ತಮಿಳು ನಟ ವಿಕ್ರಂಗೆ ನಿರ್ದೇಶಕನಾಗುವ ಆಸೆ

Update: 2016-10-03 09:42 GMT

ತಮಿಳು ನಟ ವಿಕ್ರಂ ಅವರ ಇತ್ತೀಚಿನ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್. ಆನಂದ್ ಶಂಕರ್ ನಿರ್ದೇಶನದ ‘ಇರು ಮುಗನ್’ (ಎರಡು ಮುಖ) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ರಾ ಏಜೆಂಟ್ ಅಖಿಲನ್ ಹಾಗೂ ವಿಧ್ವಂಸಕ ವಿಜ್ಞಾನಿ ಲವ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ಶಿಬು ತಮೀಮ್ ಪ್ರಕಾರ, ‘ಇರು ಮುಗನ್’ ಗಳಿಕೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇರಿ 100 ಕೋಟಿ ದಾಟಿದೆ. ವಿಕ್ರಂ ಅವರ ಹಿಂದಿನ ಚಿತ್ರ 10 ಎಂಡ್ರತುಕುಲ್ಲ (2015) ತೆರೆ ಕಾಣಲೇ ಇಲ್ಲ. ಆದರೆ ಈ 50 ವರ್ಷದ ನಟನಿಗೆ ಸೂಕ್ತ ಪಾತ್ರ ಸಿಕ್ಕಿದರೆ ಅವರ ಚಿತ್ರಗಳು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಲು ಸಮರ್ಥ ಎಂದು ‘ಇರು ಮುಗನ್’ ತೋರಿಸಿಕೊಟ್ಟಿದೆ. ‘ಸೇತು’, ‘ಪಿತಾಮಗನ್’, ‘ಕಾಸಿ’, ‘ಅನ್ನಿಯಾನ್’, ‘ರಾವಣ ಆ್ಯಂಡ್ ಐ’ ಚಿತ್ರದಂಥ ಹಿಟ್ ಚಿತ್ರಗಳನ್ನು ನೀಡಿದ ಈ ಮೇರು ನಟ ಸೂಕ್ತ ಪಾತ್ರ ಸಿಗಲು ಹೆಣಗುತ್ತಿರುವ ಬಗ್ಗೆ, ನಿರ್ದೇಶಕನಾಗಿ ಮಿಂಚುವ ಆಸೆಯನ್ನು ಸಂದರ್ಶನದಲ್ಲಿ ಬಿಚ್ಚಿಟ್ಟರು.

►‘ಇರು ಮುಗನ್’ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಗಳಿಸಿದೆ. ಬಹುಶಃ ಇದು ನಿಮ್ಮ ಮನಸ್ಸಿಗೆ ಮುದ ನೀಡಿರಬೇಕು. ಇದು ಒಳ್ಳೆಯ ಬೆಳವಣಿಗೆ ಅಲ್ಲವೇ?

-ಯಶಸ್ಸಿಗೆ ಸಮಾನ ಯಾವುದೂ ಅಲ್ಲ. ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ. ಚಿತ್ರದ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಸಾಕಷ್ಟು ಬರುತ್ತಿದೆ. ನನ್ನ ಪಾತ್ರ ಹಾಗೂ ನಿರ್ವಹಣೆಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಸಂತೋಷವಾಗಿದೆ.

►ನಿರ್ದೇಶಕ ಆನಂದ್ ಶಂಕರ್ ಕೇವಲ ಒಂದು ಚಿತ್ರವನ್ನಷ್ಟೇ ಮಾಡಿದವರು. ಅವರ ಯೋಜನೆಗೆ ಒಪ್ಪಿಕೊಳ್ಳುವ ವಿಶ್ವಾಸ ಹೇಗೆ ಬಂತು?

-ಶಂಕರ್‌ರ ಮೊದಲ ಚಿತ್ರ ‘‘ಅರೀಮಾ ನಂಬಿ’’ಯನ್ನು ನಾನು ಇಷ್ಟಪಟ್ಟಿದ್ದೆ. ಒಳ್ಳೆಯ ನಿರ್ದೇಶಕನಾಗುವ ಎಲ್ಲ ಲಕ್ಷಣಗಳನ್ನೂ ಅವರಲ್ಲಿ ಕಂಡಿದ್ದೆ. ಆತ ಪ್ರತಿಭಾನ್ವಿತ ಚಿತ್ರ ನಿರ್ದೇಶಕ. ಚಿತ್ರಕಥೆಯನ್ನು ವಿವರಿಸಿದಾಗ, ಈ ಪಾತ್ರಗಳಲ್ಲಿ ನಟನೆಗೆ ಮತ್ತು ಯಶಸ್ಸಿಗೆ ಸಾಕಷ್ಟು ಅವಕಾಶವಿದೆ ಎನಿಸಿತು. ನಾವು ಸಮಾನ ಮನಸ್ಕರು. ಚಿತ್ರದ ಗಳಿಗೆ ಬಗ್ಗೆ ನಾವು ಯೋಚಿಸಲೇ ಇಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಆದ್ದರಿಂದ ಜತೆಯಾಗಿ ಇನ್ನೂ ಹೆಚ್ಚು ಚಿತ್ರಗಳನ್ನು ನಿರೀಕ್ಷಿಸಬಹುದು.

►ಎರಡೂ ಪಾತ್ರಗಳನ್ನು ಭಿನ್ನವಾಗಿ ಕಾಣುವಂತೆ ನಿರ್ವಹಿಸುವುದು ಎಂಥ ಸವಾಲು? ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಲವ್ ಪಾತ್ರ, ಇದು ಮತ್ತೆ ಮಾಮೂಲಿ ಚಿತ್ರ ಎಂಬ ಸಂಶಯಗಳನ್ನು ಹುಟ್ಟುಹಾಕಿತ್ತು?

 -ಒಂದಕ್ಕೊಂದು ತದ್ವಿರುದ್ಧ ಪಾತ್ರವನ್ನು ನಿರ್ವಹಿಸಬೇಕು ಎನ್ನುವುದು ನನ್ನ ಪ್ರಯತ್ನ. ಯಾರನ್ನೂ ತೇಜೋವಧೆ ಮಾಡುವ ರೀತಿಯಲ್ಲಿ ಲವ್ ಪಾತ್ರವನ್ನು ಬಿಂಬಿಸುವುದು ನಮಗೆ ಇಷ್ಟವಿರಲಿಲ್ಲ. ಆ ಪಾತ್ರ ಎಷ್ಟು ಬದ್ಧ ವಿಲನ್ ಪಾತ್ರವೆಂದರೆ, ನಾಯಕನನ್ನು ಮೀರಿಸುವಂಥ ಪಾತ್ರ. ಎಲ್ಲ ಮನೋರಂಜನಾ ಚಿತ್ರಗಳಲ್ಲೂ ವಿಲನ್ ಪಾತ್ರ ಕೂಡಾ ನಾಯಕನಷ್ಟೇ ಶಕ್ತಿಯುತವಾಗಿರಬೇಕು. ಆದ್ದರಿಂದ ನಾನು ಆ ಪಾತ್ರ ನಿರ್ವಹಿಸಿದೆ. ನಾವು ಆತನಿಗೆ ಎಷ್ಟು ಸ್ವಾತಂತ್ರ್ಯ ನೀಡಲು ಸಾಧ್ಯವೋ ಅಷ್ಟು ಸ್ವಾತಂತ್ರ್ಯ ನೀಡಿದೆವು.
ಈ ಪಾತ್ರ ಯಾರನ್ನಾದರೂ ಅಗೌರವದಿಂದ ಕಾಣುತ್ತದೆಯೇ ಎಂಬ ಬಗ್ಗೆ ಹಲವು ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೆ ಆತನದ್ದು ಎಷ್ಟು ನೆಚ್ಚಿನ ಪಾತ್ರವೆಂದರೆ, ಕೊನೆಯಲ್ಲಿ ಎಲ್ಲರಿಗೂ ಬೇಸರವಾಗುತ್ತದೆ. ಆದ್ದರಿಂದ ನಾವು ಎಣಿಸಿದ್ದನ್ನು ಸಾಧಿಸಿದ್ದೇವೆ ಎನಿಸುತ್ತದೆ.

►ಶಂಕರ್ ಅವರ ‘ಐ’ ಚಿತ್ರದಲ್ಲಿ ನೀವು ವೃತ್ತಿ ಜೀವನದ ಮೂರು ವರ್ಷಗಳ ಶ್ರಮ ಹಾಕಿದ್ದೀರಿ. ಅಷ್ಟು ಪ್ರಯತ್ನ ಅಗತ್ಯವಿತ್ತೇ? ಆ ಅವಧಿಯಲ್ಲಿ ನೀವು ಪ್ರಮುಖ ಪಾತ್ರಗಳನ್ನು ಕಳೆದುಕೊಂಡಿದ್ದೀರಾ?

-ಆ ಚಿತ್ರ ಸುಮಾರು 200 ಕೋಟಿ ಗಳಿಕೆ ಮಾಡಿತು. ಅದು ಯಶಸ್ವಿ ಚಿತ್ರವೇ? ಹೌದು. ಅದು ಸಾಕಷ್ಟು ಹಣ ಮಾಡಿ ಎಲ್ಲ ದಾಖಲೆ ಮುರಿಯಿತು. ಆ ಚಿತ್ರದಲ್ಲಿ ನಾನು ನಟಿಸಿದಂತೆ ಯಾವುದೇ ಚಿತ್ರದಲ್ಲೂ ಪಾತ್ರಗಳ ನಟನೆಗೆ ಅಷ್ಟು ಅವಕಾಶ ಸಿಗುವುದಿಲ್ಲ ಎನ್ನುವುದು ನನ್ನ ಅಭಿಮತ. ನಾನು ವೃತ್ತಿಯಿಂದ ದೇಹದಾರ್ಢ್ಯ ಪಟುವಲ್ಲ. ಆದರೆ ಮಿಸ್ಟರ್ ಸಿಕ್ಕಿಂ, ಮಿಸ್ಟರ್ ಇಂಡಿಯಾ, ಮಿಸ್ಟರ್ ಕೊಚ್ಚಿ, ಮಿಸ್ಟರ್ ಏಷ್ಯಾ ನಂ.3 ಜತೆ ವೇದಿಕೆ ಹಂಚಿಕೊಳ್ಳಬೇಕಾಯಿತು. ನಾನು ಕೇವಲ ವಿಕ್ರಂ. ಅವರ ಹಾಗೆ ಕಾಣಬೇಕಿತ್ತು. ಆಗ ಮಾತ್ರ ಕ್ರೀಡೆಗೆ ವಿಭಿನ್ನ ನೋಟ ಬರುತ್ತದೆ. ಈ ಮೊದಲು ಚಿತ್ರದಲ್ಲಿ ಹಾಗೆ ಯಾರೂ ಮಾಡಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ನನ್ನನ್ನು ನಾನು ಮರು ಸೃಷ್ಟಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂದು ನನಗೆ ತಿಳಿಯದು.
‘ಐ’ ಚಿತ್ರಕ್ಕಾಗಿ ನಾನು ಮಾಡಿದ ಪ್ರಯತ್ನದ ಬಗ್ಗೆ ನನಗೆ ಸ್ವಲ್ಪವೂ ಬೇಸರ ಇಲ್ಲ. ಈ ಚಿತ್ರದಿಂದಲೇ ಜನ ನನ್ನನ್ನು ಹಿಂದಿನ ಚಿತ್ರ, ಪಾತ್ರಗಳಿಗಿಂತ ಭಿನ್ನವಾಗಿ ಸ್ವೀಕರಿಸುತ್ತಾರೆ. ಪ್ರಯತ್ನಕ್ಕೆ ಬೆಂಬಲ ನೀಡುತ್ತಾರೆ. ಅದು ಒಬ್ಬ ನಟನಿಗೆ ಮಾತ್ರವಲ್ಲ; ಒಬ್ಬ ವ್ಯಕ್ತಿಗೇ ದೊಡ್ಡ ಗೌರವ.

 ►‘10 ಎಂಡ್ರತುಕುಲ್ಲ್ಲ’ ಚಿತ್ರದಲ್ಲಿ ಏನು ಎಡವಟ್ಟಾಯಿತು?


-‘10 ಎಂಡ್ರತುಕುಲ್ಲ್ಲ’ ಚಿತ್ರ ನನ್ನ ಪ್ರಕಾರ ಒಳ್ಳೆಯ ಚಿತ್ರ. ಆ ಚಿತ್ರದಲ್ಲಿ ನನಗೆ ಸಾಕಷ್ಟು ಅವಕಾಶ ಇತ್ತು. ಆದರೆ ಅದಕ್ಕೂ ಮುನ್ನ ಸಾಕಷ್ಟು ಕಠಿಣ ಪರಿಶ್ರಮ ಹಾಕಿದ್ದರಿಂದ ಸಾಕಷ್ಟು ಶ್ರಮ ಹಾಕಲು ಸಾಧ್ಯವಾಗಲಿಲ್ಲ. ಆ ಬಳಿಕ ಇದನ್ನು ಮಾಡಿದೆ. ಅದು ನನಗೆ ಹೇಳಿದ ಪಾತ್ರವಲ್ಲ. ಬೇರೆ ಯಾರಾದರೂ ನಿರ್ವಹಿಸಿದ್ದರೆ ಒಳ್ಳೆಯದಾಗುತ್ತಿತ್ತು. ನಿಮ್ಮ ಚಿತ್ರದ ಭವಿಷ್ಯ ಏನಾಗುತ್ತದೆ ಎಂದು ಪ್ರತಿಯೊಬ್ಬರೂ ತಿಳಿದುಕೊಂಡರೆ, ಆಗ ನಾವು ದೇವರಾಗುತ್ತೇವೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಹಣೆಬರಹದ ಬಗ್ಗೆ ನಾವು ನಿರ್ಲಕ್ಷ ್ಯವನ್ನೇನೂ ಹೊಂದಿಲ್ಲ. ನಾವು ಕೂಡಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಸೋಲುತ್ತೇವೆ. ಆದರೆ ಪ್ರಯತ್ನ ಮುಂದುವರಿಯಬೇಕು ಅಲ್ಲವೇ?

►ನಿಮ್ಮ ಚಿತ್ರಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ? ಎಷ್ಟು ಅಂತರದಲ್ಲಿ ಅವು ಬಿಡುಗಡೆಯಾಗಬೇಕು ಎಂದು ನಿರೀಕ್ಷಿಸುತ್ತೀರಿ?

-ಮೂರು ತಿಂಗಳಿಗೊಂದು ನನ್ನ ಚಿತ್ರ ಬಿಡುಗಡೆಯಾಗಬೇಕು ಎನ್ನುವುದು ನನ್ನ ಆಸೆ. ಆದರೆ ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿಲ್ಲ. ವನ್ಯ, ರೋಚಕ, ವಿಭಿನ್ನ ಹಾಗೂ ವಿಶಿಷ್ಟ ಚಿತ್ರಗಳನ್ನೂ ಮಾಡಬೇಕಾಗುತ್ತದೆ. ಆ ನಿರ್ಧಾರಕ್ಕೆ ಹಲವು ಅಂಶಗಳು ಅಗತ್ಯವಾಗುತ್ತವೆ. ಆದರೆ ಚೆನ್ನೈನಲ್ಲಿ ಅಂಥ ಚಿತ್ರಕಥೆ ಲೇಖಕರು ಅಥವಾ ಸೃಷ್ಟಿಕರ್ತರು ಇಲ್ಲ. ನಾನು ಪ್ರೇಕ್ಷಕರ ಮುಂದೆ ಹೋಗುವ ಮುನ್ನ ನನಗೆ ಖಚಿತವಾಗಬೇಕು. ಅದಕ್ಕೆ ಸಮಯ ಹಿಡಿಯುತ್ತದೆ.

►ನಟರಿಗೆ ವಯಸ್ಸು ಮುಖ್ಯವಾಗುತ್ತದೆಯೇ? ನೀವು ಇಳಿ ವಯಸ್ಸಿನಲ್ಲಿ ಎಂಥ ಪಾತ್ರ ಎದುರು ನೋಡುತ್ತೀರಿ?

-ನನ್ನ ನಿಲುಮೆಗೆ ಯಾವ ಪಾತ್ರ ಸೂಕ್ತ ಎನಿಸುತ್ತದೆಯೋ ಅನ್ನು ನಿರ್ವಹಿಸುತ್ತೇನೆ.
ಸುಮಾರು 10 ವರ್ಷ ಹಿಂದೆ ವಿಧು ವಿನೋದ್ ಚೋಪ್ರಾ ನನ್ನನ್ನು ಕರೆದು, ‘ಏಕಲವ್ಯ’ ಚಿತ್ರದಲ್ಲಿ 60-70ರ ವಯಸ್ಸಿನ ಪಾತ್ರ ಮಾಡಬಹುದೇ ಎಂದು ಕೇಳಿದರು. ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ನಾನು ಅಂಥದ್ದೇ ಪಾತ್ರವನ್ನು ‘ಅನ್ನಿಯನ್’ನಲ್ಲಿ ನಿರ್ವಹಿಸಿರುವುದರಿಂದ ಇದರಲ್ಲೂ ಮಾಡಬಹುದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಅದನ್ನೇ ನಿರ್ವಹಿಸಲು ಸಾಧ್ಯವಾಗುತ್ತದೆಯೇ ಎಂಬ ಅಂಜಿಕೆ ನನಗಿತ್ತು. ಆದ್ದರಿಂದ ನಾನು ನಿರ್ವಹಿಸಲಿಲ್ಲ. ನಾನು ಮಾಡಬಲ್ಲೆ ಎನ್ನಿಸಿದ ದಿನ ಅಂಥ ಪಾತ್ರ ಮಾಡುತ್ತೇನೆ.
ನಟನ ವಯಸ್ಸಿಗೆ ವಿಶೇಷ ಮಹತ್ವ ಇಲ್ಲ ಎನ್ನುವುದು ನನ್ನ ಅನಿಸಿಕೆ. ಆತ ಹೇಗೆ ಕಾಣುತ್ತಾನೆ ಹಾಗೂ ನಿರ್ದಿಷ್ಟ ಪಾತ್ರವನ್ನು ಆತ ನಿರ್ವಹಿಸಬಲ್ಲನೇ ಎನ್ನುವುದಷ್ಟೇ ಮುಖ್ಯ. ಜನರನ್ನು ಮೂರ್ಖರಾಗಿಸಲು ಸಾಧ್ಯವಿಲ್ಲ. ಆದರೆ ನಾನು ಯುವ ಹಾಗೂ ತಾಜಾ ಪಾತ್ರವಾಗಿ ಕಾಣಿಸಿಕೊಳ್ಳಬಹುದು. ಅಂಥ ಪಾತ್ರಗಳನ್ನು ಇಂದೂ ನಿರ್ವಹಿಸುತ್ತಿದ್ದೇನೆ.

►ತೀರಾ ಕಠಿಣ ಎನಿಸಿದ ಜನಪ್ರಿಯ ‘ಸೇತು’, ‘ಪಿತಾಮಗನ್’ ಹಾಗೂ ‘ಕಾಸಿ’ಯಂಥ ಚಿತ್ರಗಳನ್ನು ನಿರ್ವಹಿಸಿದ್ದೀರಿ. ಮತ್ತೆ ಅಂಥ ಪಾತ್ರ ಬಯಸುತ್ತೀರಾ?

-ಇಂಥ ಪಾತ್ರ ತೀರಾ ಅಪರೂಪ ಹಾಗೂ ಆದ್ದರಿಂದ ಅವು ಮತ್ತೆ ಮತ್ತೆ ಸುತ್ತುತ್ತವೆ ಹಾಗೂ ಆ ಬಗ್ಗೆ ಜನ ಮಾತನಾಡುತ್ತಾರೆ. ಅಂಥ ಪಾತ್ರಗಳನ್ನು ಸದಾ ಹುಡುಕುತ್ತೇನೆ. ಆದರೆ ಬಳಿಕ ಪ್ರೀತಿ ಕೂಡಾ ಉಂಟಾಯಿತು. ಸರಿಯಲ್ಲವೇ? ನಾನು ವಿಲನ್ ಪಾತ್ರವನ್ನು ನಿರ್ವಹಿಸಲು ಬಯಸಿದ್ದೆ. ‘ಇರು ಮುಗನ್’ ನನಗೆ ಆ ಅವಕಾಶ ನೀಡಿತು.

►ನಟರಾಗಿ ನಿಮ್ಮ ದೊಡ್ಡ ಸಾಧನೆ ಹಾಗೂ ಸಂಘರ್ಷ ಏನು?

-ಒಳ್ಳೆಯ ಚಿತ್ರಕಥೆ ಹಾಗೂ ಪಾತ್ರ ಪಡೆಯಲು ನಾನು ಹೆಣಗುತ್ತೇನೆ. ಇದು ನನಗೆ ಯಾವಾಗಲೂ ಕಷ್ಟ. ಒಳ್ಳೆಯ ಕಥೆ ಅಥವಾ ಯಶಸ್ವಿ ಪಾತ್ರ ನಿರ್ವಹಿಸುವುದು ದೊಡ್ಡ ಸವಾಲು. ನನಗೆ ಯಶಸ್ಸು ಯಾವಾಗ ಸಿಗುತ್ತದೆ ಎಂದರೆ, ನಾನು ಸ್ವತಃ ಅನುಭವಿಸುವಂಥ ಪಾತ್ರ ಸಿಗಬೇಕು. ವಾವ್ ಎಂದು ನನಗೆ ಅನಿಸಬೇಕು. ಆ ಬಳಿಕ ನನಗೆ ಅದು ಕೆಲಸವಲ್ಲ. ಆಪ್ಯಾಯಮಾನ.

►ನೀವು ಚಿತ್ರ ನಿರ್ದೇಶನ ಬಗ್ಗೆ ಯೋಚಿಸಿದ್ದೀರಾ? ಹಲವು ನಟರು ಈಗ ನಿರ್ಮಾಣ ಕಂಪೆನಿಗಳನ್ನು ನಿರ್ವಹಿಸುತ್ತಿದ್ದಾರೆ. ನೀವು ಕೂಡಾ ನಿರ್ಮಾಪಕರಾಗಲು ಬಯಸಿದ್ದೀರಾ?

-ಖಂಡಿತವಾಗಿಯೂ ಒಂದು ದಿನ ನಾನು ಚಿತ್ರ ನಿರ್ದೇಶಿಸುತ್ತೇನೆ. ತಕ್ಷಣಕ್ಕೆ ಅಲ್ಲ. ಮುಂದಿನ ಎರಡರಿಂದ ಐದು ವರ್ಷಗಳಲ್ಲಿ. ಶೂಟಿಂಗ್ ವೇಳೆ ನೀವು ಬಹಳಷ್ಟು ಕಲಿಯುತ್ತೀರಿ. ಎಲ್ಲ ಚಿತ್ರಗಳಲ್ಲೂ ಸಹಾಯಕ ನಿರ್ದೇಶಕರಂತೆಯೇ ಆಗುತ್ತದೆ. ನಿರ್ದೇಶನ ತೀರಾ ಕಠಿಣ ಕೆಲಸ. ಬರಹ, ಪ್ರತಿಯೊಂದನ್ನೂ ಸಿದ್ಧಪಡಿಸುವುದು, ಶೂಟಿಂಗ್ ಹಾಗೂ ನಿರ್ಮಾಣೋತ್ತರ ಕೆಲಸಗಳಿಗೆ ಸಮಯ ಇಟ್ಟುಕೊಳ್ಳಲೇಬೇಕು. ಅದು ತೀರಾ ಕಠಿಣ ಕೆಲಸ. ನಾನು ಅದನ್ನು ಮಾಡುವಾಗ ಸಾಕಷ್ಟು ಸಮಯಾವಕಾಶ ಇರಬೇಕು. ಅದಕ್ಕೆ ಅರ್ಹನಾಗಿರಬೇಕು.
ಆದರೆ ನಿರ್ಮಾಣ, ಖಂಢಿತಾ ಇಲ್ಲ. ಅದು ಮತ್ತೂ ಟೆನ್ಷನ್. ನಾನು ವ್ಯಾಪಾರಿಯಲ್ಲ. ಕೇಲವ ನಟ. ನನಗೆ ನನ್ನ ನಟನೆ ಪ್ರೀತಿಯೇ ಮುಖ್ಯ.

►ನಿಮ್ಮ ಮುಂದಿನ ಯೋಜನೆ ಏನು? ಹಿಂದಿ ಭಾಷೆಯಲ್ಲಿ?
-2003ರಲ್ಲಿ ಸೂಪರ್ ಹಿಟ್ ಆದ ಚಿತ್ರ ‘ಸಾಮಿ-2’ ಎರಡನೆ ಅವತರಣಿಕೆಯಲ್ಲಿ ನಾನು ಪಾತ್ರ ನಿರ್ವಹಿಸುವ ಬಗ್ಗೆ ಯೋಚಿಸುತ್ತೇನೆ. ಕೆಲ ಚಿತ್ರಕಥೆಗಳನ್ನು ಈಗಾಗಲೇ ಓದಿದ್ದೇನೆ. ಆದರೆ ಏನನ್ನೂ ಘೋಷಿಸಲಿಲ್ಲ.
ಬಾಲಿವುಡ್ ನನ್ನ ಕಲ್ಪನೆಯಲ್ಲಿ ಸದ್ಯಕ್ಕೆ ಇಲ್ಲ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಿತ್ರಗಳು ಏನೇ ಕಸರತ್ತು ಮಾಡಿದರೂ 20 ಕೋಟಿ ಮೀರಿದ ಗಳಿಕೆ ಮಾಡಲಿಲ್ಲ. ಆದರೆ ನಾನು ತಮಿಳು ಬಾಷೆಯಲ್ಲೇ 100 ಕೋಟಿ ಆದಾಯ ಗಳಿಸಿದ್ದೇನೆ. ನಾನು ಈಗ ಇರುವ ಕ್ಷೇತ್ರದಲ್ಲೇ ಮುಂದುವರಿಯಲು ಬಯಸುತ್ತೇನೆ.

Writer - ಪ್ರತಿಭಾ ಪರಮೇಶ್ವರನ್

contributor

Editor - ಪ್ರತಿಭಾ ಪರಮೇಶ್ವರನ್

contributor

Similar News