×
Ad

ದಿಲ್ಲಿಯಲ್ಲಿ ಜನರನ್ನು ರೋಗಗಳಿಂದ ನರಳುವಂತೆ ಮಾಡಲಾಗಿದೆ: ಸುಪ್ರೀಂ

Update: 2016-10-06 18:37 IST

ಹೊಸದಿಲ್ಲಿ,ಅ.6: ದಿಲ್ಲಿಯಲ್ಲಿ ಡೆಂಗ್ ಮತ್ತು ಚಿಕುನ್‌ಗುನ್ಯಾ ಪಿಡುಗನ್ನು ನಿಯಂತ್ರಿಸು ವಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಇಂದಿಲ್ಲಿ ಕಟುವಾಗಿ ಟೀಕಿಸಿದ ಸರ್ವೋಚ್ಚ ನ್ಯಾಯಾಲಯವು, ಅಧಿಕಾರಿಗಳಿಗೆ ಇದರಲ್ಲಿ ಆಸಕ್ತಿಯಿಲ್ಲ ಮತ್ತು ಜನರು ರೋಗಗಳಿಂದ ನರಳುವಂತೆ ಮಾಡಲಾಗಿದೆ ಎಂದು ಹೇಳಿತು.

 ಡೆಂಗ್ ಮತ್ತು ಚಿಕುನ್‌ಗುನ್ಯಾಗಳಂತಹ ಕಾಯಿಲೆಗಳ ನಿಯಂತ್ರಣಕ್ಕಾಗಿ ಬುಧವಾರ ಉಪ ರಾಜ್ಯಪಾಲರು ಮತ್ತು ದಿಲ್ಲಿ ಸರಕಾರದ ನಡುವಿನ ಸಭೆಯ ಫಲಶ್ರುತಿಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ಅಮಿತಾವ್ ರಾವ್ ಅವರ ಪೀಠವು, ಈ ಕಾಯಿಲೆಗಳ ನಿಯಂತ್ರಣಕ್ಕಾಗಿ ದೃಢವಾದ ಕ್ರಮಗಳನ್ನು ನಿರ್ಧರಿಸಲು ಮತ್ತೊಮ್ಮೆ ಸಭೆ ನಡೆಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News