×
Ad

ಈ ಕುಟುಂಬ ಕ್ಷಯರೋಗ ಚಿಕಿತ್ಸೆಗೆ ಖರ್ಚು ಮಾಡಿದ್ದೆಷ್ಟು ಗೊತ್ತೇ?

Update: 2016-10-02 08:52 IST

ಮುಂಬೈ, ಅ.2: ಕೆಲ ಬಗೆಯ ಕ್ಷಯರೋಗ ಚಿಕಿತ್ಸೆ ಎಷ್ಟು ದುಬಾರಿ ಗೊತ್ತೇ? ಸರಾಸರಿ ಮುಂಬೈನ ಒಂದು ಸಾಮಾನ್ಯ ಕುಟುಂಬ, ಒಬ್ಬ ರೋಗಿಯ ಚಿಕಿತ್ಸೆಗಾಗಿ ಅರ್ಧ ವರ್ಷದ ಆದಾಯವನ್ನು ವೆಚ್ಚ ಮಾಡಬೇಕಾಗುತ್ತದೆ!

ಬಹುಔಷಧಿ ನಿರೋಧಕ ಸಾಮರ್ಥ್ಯದ ಕ್ಷಯರೋಗ ಚಿಕಿತ್ಸೆ ಕುರಿತ ಹೊಸ ಅಧ್ಯಯನವೊಂದು ಈ ಅಂಶವನ್ನು ಬಹಿರಂಗಪಡಿಸಿದೆ. ಒಬ್ಬ ವ್ಯಕ್ತಿ ಕ್ಷಯರೋಗದ ಬ್ಯಾಕ್ಟೀರಿಯಾದಿಂದ ಮುಕ್ತವಾಗಲು ಎರಡು ವರ್ಷದ ಆದಾಯವನ್ನು ಖರ್ಚು ಮಾಡಿರುವ ನಿದರ್ಶನವನ್ನು ವರದಿ ಉಲ್ಲೇಖಿಸಿದೆ.

"ಖಾಸಗಿ ವಲಯದಲ್ಲಿ ಔಷಧ ನಿರೋಧಕ ಸಾಮರ್ಥ್ಯದ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುವುದು ಮುಂಬೈನ ಶೇಕಡ 53ರಷ್ಟು ಕುಟುಂಬಗಳ ವಾರ್ಷಿಕ ಆದಾಯದ ಶೇಕಡ 235ರಷ್ಟು" ಎಂದು ಅಧ್ಯಯನ ತಂಡದ ಮುಖ್ಯಸ್ಥ ಡಾ.ಝರೀರ್ ಉದ್ವಾಡಿಯಾ ಹೇಳಿದ್ದಾರೆ. ಈ ವರದಿಯನ್ನು ಯೂರೋಪಿಯನ್ ರೆಸ್ಪರೇಟರಿ ಸೊಸೈಟಿ ಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಪಡೆಯುತ್ತಿರುವ 50 ರೋಗಿಗಳ ವೆಚ್ಚವನ್ನು ಲೆಕ್ಕ ಹಾಕಿ ಈ ನಿರ್ಧಾರಕ್ಕೆ ಬರಲಾಗಿದೆ.

ಸರಾಸರಿ ಚಿಕಿತ್ಸಾ ವೆಚ್ಚ 4.8 ಲಕ್ಷ ರೂಪಾಯಿ ಆಗುತ್ತದೆ. ಆದರೆ ಎರಡು ವರ್ಷಗಳ ಚಿಕಿತ್ಸೆಗೆ 1.3 ಲಕ್ಷ ರೂಪಾಯಿಯಿಂದ 25 ಲಕ್ಷ ವರೆಗೂ ವೆಚ್ಚ ಮಾಡಿದ ನಿದರ್ಶನ ಇದೆ ಎಂದು ಅಧ್ಯಯನ ತಂಡದ ಡಾ.ಜೈ ಮುಲ್ಲರ್‌ಪಟ್ಟಣ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News