ಸಬಳೂರು ಶಾಲಾ ಮಕ್ಕಳಿಂದ ಮೆಟ್ರಿಕ್ ಮೇಳ

Update: 2016-10-08 08:05 GMT

ಶಾಲೆ ಎಂದೊಡನೆ ಎಲ್ಲರಿಗೂ ನೆನಪು ಬರುವುದು ಕಲಿಕೆಯ ಕೇಂದ್ರವೆಂದು. ಹೌದು ಇದು ಬಾಲ್ಯದಲ್ಲಿ ಬಾಳಿಗೆ ನೆರಳಾಗುವ ವಿದ್ಯಾಕೇಂದ್ರ. ಆಟ-ಪಾಠ, ಅಳು-ನಗು, ನೋವು-ನಲಿವು ಎಲ್ಲದಕ್ಕೂ ಬಾಲ್ಯದ ಪ್ರೈಮರಿ ಶಾಲೆಯೇ ಶಾಕ್ಷಿ. ಶಾಲೆಯಲ್ಲಿ ಎಲ್ಲಾ ಜ್ಙಾನವನ್ನು ಕೊಡ್ತಾರೆ ಇದರಿಂದ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಆದ್ರೆ ಇಲ್ಲೊಂದು ವಿಚಿತ್ರ ಸಂಗತಿ ಅಂದ್ರೆ ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರಿನಲ್ಲಿರುವ ದ.ಕ.ಜಿ.ಪ.ಉ.ಹಿ.ಪ್ರಾ.ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮೆಟ್ರಿಕ್ ಮೇಳ (ಮಕ್ಕಳ ಸಂತೆ)ಕಾರ್ಯಕ್ರಮ ನಡೆಯುತ್ತಿದೆ.

ಸೌತೆಕಾಯಿ, ಬದನೆಕಾಯಿ, ಕಂಬಳಕಾಯಿ, ತೆಂಗಿನಕಾಯಿ, ಸಿಯಾಳ ಈ ರೀತಿ ನೂರಾರು ತರಕಾರಿ, ಹಣ್ಣು ಹಂಪಲುಗಳನ್ನು ಶಾಲೆಗೆ ತಂದು ಮಕ್ಕಳು ವ್ಯಾಪಾರ ಮಾಡುವ ಪರಿ ನಿಜಕ್ಕೂ ಪ್ರಶಂಸನೀಯ. ಪಾಠದ ಜತೆಗೆ ಪಠ್ಯೇತರ ಚಟುವಟಿಕೆ ಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಭವಿಷ್ಯದ ಆಗುಹೋಗುಗಳನ್ನು ಅಭ್ಯಸಿಸುವಲ್ಲಿ ಶಾಲಾ ಶಿಕ್ಷಕರ ಮುತುವರ್ಜಿ ನಿಜಕ್ಕೂ ಗಮನಾರ್ಹ.

ವರ್ಷದಲ್ಲಿ ಎರಡು ಬಾರಿಯಂತೆ ಈ ಕಾರ್ಯಕ್ರಮ ನಡೆಯುತ್ತಿದೆ. ಪ್ರೌಢ ಶಾಲಾ ಸಹಶಿಕ್ಷಕಿಯಾದ ಮಮತಾ ಟೀಚರ್ ಎಂಬವರ ಚಿಂತನೆಯ ಫಲವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಊರ ಮಹನೀಯರು,ನಾಗರಿಕ ಬಂಧುಗಳೇ ಆಗಮಿಸುತ್ತಿದ್ದಾರೆ ಎಂಬುವುದು ಈ ಸಾಧನೆ ಶ್ಲಾಘನೀಯ ಎಂಬುವುದರ ಸಂಕೇತವಾಗಿದೆ. ಆಧುನಿಕ ಜಗತ್ತು ಟೆಕ್ನಾಲಜಿಗಳನ್ನು ಅವಲಂಬಿಸಿರುವಾಗ ಪರಸ್ಪರ ಕೊಂಡುಕೊಳ್ಳುವಿಕೆಯ ವಿನಿಮಯವನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ಬೋಧಿಸುತ್ತಿರುವುದು ನಿಜಕ್ಕೂ ಗ್ರೇಟ್ ಅಲ್ಲವೇ..?

ಎಂ.ಎಂ. ಆತೂರು

Writer - ಎಂ.ಎಂ. ಆತೂರು

contributor

Editor - ಎಂ.ಎಂ. ಆತೂರು

contributor

Similar News