸಣ್ಣ ಧ್ವಜವನ್ನು ಇಡಲು ಇದು ಉತ್ತಮ ಜಾಗ. ಸ್ವಾತಂತ್ರ್ಯೋತ್ಸವದ ದಿನ ಧ್ವಜವನ್ನು ಹಿಡಿದು ಸಂಭ್ರಮಿಸಲು ಬಯಸಿದರೆ ಇದು ಉತ್ತಮ ಜಾಗ.
ಕೀ ಪಾಕೆಟ್ ಅಥವ ಯುಎಸ್‌ಬಿ ಮೆಮೊರಿ ಕಾರ್ಡುಗಳನ್ನು ಇಡಲೂ ಇದು ಉತ್ತಮ ಜಾಗ.
ಕೃಪೆ: timesofindia.indiatimes.com