×
Ad

ನನ್ನ ರೇಪಿಸ್ಟ್ ಹೊರಗೆ ಬಂದಿದ್ದಾನೆ, ಇನ್ನು ನನಗೆ ಏನಾಗಬಹುದು?: ನಿತೀಶ್‌ಗೆ ಪತ್ರ ಬರೆದ ಬಾಲಕಿ

Update: 2016-10-06 16:50 IST

ಪಾಟ್ನಾ, ಅಕ್ಟೋಬರ್ 6: ಅತ್ಯಾಚಾರ ಆರೋಪದಲ್ಲಿ ಜೈಲಿಗಟ್ಟಲಾಗಿದ್ದ ಆರ್‌ಜೆಡಿ ಶಾಸಕ ರಾಜಬಲ್ಲಭ್ ಯಾದವ್‌ಗೆ ಜಾಮೀನು ದೊರಕಿದ ಬಳಿಕ ಅತ್ಯಾಚಾರಕ್ಕೊಳಗಾಗಿದ್ದ ಹದಿನೈದು ವರ್ಷದ ಬಾಲಕಿ ಪತ್ರಕರ್ತರು ಮತ್ತು ಇತರರಿಗೆ ವಾಟ್ಸ್ ಆ್ಯಪ್‌ನಲ್ಲಿ ಸಂದೇಶಕಳುಹಿಸಿ ಇದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಗಮನಕ್ಕೆ ತರುವಂತೆ ವಿನಂತಿಸಿಕೊಂಡಿದ್ದಾಳೆಂದು ವರದಿಯಾಗಿದೆ.

ನಾನು ಹೆದರಿದ್ದೇನೆ:

ರಾಜಬಲ್ಲಭ ಯಾದವ್ ಜೈಲಿನಿಂದ ಹೊರಗೆ ಬಂದಿದ್ದಾರೆ. ನಾನು. ಹೆದರಿದ್ದೇನೆ. ಮುಂದಕ್ಕೆ ನನಗೆ ಏನಾದೀತು. ನಾನು ಮತ್ತು ಕುಟುಂಬ ಹೆದರಿದ್ದೇವೆ. ನನ್ನೊಂದಿಗೆ ಏನು ನಡೆದಿದೆ ಅದರಿಂದ ಮೊದಲೇ ನಾನು ಸತ್ತುಹೋಗಿದ್ದೇನೆ ಮತ್ತು ಈಗ ನನ್ನ ಬಳಿ ತಿನ್ನಲಿಕ್ಕೂ ಏನು ಇಲ್ಲ ಎಂದು ವಾಟ್ಸ್‌ಆ್ಯಪ್ ಸಂದೇಶದಲ್ಲಿ ಬರೆದಿದ್ದಾಳೆ.

ನನ್ನ ಕುಟುಂಬಕ್ಕೆ ಯಾವುದೇ ಸಂದರ್ಭದಲ್ಲಿಯೂ ದಾಳಿ ನಡೆಯಬಹುದು. ಆದರೆ ರಾಜಬಲ್ಲಭ ಯಾದವ್‌ಗೆ ನೀಡಲಾದ ಜಾಮೀನು ಬಿಡುಗಡೆ ವಿರುದ್ದ ಬಿಹಾರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಜಾಮೀನು ರದ್ದು ಪಡಿಸಬೇಕೆಂದು ವಿನಂತಿಸಿದೆ. ಸುಪ್ರೀಂಕೋರ್ಟು ಶುಕ್ರವಾರ ಅರ್ಜಿಯನ್ನು ಪರಿಗಣಿಸಲಿದೆ.

ಘಟನೆಯ ವಿವರ ಹೀಗಿದೆ:

ನಾಲಂದ ಜಿಲ್ಲೆಯ ರಹುಯಿ ಠಾಣೆ ವ್ಯಾಪ್ತಿಯ ಸುಲ್ತಾನಪುರ್ ಎಂಬಲ್ಲಿ ಹದಿನೈದು ವರ್ಷದ ಬಾಲಕಿ ನಾಲಂದ ಮಹಿಳಾ ಠಾಣೆಯಲ್ಲಿ ಫೆಬ್ರವರಿ ಒಂಬತ್ತರಂದು ಶಾಸಕ ರಾಜಬಲ್ಲಭರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಫೆಬ್ರವರಿ ಆರರಂದು ಬಿಹಾರ ಶರೀಫ್ನ ಧನೇಶ್ವರ್ ಘಾಟ್ ಮೊಹಲ್ಲಾದ ಸುಲೇಖಾ ದೇವಿ ಎಂಬ ಮಹಿಳೆ ಒಂದು ಜನ್ಮದಿನದ ಪಾರ್ಟಿಗೆ ಕರೆದುಕೊಂಡು ಹೋಗಿದ್ದಳು. ಮಹಿಳೆ ಬಾಲಕಿಯನ್ನು ಶಾಸಕನ ವಶಕ್ಕೆ ಒಪ್ಪಿಸಿದ್ದಾಳೆ. ಶಾಸಕ ಅವಳನ್ನು ಅತ್ಯಾಚಾರವೆಸಗಿದ್ದಾನೆ. ಫೆಬ್ರವರಿ ಏಳರಂದು ಶಾಸಕ ಅವಳ ಮನೆಗೆ ತಂದು ಬಿಟ್ಟಿದ್ದಾನೆಮತ್ತು ಬಾಯಿಮುಚ್ಚಿರುವಂತೆ ಬೆದರಿಸಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಳು ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News