ದೇಶಭಕ್ತಿಯನ್ನು ಮೋದಿ ಭಕ್ತಿಯನ್ನಾಗಿ ಪರಿವರ್ತಿಸಲಾಗುತ್ತಿದೆ: ಕನ್ಹಯ್ಯಾಕುಮಾರ್
ತಿರುವನಂತಪುರಂ, ಅಕ್ಟೋಬರ್ 11: ದೇಶಭಕ್ತಿಯನ್ನು ಮೋದಿಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ದೇಶದಲ್ಲಿ ನಡೆಯುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾಕುಮಾರ್ ಹೇಳಿದ್ದಾರೆ. ಅವರು ಎಐವೈಎಫ್ ರಾಜ್ಯಮಟ್ಟದ ಸಮ್ಮೇಳನದ ಪ್ರಯುಕ್ತ ತಿರುವನಂತಪುರಂ ಪುತ್ತರಿಕಂಡಂ ಮೈದಾನದಲ್ಲಿ ನಡೆದ ಕೋಮು_ಸಾಮ್ರಾಜ್ಯಶಾಹಿತ್ವ ವಿರುದ್ಧ ಸಮ್ಮೇಳನ್ನು ಉದ್ಘಾಟಿಸಿ ಮಾತಾಡುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.
"ಮೋದಿ ಟ್ವೀಟ್ ಮಾಡಿದರೆ, ಕೈಬೀಸಿದರೆ ದೇಶ ಪ್ರಗತಿ ಪಥದಲ್ಲಿ ಸಾಗುವುದಿಲ್ಲ. ಇಲ್ಲಿ ಜಾರಿಗೊಳ್ಳುತ್ತಿರುವ ಯೋಜನೆ “ಸ್ಕಿಲ್ ಇಂಡಿಯ” ಅಲ್ಲ ಬದಲಾಗಿ ಇಲ್ಲಿ “ಕಿಲ್ ಇಂಡಿಯ” ಜಾರಿಗೊಳಿಸಲಾಗುತ್ತಿರುವ ಯೋಜನೆ" ಎಂದು ಕನ್ಹಯ್ಯಾ ಹೇಳಿದರು. ಅಲ್ಪಸಂಖ್ಯಾತ ಬಹುಸಂಖ್ಯಾತ ಎರಡೂ ಕೋಮುವಾದಗಳನ್ನು ವಿರೋಧಿಸಲು ಅವರು ಕರೆ ನೀಡಿದರು. ಕನ್ಹಯ್ಯಾ ತನ್ನ ಭಾಷಣವುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುಟೀಕೆಗಳನ್ನು ಮಾಡಿದ್ದಾರೆ. ’ವಿಮರ್ಶೆ ಮಾಡುವವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ನರೇಂದ್ರಮೋದಿ ಪ್ರೈಂ ಮಿನಿಸ್ಟರ್ ಅಲ್ಲ “ಪ್ರೈಂ ಮಾಡೆಲ್” ಆಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ನೈಜ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ತಿರುಗಿಸಿ ಯುದ್ಧ ಜ್ವರ ಹರಡುವ ಯತ್ನವೀಗ ನಡೆಯುತ್ತಿದೆ" ಎಂದು ಕನ್ಹಯ್ಯಾಕುಮಾರ್ ಹೇಳಿದ್ದಾರೆ.
"ಮೋದಿಯನ್ನು ಟೀಕಿಸಿದರೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಕೆಲವರು ಹೇಳುತ್ತಾರೆ. ಹೀಗೆ ಹೋದರೆ, ಹಿಂದಿ, ಹಿಂದು, ಹಿಂದುಸ್ತಾನ್ ಎಂಬ ಘೋಷಣೆಗಳು ಕೇಳಿಸಿಕೊಳ್ಳಬಹುದು" ಎಂದು ಹೇಳಿದ ಅವರು "ಕೇರಳದಲ್ಲಿ ಬಿಜೆಪಿ ಖಾತೆ ತೆರೆದುದರ ಅಪಾಯವನ್ನು ಎಲ್ಲರೂ ಗಮನಿಸಬೇಕೆಂದು" ಅವರು ಆಗ್ರಹಿಸಿದರೆಂದು ವರದಿಯಾಗಿದೆ.