×
Ad

ಸರ್ಜಿಕಲ್ ಸ್ಟ್ರೈಕ್ ನಕಲಿ: ಕಾಂಗ್ರೆಸ್ ನಾಯಕ ಸಂಜಯ ನಿರುಪಮ್

Update: 2016-10-04 15:34 IST

ಮುಂಬೈ, ಅಕ್ಟೋಬರ್ 4: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪಾಕಿಸ್ತಾನದ ಅಧೀನ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಸಾಚಾತನವನ್ನು ಪ್ರಶ್ನಿಸಿದ್ದಾರೆಂದು ಜನಸತ್ತಾ ವರದಿ ಮಾಡಿದೆ. ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಅವರು " ಪ್ರತಿಯೊಬ್ಬ ಭಾರತೀಯನೂ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್‌ನ್ನೇ ಬಯಸುತ್ತಾನೆ ಆದರೆ ಬಿಜೆಪಿ ಮೂಲಕ ರಾಜಕೀಯ ಲಾಭಕ್ಕಾಗಿ ನಡೆದ ನಕಲಿ ದಾಳಿಯನಲ್ಲ. ದೇಶದ ಹಿತದ ಮೇಲೆ ರಾಜಕೀಯ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

 ಇವರು ಕಾಂಗ್ರೆಸ್ ಮತ್ತು ಆಮ್‌ಆದ್ಮಿಪಾರ್ಟಿ ಸರ್ಜಿಕಲ್ ಸ್ಟ್ರೈಕ್‌ಗಾಗಿ ಪುರಾವೆಗಳನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಸೋಮವಾರ ತನ್ನ ಸರಕಾರದ ಅವಧಿಯಲ್ಲಿಯೂ ಇಂತಹ ಕಾರ್ಯಾಚರಣೆ ನಡೆದಿತ್ತು. ಆದರೆ ಅದಕ್ಕೆ ಇಂತಹ ಪ್ರಚಾರ ಕೊಟ್ಟಿರಲಿಲ್ಲ ಎಂದು ಹೇಳಿಕೊಂಡಿತ್ತು. ದಿಲ್ಲಿಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರು ಕೂಡಾ ವೀಡಿಯೊವೊಂದರಲ್ಲಿ ಪ್ರಧಾನಿ ಮೋದಿಯಿಂದ ಸಾಕ್ಷ್ಯವನ್ನು ನೀಡುವಂತೆ ಆಗ್ರಹಿಸಿದ್ದರು. ಸರ್ಜಿಕಲ್ ಸ್ಟ್ರೈಕ್‌ನ ಬಳಿಕ ಪಾಕಿಸ್ತಾನ ಅಂತಹದೊಂದು ನಡೆದೇ ಇಲ್ಲ ಎಂದು ಅಂತಾರಾಷ್ಟ್ರೀಯ ಪತ್ರಕರ್ತರನ್ನು ಗಡಿಯತ್ತ ಕರೆದು ಕೊಂಡು ಹೋಗಿ ತೋರಿಸಿತ್ತು. ಆದ್ದರಿಂದ ಸರ್ಜಿಕಲ್ ಸೈಟ್ ನಡೆದಿದೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಸಾಕ್ಷ್ಯವನ್ನು ಕೊಡಬೇಕಾಗಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

 ಕೇಜ್ರಿವಾಲ್‌ರ ವೀಡಿಯೊಕ್ಕೆ ಮಂಗಳವಾರ ಪ್ರತಿ ವಾಗ್ದಾಳಿ ನಡೆಸುತ್ತಾ ಕೇಂದ್ರದ ಕಾನೂನು ಸಚಿವ ರವಿಶಂಕರ್ ಕೇಜ್ರಿವಾಲ್ ದೇಶದ ಸೇನೆಯ ಬಗ್ಗೆ ಸಂದೇಹಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್‌ರಿಗೆ ಸಂದೇಹವಿಲ್ಲವೆಂದಾದರೆ ಪಾಕಿಸ್ತಾನದ ಸುಳ್ಳುಪ್ರಚಾರಕ್ಕೆ ಪ್ರಭಾವಿತರಾಗುವ ಅಗತ್ಯವಿಲ್ಲ ಎಂದ ರವಿಶಂಕರ್, ಕಾಂಗ್ರೆಸ್ ನಾಯಕ ಪಿ. ಚಿದಂಬರಂರನ್ನು ಕೂಡಾ ಟೀಕಿಸಿದ್ದಾರೆ. ಅವರು ಕೂಡಾ ಸೇನಾ ಜವಾನರ ಸರ್ಜಿಕಲ್ ಸ್ಟ್ರೈಕ್‌ನ ಯೋಗ್ಯತೆ ಬಗ್ಗೆ ಪ್ರಶ್ನಿಸುವವರಲ್ಲಿ ಚಿದಂಬರಂ ಕೂಡಾ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಚಿದಂಬರಂ ಪತ್ರಿಕೆಯೊಂದರ ಸಂದರ್ಶನದಲ್ಲಿ ಅವರ ಸರಕಾರದ ಸಮಯದಲ್ಲಿ 2013 ಜನವರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಆಗಿತ್ತು ಎಂದು ಹೇಳಿದ್ದರು.

  ಪಾಕಿಸ್ತಾನವು ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂಬುದನ್ನು ನಿರಾಕರಿಸುತ್ತಾ ಬಂದಿದೆ. ಪಾಕಿಸ್ತಾನದ ಸೇನೆ ಪತ್ರಕರ್ತರ ತಂಡವೊಂದನ್ನು ಗಡಿ ನಿಯಂತ್ರಣ ರೇಖೆಯೆಡೆಗೆ ಕರೆದು ಕೊಂಡು ಹೋಗಿದ್ದು ಅಲ್ಲಿ ನೆಲೆಸಿರುವ ಸ್ಥಿತಿಗತಿಗಳ ಕುರಿತು ಅವರಿಗೆ ತೋರಿಸಿದೆ. ಎರಡು ದೇಶಗಳ ನಡುವೆ ನೆಲೆಸಿರುವ ಉದ್ವಿಗ್ನ ಸ್ಥಿತಿಯ ನಡುವೆಯೇ ನಿಯಂತ್ರಣ ರೇಖೆಯಲ್ಲಿ ಉಪಸ್ಥಿತರಿದ್ದ ಸೈನ್ಯದ ಅಧಿಕಾರಿಗಳು ತಮ್ಮ ಗಡಿಯಲ್ಲಿ ಇಂತಹ ಕಾರ್ಯಾಚರಣೆ ನಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನಿ ಸೇನೆ ಬೇರೆಯೇ ರೀತಿಯ ಹೆಜ್ಜೆಯಿರಿಸುವ ಮೂಲಕ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಗಡಿಯ ಬಳಿ ಕರೆದುಕೊಂಡು ಹೋಗಿ ತೋರಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News