ನೈಜ ಗೋಸಂರಕ್ಷರನ್ನು ಜನರು ಗುರುತಿಸಬೇಕು- ಮೋಹನ್ ಭಾಗ್ವತ್

Update: 2016-10-11 10:00 GMT

ನಾಗಪುರ,ಅಕ್ಟೋಬರ್ 11: ಎಲ್ಲ ಗೋರಕ್ಷಕರು ಕ್ರಿಮಿನಲ್‌ಗಳಲ್ಲ. ನೈಜ ಗೋರಕ್ಷಕರನ್ನು ಜನರು ಗುರುತಿಸಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕರೆನೀಡಿದ್ದಾರೆ. ಗೋಸಂರಕ್ಷಕರು ಹೊಸದಾಗಿ ಎದ್ದು ಬಂದವರಲ್ಲ. ಗೋವಿನ ವಿರುದ್ಧಅಕ್ರಮ ಹೆಚ್ಚಾದ ಪರಿಸ್ಥಿತಿಯಲ್ಲಿ ಅವುಗಳ ಸಂರಕ್ಷಣೆಗಾಗಿ ರಂಗಪ್ರವೇಶಿಸಿದವರು. ಅವರು ನಾಗಪುರದಲ್ಲಿ ಸಂಸ್ಥಾಪನೆ ದಿನದಂದು ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.

 ಹಲವಾರು ಮಂದಿ ಗೋಸಂರಕ್ಷಣೆಯಲ್ಲಿ ನಿರತರಾಗಿದ್ದಾರೆ. ಗೋರಕ್ಷಣೆ ಸೇನೆ ಸದುದ್ದೇಶದಿಂದ ಇರುವಂಥದ್ದು, ಆದರೆ ಇವರಲ್ಲಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲು ಶ್ರಮಿಸಬಾರದೆಂದು ಮೋಹನ್ ಭಾಗ್ವತ್ ಹೇಳಿದರು.

ಭಾರತ ಪ್ರಗತಿ ಹೊಂದುತ್ತಿದೆ. ಭಾರತದ ಅಭಿವೃದ್ಧಿ ಇಲ್ಲಿರುವ ಜನರ ಕೈಯಲ್ಲಿದೆ. ಜನರ ಮನಸರಿತ ಆಡಳಿತ ಈಗ ಭಾರತದಲ್ಲಿ ಇದೆ. ಮೋದಿ ಸರಕಾರದಲ್ಲಿ ಜನರಲ್ಲಿ ನಿರೀಕ್ಷೆ ಮತ್ತು ಗೌರವಗಳಿವೆ. ವಿರೋಧಿಗಳು ವಿರೋಧಿಸಲಿಕ್ಕಾಗಿ ಮಾತ್ರ ವಿರೋಧವನ್ನು ಪ್ರಕಟಿಸುವುದೆಂದು ಭಾಗ್ವತ್ ಬೆಟ್ಟು ಮಾಡಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News