ಟೈಮ್ಸ್ ನೌ ನ ‘ಪಾಕ್ ಪ್ರಿಯತೆಗೆ’ ತಿರುಗೇಟು ನೀಡಿದ ಇರ್ಫಾನ್ ಖಾನ್
ಮುಂಬೈ, ಅ.13: ತಮ್ಮ ಲೇಟೆಸ್ಟ್ ಹಾಲಿವುಡ್ ಚಿತ್ರ ಇನ್‌ಫರ್ನೊ ಸಂಬಂಧವಾಗಿ ಮಾಧ್ಯಮದೊಂದಿಗೆ ಅನೇಕ ಬಾರಿ ಮಾತಾಡಿರುವ ನಟ ಇರ್ಫಾನ್ ಖಾನ್ ಅವರಿಗೆಪಾಕ್ ಕಲಾವಿದರೇಕೆ ಉರಿ ದಾಳಿಯನ್ನು ಖಂಡಿಸಿಲ್ಲವೆಂದು ಟೈಮ್ಸ್ ನೌ ಪತ್ರಕರ್ತನೊಬ್ಬ ಹಲವಾರು ಬಾರಿ ಕೇಳಿದಾಗ ಥಟ್ಟನೆ ಉತ್ತರ ನೀಡಿದ ಇರ್ಫಾನ್, ‘‘ಪಾಕಿಸ್ತಾನಿ ಕಲಾವಿದರ ಪರಾಗಿಮಾತನಾಲು ನಮ್ಮನ್ನೇಕೆ ಕೇಳಲಾಗುತ್ತಿದೆ? ನಿಮಗೆ ಪ್ರಶ್ನೆಯೇನಾದರೂ ಕೇಳುವುದಿದ್ದರೆ, ಅವರನ್ನೇ ಕೇಳಿ. ಅವರು ದಾಳಿಯನ್ನು ಖಂಡಿಸಿಲ್ಲವೆಂದಾದರೆ, ಅವರ ದೇಶದಲ್ಲಿ ಹಾಗೆ ಮಾಡುವುದು ಸುರಕ್ಷಿತವಲ್ಲವೆಂಬುು ಅವರ ಅಭಿಪ್ರಾಯವಾಗಿರಬಹುದು’’ಎಂದು ಹೇಳಿದರು.
ಚಿತ್ರರಂಗದ ಹಲವರು ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದುಹಾಗೂ ಈ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದು ಪತ್ರಕರ್ತ ಕೇಳಿದಾಗ ‘‘ನಾನಿಲ್ಲಿ ಇರಲಿಲ್ಲ. ಆದುದರಿಂದ ಈ ವಿಚಾರದಲ್ಲಿ ಚಿತ್ರರಂಗದ ಮಂದಿ ಹೇಗೆ ಭಿನ್ನ ಅಭಿಪ್ರಾಯ ಹೊಂದಿದ್ದಾರೆಂದು ನನಗೆ ತಿಳಿಯದು’’ ಎಂದಿದ್ದಾರೆ.
ಪಾಕಿಸ್ತಾನಿ ಕಲಾವಿದರಿಗೆ ಭಾರತದಲ್ಲಿದ್ದುಕೊಂಡು ಹಣ ಸಂಪಾದನೆ ಮಾಡಲು ಏಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆಗೆ, ‘‘ಅವರಿಗೇಕೆ ವೀಸಾ ನೀಡಲಾಗುತ್ತಿದೆಯೆಂಬುದನ್ನು ನೀವು ಸರಕಾರವನ್ನು ಕೇಳಬೇಕು’’ಎಂದರು.