ದುಡ್ಡಿನರಮನೆಯೊಳಗೆ ಕನ್ನಡದ ತೇರನೆಳೆಯುವ ಕಷ್ಟ

Update: 2016-10-13 08:58 GMT



ನಾವು ಕನ್ನಡ ಸಂಘಟನೆ ಆರಂಭಿಸಿದ ನಂತರ ಗ್ರಾಹಕರ ಕಡೆಯಿಂದ ಗಮನಾರ್ಹ ಬದಲಾವಣೆ ಕಾಣದಿದ್ದರೂ ಬ್ಯಾಂಕ್‌ನೊಳಗೆ ಆಡಳಿತ ದೃಷ್ಟಿಯಿಂದ ಒಂದಿಷ್ಟು ಬದಲಾವಣೆಯಾದದ್ದಂತೂ ನಿಜ. ಅದುವರೆಗೆ ಕನ್ನಡವನ್ನು ಎನ್ನಡ, ಎಕ್ಕಡ ಅಂತೆಲ್ಲ ಗೇಲಿ ಮಾಡಿದ್ದವರು ಗಪ್‌ಚುಪ್ಪಾದರು!! ಕನ್ನಡ ಚಟುವಟಿಕೆಗಳ ಬಗ್ಗೆ ನಾವೇನೇ ಬೇಡಿಕೆ ಇಟ್ಟರೂ ಅದಕ್ಕೆ ನಿ ಮಂಜೂರು ಮಾಡಿಸಿಕೊಳ್ಳುವಷ್ಟು ಕನ್ನಡ ತಾಕತ್ತನ್ನು ಬೆಳೆಸಿಕೊಂಡೆವು.

ನಾನೊಬ್ಬ ಬ್ಯಾಂಕ್ ಉದ್ಯೋಗಿ. ಅಚ್ಚಕನ್ನಡದ ಬ್ಯಾಂಕ್ ಉದ್ಯೋಗಿ. ಕೆಲವರು ‘ಕನ್ನಡದ ಹುಚ್ಚ’ ಬ್ಯಾಂಕ್ ಉದ್ಯೋಗಿ ಅಂತಲೂ ಗೇಲಿ ಮಾಡುತ್ತಾರೆ. ಕರ್ನಾಟಕದೊಳಗಿರುವಾಗ ಕನ್ನಡದ ಹೊರತು ಇನ್ನೊಂದು ಭಾಷೆಯ ‘ನರಿಯೆ’ ಅಂತ ಘಂಟಾಘೋಷವಾಗಿ ಸಾರಿದರೂ ಈಚೀಚೆಗೆ ಎಲ್ಲ ಭಾಷೆಯ ‘ನರಿ’ ತನವೇ ಆಗಿರಬೇಕಾದ ಅನಿವಾರ್ಯ ಸ್ಥಿತಿ ನನ್ನದು...!!
ಒಂದೆರಡು ವರ್ಷಗಳ ನನ್ನಿಷ್ಟದ ಪತ್ರಿಕಾ ವೃತ್ತಿ ತೊರೆದು ಇಷ್ಟವಿಲ್ಲದ ಅನಿವಾರ್ಯ ಬ್ಯಾಂಕ್ ವೃತ್ತಿ ಸೇರಲು 35 ವರ್ಷಗಳ ಹಿಂದೆ ಮೂಡಿಗೆರೆಗೆ ಬಂದಾಗ ತೇಜಸ್ವಿಯವರೇ ಮೂಡಿಗೆರೆಯನ್ನಾಳುತ್ತಿದ್ದರು..! ಹಾಗೆ ನೋಡಿದರೆ ಕರ್ನಾಟಕದ ಹಳ್ಳಿಪ್ರದೇಶಗಳಲ್ಲಿ, ತಾಲೂಕು ಕೇಂದ್ರಗಳ ಬ್ಯಾಂಕ್‌ಗಳಲ್ಲಿ ಆಗೆಲ್ಲ ಕನ್ನಡವೇ ಸಾರ್ವಭೌಮ ಭಾಷೆ. ಅಷ್ಟಿಷ್ಟು ಕನ್ನಡ ಬರೆಯಲು ಬಲ್ಲ ಹಳ್ಳಿಗರೆಲ್ಲ ‘ಸೊಂಟಕ್ಕೆ’ ಒಂದು ಸಾವಿರ ಮಾತ್ರ ಅಂತಲೇ ಚಲನ್ ಬರೆದುಕೊಡುತ್ತಿದ್ದರು. ಅದು ಸೊಂಟಕ್ಕೆ ಅಲ್ಲ ಯಜಮಾನರೇ, ‘ಸ್ವಂತ’ಕ್ಕೆ (ಛ್ಝ್ಛಿ) ಅಂತ ಎಷ್ಟು ಹೇಳಿದರೂ ಮತ್ತೆ ಮತ್ತೆ ಸೊಂಟವನ್ನೇ ಹಿಡಿಯುತ್ತಿದ್ದರು. ಅಲ್ಲಿರುವಾಗ ‘ಬ್ಯಾಂಕರ್ಸ್ ಬಳಗ’ ಅನ್ನೋ ಸಂಸ್ಥೆ ಕಟ್ಟಿ ಒಂದಷ್ಟು ನಾಟಕ, ಸಾಹಿತ್ಯ, ಅಂತೆಲ್ಲ ಹಾರಾಡಿದೆವು. ಮೂಡಿಗೆರೆಯಲ್ಲಿ ಇದ್ದಷ್ಟು ಕಾಲವೂ ಬ್ಯಾಂಕೆಂದರೆ ಗ್ರಾಮೀಣ ಕನ್ನಡದ ಆಡುಂಬೊಲವೆಂದೇ ಭಾವಿಸಿದ್ದೆ.

ಯಾವಾಗ ಮೂಡಿಗೆರೆಯಿಂದ ಮೈಸೂರು, ಬೆಂಗಳೂರಿಗೆ ಬಂದೆನೋ ಆಗಲೇ ನನಗೆ ಅರಿವಾದದ್ದು- ಕರ್ನಾಟಕದೊಳಗೆ ಕೂಡ- ಬ್ಯಾಂಕ್‌ನಲ್ಲಿ ಕನ್ನಡಕ್ಕಾಗಿ ಹೋರಾಟ ಹೊಡೆದಾಟ ಮಾಡಬೇಕಿದೆ ಅಂತ. ಆಗಷ್ಟೇ ನನ್ನ ಸಹೋದ್ಯೋಗಿಯೊಬ್ಬರು ಕನ್ನಡದಲ್ಲಿ ಸಹಿ ಮಾಡಿದ್ದಕ್ಕೆ ಬ್ಯಾಂಕ್ ಆಡಳಿತದವರು ಶಿಸ್ತು ಕ್ರಮ ಕೈಗೊಳ್ಳೋ ‘ಮೆಮೊ’ ಕೊಟ್ಟಿದ್ದರು. ಆಗ ಇದನೆಲ್ಲ ಪ್ರತಿಭಟಿಸಿದಾಗ ಪತ್ರಿಕೆಗಳಲ್ಲೂ ಸುದ್ದಿಯಾಯಿತು. ಖಾದ್ರಿ ಶಾಮಣ್ಣನವರು ಕನ್ನಡಪ್ರಭ ಪತ್ರಿಕೆಯಲ್ಲಿ ಈ ಬಗ್ಗೆ ಸಂಪಾದಕೀಯವನ್ನೇ ಬರೆದು ಪ್ರತಿಭಟಿಸಿದ ಮೇಲೆ ಆಡಳಿತವರ್ಗ ಮಣಿಯಲೇಬೇಕಾಯಿತು. ನಮ್ಮ ಬ್ಯಾಂಕ್‌ನಲ್ಲಿ ಕನ್ನಡದ ಕುರಿತ ಹೋರಾಟಕ್ಕೆ ಬಹುಶಃ ನಾಂದಿಯಾದದ್ದು ಈ ಘಟನೆಯೇ. ಆದರೆ 1971ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಕನ್ನಡ ಸಂಘ ಮೊದಲು ಆರಂಭವಾಯಿತು. 1972ರಲ್ಲಿ ಭಾರತೀಯ ಸ್ಟೇಟ್‌ಬ್ಯಾಂಕ್‌ನಲ್ಲಿ ಆರಂಭವಾಯಿತು. ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಆರಂಭವಾದ ಕನ್ನಡ ಸಂಘಗಳು ನಂತರ ಆಯಾ ಬ್ಯಾಂಕ್‌ಗಳ ಕನ್ನಡ ವಿರೋ ಧೋರಣೆಯ ಪ್ರತಿಭಟನೆಗೂ ವೇದಿಕೆಯಾದವು.
 ಆಗೆಲ್ಲ ನಮ್ಮ ಬ್ಯಾಂಕ್‌ನಲ್ಲಿ ಪರಭಾಷಿಕರ ಹಾವಳಿ ವಿಪರೀತವಾಗಿತ್ತು. ಆಗ ಪರಭಾಷಿಕರೆಂದರೆ- ತಮಿಳು, ತೆಲುಗು, ಮಲೆಯಾಳಿಗಳೇ. ಬ್ಯಾಂಕ್‌ನ ಉನ್ನತ ಹುದ್ದೆ ಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಈ ಪರಭಾಷಿಕರೇ ತುಂಬಿಕೊಂಡು ಕನ್ನಡಿಗರನ್ನು ಮೂಲೆಗುಂಪು ಮಾಡಿದ್ದರು. ಕನ್ನಡ ನೆಲದಲ್ಲೇ ಹುಟ್ಟಿದ ಬ್ಯಾಂಕಾದರೂ ನಾವೆಲ್ಲ ನಮ್ಮ ಬ್ಯಾಂಕ್‌ನಲ್ಲೇ ಪರಕೀಯರಾಗಿರಬೇಕಾದ ಅಸಹನೀಯ ಸನ್ನಿವೇಶದಲ್ಲಿ ನಮ್ಮ ಕನ್ನಡಬಳಗ ಹುಟ್ಟಿ ಕೊಂಡಿತು. ಆಗಲೂ ಕರ್ನಾಟಕದೊಳಗೇನೇ ಕನ್ನಡ ಸಂಘ ಬೇಕೇ ಅಂತ ಪ್ರಶ್ನಿಸಿದವರು ಅನೇಕರು. ಗೋಕಾಕ್ ಚಳವಳಿಯ ಪ್ರಭಾವವೂ ಇದ್ದುದರಿಂದ ಇದ್ದಕ್ಕಿದಂತೇ ಅನೇಕ ಬ್ಯಾಂಕ್‌ಗಳಲ್ಲಿ ಕನ್ನಡ ಸಂಘಗಳು ಆರಂಭವಾದವು. ಎಲ್ಲ ಸಂಘಗಳ ಒಕ್ಕೂಟವಾದ ಅಖಿಲ ಕರ್ನಾಟಕ ಬ್ಯಾಂಕ್ ಕನ್ನಡ ಸಂಘಗಳ ಪರಿಷತ್ ಕಾರ್ಯಾರಂಭ ಮಾಡಿತು. ಹಿಂದಿನ ಸೀಟಿಗೆ ತಳ್ಳಲ್ಪಟ್ಟಿದ್ದ ಕನ್ನಡವನ್ನು ಮುನ್ನೆಲೆಗೆ ತರಲು ಕನ್ನಡಿಗರ ಸಂಘಟನೆ ಎಷ್ಟು ಅನಿವಾರ್ಯ ಅನ್ನುವುದನ್ನು ರಾಜ್ಯಾದ್ಯಂತ ಗೋಕಾಕ್ ಚಳವಳಿ ಮೂಡಿಸಿದ ಸಂಚಲನವೇ ಹೇಳಿಕೊಟ್ಟಿತ್ತು.

ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೇ ಉದ್ಯೋಗ
ಸ್ಟೇಟ್‌ಬ್ಯಾಂಕ್ ಸಮೂಹದ ನೇಮಕಾತಿ ಮಂಡಳಿಯನ್ನು ಚೆನ್ನೆಯಿಂದ ಬೆಂಗಳೂರಿಗೆ ಸ್ಥಳಾಂತರ, ಪ್ರಾದೇಶಿಕ ನೇಮಕಾತಿ ಮಂಡಳಿ ಸ್ಥಾಪನೆ... ಹೀಗೆ ಬ್ಯಾಂಕ್‌ನಲ್ಲಿ ಕನ್ನಡಡವನ್ನು ಉಸಿರಾಡುವುದಕ್ಕೆ, ಕನ್ನಡದ ಗಾಳಿಯಾಡುವುದಕ್ಕೆ ಆಗ ನಾವೆಲ್ಲ ಕನ್ನಡ ಸಂಘಟನೆಗಳ ಮೂಲಕ ಸಾಕಷ್ಟು ಹೊಡದಾಡಿದ್ದೆವು. ಯಾವ ಬ್ಯಾಂಕ್‌ನಲ್ಲಿ ಕನ್ನಡ ವಿರೋ ಧೋರಣೆ ಪ್ರಕಟವಾದರೂ ಎಲ್ಲರೂ ಒಟ್ಟಾಗಿ ಅಲ್ಲಿಗೆ ದಾಂಗುಡಿಯಿಟ್ಟು ಪ್ರತಿಭಟನೆಗೆ ಇಳಿಯುತ್ತಿದ್ದುದೇ 80-90ರ ದಶಕದ ವೈಶಿಷ್ಟವಾಗಿತ್ತು. ಕನ್ನಡಿಗ ಉದ್ಯೋಗಿಗಳನ್ನು ನಬಾರ್ಡ್‌ನಲ್ಲಿ ವಜಾ ಮಾಡಿದ್ದನ್ನು ಪ್ರತಿಭಟಿಸಿ 102 ದಿನಳ ಕಾಲ ನಿರಂತರ ಪ್ರತಿಭಟಿಸಿ ಯಶಸ್ವಿಯಾದದ್ದು ಅವತ್ತಿಗೆ ಒಂದು ದಾಖಲೆಯೇ ಆಗಿತ್ತು. ಇಲ್ಲಿ ನಾವೆಲ್ಲ ಹೋರಾಡಿದೆವು. ಅಂದರೆ ನನ್ನನ್ನು ಬಿಟ್ಟು ಉಳಿದವರೆಲ್ಲ ಹೋರಾಡಿದರು ಅಂತ ಅರ್ಥ..!! ಕಾರಣವಿಷ್ಟೆ.-ಎಲ್ಲ ಹೋರಾಟಗಳೂ ಬೆಂಗಳೂರು ಕೇಂದ್ರಿತವಾಗಿದ್ದವು. ನಾನೇ ಮೈಸೂರಲ್ಲಿದೆ. ಆಗೊಮ್ಮೆ, ಈಗೊಮ್ಮೆ ಅ‘ತಿಥಿ’ ಪಾತ್ರದಲ್ಲಿ ಭಾಗಿಯಾದದ್ದು ಬಿಟ್ಟರೆ ನನ್ನ ಕಾರ್ಯ ಕ್ಷೇತ್ರ ಮೈಸೂರೇ ಆಗಿತ್ತು. ಅಲ್ಲಿ ನೂರಾರು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬ್ಯಾಂಕ್‌ನಲ್ಲಿ ಕನ್ನಡವನ್ನು ಜೀವಂತವಿರಿಸಲು ಪ್ರಯತ್ನಿಸಿದೆವು. ನಮ್ಮ ಬ್ಯಾಂಕ್‌ನಲ್ಲಿ ಬೆಂಗಳೂರು, ಮೈಸೂರು ಅಲ್ಲದೆ ಹಲವಾರು ಜಿಲ್ಲಾ ಕೇಂದ್ರ ತಾಲೂಕುಗಳಲ್ಲೂ ಕನ್ನಡ ಬಳಗದ ಘಟಕಗಳು ಆರಂಭವಾದವು.

ಈ ಎಲ್ಲ ಹೋರಾಟದ ಲವಾಗಿ ನಮ್ಮಲ್ಲಿ ಪ್ರತ್ಯೇಕ ಕನ್ನಡ ವಿಭಾಗವೇ ಅಕೃತವಾಗಿ ಆರಂಭವಾಯಿತು. ಕನ್ನಡ ರಾಜ್ಯೋತ್ಸವವನ್ನು ಬ್ಯಾಂಕೇ ಅಕೃತವಾಗಿ ಆಚರಿಸುವ ಪರಿಪಾಠವೂ ಆರಂಭವಾಯಿತು. ಕನ್ನಡಿಗ ಗ್ರಾಹಕರ, ಸಂಘಟನೆಗಳ ಒತ್ತಾಯದ ಮೇರೆಗೆ ದೈನಂದಿನ ವಹಿವಾಟಿಗೆ ಸಂಬಂಸಿದ ಚಲನ್‌ಗಳನ್ನೆಲ್ಲ ಕನ್ನಡದಲ್ಲೇ ಮುದ್ರಿಸಿದ್ದೆವು. ಎಲ್ಲ ಬ್ಯಾಂಕ್ ಶಾಖೆಗಳಿಗೂ ಕಳುಹಿಸಿದ್ದೆವು ಕೂಡ. ಮೈಸೂರಿನಲ್ಲಿ ನ. ನಾಗಲಿಂಗಸ್ವಾಮಿ ಅನ್ನುವ ಕನ್ನಡ ಚಳುವಳಿಗಾರರಿದ್ದರು. ಒಂದು ದಿನ ಸ್ಥಳೀಯ ಪತ್ರಿಕೆ ಯೊಂದರಲ್ಲಿ - ‘ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಚಲನ್‌ಗಳೇ ಇಲ್ಲ. ಹಾಗಾಗಿ ಬ್ಯಾಂಕ್‌ಗಳ ಮುಂದೆ ಪ್ರತಿಭಟನೆ ಚಳವಳಿ ಮಾಡ್ತೀವಿ’ ಅಂತ ಘೋಷಿಸಿದರು. ನಾನು ಅದಕ್ಕೆ ಅಂಕಿ-ಅಂಶಗಳ ಸಹಿತ ಉತ್ತರಿಸಿದೆ. ದಯವಿಟ್ಟು ನಮ್ಮ ಬ್ಯಾಂಕ್‌ಗೆ ಬನ್ನಿ. ಕಳೆದೊಂದು ವರ್ಷದ ಅಂಕಿ ಅಂಶ ದಾಖಲೆ ಸಹಿತ ಕೊಡುತ್ತೇವೆ. ಎಲ್ಲ ಕೌಂಟರುಗಳಲ್ಲೂ ಕನ್ನಡ ಭಾಷೆ ಮುದ್ರಿಸಿದ ಚಲನ್‌ಗಳನ್ನಿಟ್ಟಿದ್ದೇವೆ.

ಕನ್ನಡದಲ್ಲೇ ಬರೆಯಿರು ಅಂತಲೂ ಸೂಚಿಸಿದ್ದೇವೆ. ಆದರೂ ಇಡೀ ವರ್ಷದಲ್ಲಿ ಕನ್ನಡದಲ್ಲಿ ಚೆಕ್, ಚಲನ್ ಬರೆದವರ ಸಂಖ್ಯೆ ಇಪ್ಪತ್ತನ್ನು ಮೀರುವುದಿಲ್ಲ. ನೀವು ಪ್ರತಿಭಟಿಸಬೇಕಾದ್ದು ಕನ್ನಡ ಚಲನ್ ನೀಡದ ಬ್ಯಾಂಕ್‌ಗಳ ವಿರುದ್ಧ ಅಲ್ಲ. ಚಲನ್ ಕೊಟ್ಟರೂ ಇಂಗ್ಲಿಷ್‌ನಲ್ಲೇ ಬರೆಯುವ ನಿರಭಿಮಾನಿ ಕನ್ನಡಿಗರ ಮನೆ ಮುಂದೆ...!! ಆಮೇಲೆ ಸುಮ್ಮನಾದರು.
ನಾವು ಕನ್ನಡ ಸಂಘಟನೆ ಆರಂಭಿಸಿದ ನಂತರ ಗ್ರಾಹಕರ ಕಡೆಯಿಂದ ಗಮನಾರ್ಹ ಬದಲಾವಣೆ ಕಾಣದಿದ್ದರೂ ಬ್ಯಾಂಕ್‌ನೊಳಗೆ ಆಡಳಿತ ದೃಷ್ಟಿಯಿಂದ ಒಂದಿಷ್ಟು ಬದಲಾವಣೆಯಾದದ್ದಂತೂ ನಿಜ. ಅದುವರೆಗೆ ಕನ್ನಡವನ್ನು ಎನ್ನಡ, ಎಕ್ಕಡ ಅಂತೆಲ್ಲ ಗೇಲಿ ಮಾಡಿದ್ದವರು ಗಪ್‌ಚುಪ್ಪಾದರು!! ಕನ್ನಡ ಚಟುವಟಿಕೆಗಳ ಬಗ್ಗೆ ನಾವೇನೇ ಬೇಡಿಕೆ ಇಟ್ಟರೂ ಅದಕ್ಕೆ ನಿ ಮಂಜೂರು ಮಾಡಿಸಿಕೊಳ್ಳುವಷ್ಟು ಕನ್ನಡ ತಾಕತ್ತನ್ನು ಬೆಳೆಸಿಕೊಂಡೆವು.

  ಬ್ಯಾಂಕ್‌ಗಳಲ್ಲಿ ಕನ್ನಡ ಬೆಳವಣಿ ಗೆಯ ಬಗ್ಗೆ ಹೇಳುವಾಗ ಭಾರತೀಯ ಸ್ಟೇಟ್‌ಬ್ಯಾಂಕ್ ಕನ್ನಡ ಸಂಘಗಳು ಸಮನ್ವಯ ಸಮಿತಿ ಹಾಗೂ ಲೇಖಕ ಪ್ರಾಚಾರ್ಯ ಎಚ್ಚೆಸ್ಕೆಯವರ ಅನುಪಮ ವೌಲಕ ಕೊಡುಗೆಯನ್ನು ಸ್ಮರಿಸಲೇ ಬೇಕು. ‘ಸುಧಾ’ ಪತ್ರಿಕೆಯಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ‘ವಾರದ ವ್ಯಕ್ತಿ’ ಅನ್ನುವ ಜನಪ್ರಿಯ ಅಂಕಣ ಬರೆದ ಮೂರಕ್ಷರದ ಮೋಡಿಗಾರ ‘ಎಚ್ಚೆಸ್ಕೆ’ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಬ್ಯಾಂಕ್‌ಗಳಲ್ಲಿ ಕನ್ನಡ ವಾಂಯ ಬೆಳೆಸಲು ಅವರು ನೀಡಿದ ಕೊಡುಗೆ ಅನನ್ಯವಾದದ್ದು. ಈ ವಿಚಾರ ಬಹಳ ಮಂದಿಗೆ ಗೊತ್ತಿಲ್ಲ.
 ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿ ಎಚ್ಚೆಸ್ಕೆಯವರ ಸಂಪಾದಕತ್ವದಲ್ಲಿ ‘ಬ್ಯಾಂಕಿಂಗ್ ಪ್ರಪಂಚ’ ಅನ್ನುವ ತ್ರೈಮಾಸಿಕ ಪ್ರಕಟಿಸಲಾರಂಭಿಸಿದಾಗ ಅದಕ್ಕೆ ಬೇಕಾದ ಲೇಖನ ಪರಿಕರ ಸಂಗ್ರಹಿಸಲು ಆರು ತಿಂಗಳಿ ಗೊಮ್ಮೆ ಆಗೆಲ್ಲ ನಮ್ಮ ಬ್ಯಾಂಕ್‌ನಲ್ಲಿ ಪರಭಾಷಿಕರ ಹಾವಳಿ ವಿಪರೀತವಾಗಿತ್ತು. ಆಗ ಪರಭಾಷಿಕರೆಂದರೆ- ತಮಿಳು, ತೆಲುಗು, ಮಲೆಯಾಳಿಗಳೇ. ಬ್ಯಾಂಕ್‌ನ ಉನ್ನತ ಹುದ್ದೆ ಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಈ ಪರಭಾಷಿಕರೇ ತುಂಬಿಕೊಂಡು ಕನ್ನಡಿಗರನ್ನು ಮೂಲೆಗುಂಪು ಮಾಡಿದ್ದರು. ಕನ್ನಡ ನೆಲದಲ್ಲೇ ಹುಟ್ಟಿದ ಬ್ಯಾಂಕಾದರೂ ನಾವೆಲ್ಲ ನಮ್ಮ ಬ್ಯಾಂಕ್‌ನಲ್ಲೇ ಪರಕೀಯರಾಗಿರಬೇಕಾದ ಅಸಹನೀಯ ಸನ್ನಿವೇಶದಲ್ಲಿ ನಮ್ಮ ಕನ್ನಡ ಬಳಗ ಹುಟ್ಟಿಕೊಂಡಿತು. ಆಗಲೂ ಕರ್ನಾಟಕದೊಳಗೇನೇ ಕನ್ನಡ ಸಂಘ ಬೇಕೇ ಅಂತ ಪ್ರಶ್ನಿಸಿದ ವರು ಅನೇಕರು. ಗೋಕಾಕ್ ಚಳವಳಿಯ ಪ್ರಭಾವವೂ ಇದ್ದುದರಿಂದ ಇದ್ದಕ್ಕಿದಂತೇ ಅನೇಕ ಬ್ಯಾಂಕ್‌ಗಳಲ್ಲಿ ಕನ್ನಡ ಸಂಘಗಳು ಆರಂಭವಾದವು.

ಎಲ್ಲ ಸಂಘಗಳ ಒಕ್ಕೂಟವಾದ ಅಖಿಲ ಕರ್ನಾಟಕ ಬ್ಯಾಂಕ್ ಕನ್ನಡ ಸಂಘಗಳ ಪರಿಷತ್ ಕಾರ್ಯಾರಂಭ ಮಾಡಿತು. ‘ಬ್ಯಾಂಕಿಂಗ್ ಕಮ್ಮಟ’ ನಡೆಸುವ ಪರಿಕಲ್ಪನೆ ಕೊಟ್ಟರು. ಕನ್ನಡದಲ್ಲಿ ಬ್ಯಾಂಕಿಂಗ್ ಕುರಿತು ಲೇಖನಗಳು, ಪಾರಿ ಭಾಷಾ ಶಬ್ದಗಳನ್ನು ಹುಟ್ಟು ಹಾಕುವ ಸಲುವಾಗಿ ಆರಂಭಿಸಿದ ಈ ಆರು ದಿನಗಳ ಕಮ್ಮಟ-ನಿಜ ಅರ್ಥದಲ್ಲಿ ಬ್ಯಾಂಕಿಂಗ್ ಸಾಹಿತ್ಯ ಸೃಷ್ಟಿಯ ಕುಲುಮೆಯೇ ಹೌದು!! ಪ್ರತೀ ಆರು ತಿಂಗಳಿಗೊಮ್ಮೆ 80-90ರ ದಶಕದಲ್ಲಿ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ಹೊರನಾಡ ಸೊಲ್ಲಾಪುರ, ಕಾಸರಗೋಡುಗಳ ಲ್ಲಿಯೂ ಸಂಯೋಜಿಸಲ್ಪಟ್ಟ ಈ ಬ್ಯಾಂಕಿಂಗ್ ಕಮ್ಮಟ ಅತ್ಯಂತ ವಿಶಿಷ್ಟವಾದದ್ದು. ಸಮನ್ವಯ ಸಮಿತಿ ಅನೇಕ ಕನ್ನಡ ಪರ ಸಂಘ ಸಂಸ್ಥೆಗಳ ನೆರ ವಿನಿಂದ 27 ಕಮ್ಟಟಗಳನ್ನು ಸಂಯೋಜಿಸಿದ್ದು ನಿಜಕ್ಕೂ ಒಂದು ಸಾಹಸವೇ ಸರಿ. ಬಹುಶಃ ಭಾರತದ ಯಾವ ಭಾಷೆಯಲ್ಲೂ ಇಂತಹ ಬ್ಯಾಂಕಿಂಗ್ ಕಮ್ಮಟಗಳು ನಡೆದಿರಲಿಕ್ಕಿಲ್ಲ!!

 ನಾನೇ ಸ್ವತಃ ನಾಲ್ಕೆದು ಕಮ್ಮಟಗಳಲ್ಲಿ ಭಾಗವಹಿಸಿದ್ದೇನೆ. ತಲಾ ಆರು ದಿನಗಳ ಇಪ್ಪತ್ತೇಳು ಕಮ್ಮಟಗಳೂ ಪ್ರೊ. ಎಚ್ಚೆಸ್ಕೆಯವರ ನೇತೃತ್ವದಲ್ಲೇ ನಡೆಯಿತೆನ್ನುವುದೂ ಒಂದು ದಾಖಲೆಯೇ. ಶಿಬಿರದ ಚಟುವಟಿಕೆ ಹೇಗಿ ರುತ್ತಿತ್ತು ಎಂದರೆ ಪ್ರತಿದಿನ ಬೆಳಗ್ಗೆ ಕಮ್ಮಟಿ ಗರಿಂದ ಬ್ಯಾಂಕಿಂಗ್ ವಿಚಾರದ ಕುರಿತು ಪ್ರಬಂಧ ಮಂಡನೆ ಪ್ರತೀ ಕಮ್ಮಟದಲ್ಲೂ 20-30 ಕನ್ನಡಿಗರಿಗೆ ಅವಕಾಶ. ಪ್ರತೀ ಕಮ್ಮಟಿ ಗನೂ ಕಮ್ಮಟಕ್ಕೆ ಬರುವಾಗಲೇ ಪ್ರಬಂಧ ರಚಿಸಿ ತರಬೇಕು. ಕಮ್ಮಟದಲ್ಲಿ ಪ್ರಬಂಧ ಮಂಡನೆ ಯ ನಂತರ ಉಳಿದೆಲ್ಲ ಕಮ್ಮಟಿಗರೂ ಅದನ್ನು ವಿಮರ್ಶಿಸಲೇಬೇಕು. ಎಲ್ಲರ ವಿಮರ್ಶೆಯ ನಂತರ ಅದನ್ನೆಲ್ಲ ಕ್ರೋಡೀಕರಿಸಿ ಎಚ್ಚೆಸ್ಕೆಯವರು ಭರತವಾಕ್ಯ ಹೇಳುತ್ತಾರೆ. ಎಲ್ಲೆಲ್ಲಿ ಪರಿಷ್ಕರಿಸ ಬೇಕು, ತಿದ್ದಬೇಕು ಅಂತೆಲ್ಲ ವಿವರವಾದ ಸೂಚನೆ ಕೊಡುತ್ತಾರೆ. ಕಮ್ಮಟಿಗರು ಅದರಂತೇ ಪರಿಷ್ಕರಿಸಿ ಎಚ್ಚೆಸ್ಕೆಯ ವರಿಗೆ ಕೊಡಬೇಕು. ಮಧ್ಯಾಹ್ನ ನಂತರ ಆಂಗ್ಲ ಭಾಷೆಯ ಬ್ಯಾಂಕಿಂಗ್ ಕುರಿತ ಲೇಖನವೊಂದರ ಅನುವಾದ ಪ್ರಕ್ರಿಯೆ. ಎಚ್ಚೆಸ್ಕೆಯವರು ಲೇಖನವೊಂದನ್ನು ಆಯ್ದು ಅಷ್ಟು ಕಮ್ಮಟಿಗರಿಗೆ ಇಷ್ಟಿಷ್ಟು ಪ್ಯಾರಾ ಅನುವಾದಿಸಬೇಕೆಂದು ಹಂಚಿಕೊಡುತ್ತಾರೆ.

ರಾತ್ರಿ ಹೊತ್ತು ನಮಗೆ ಕೊಟ್ಟ ಭಾಗಗಳನ್ನು ಅನುವಾದಿಸಿ ಬರೆದು ತಂದು ಅನುಕ್ರಮವಾಗಿ ಮಂಡಿಸಬೇಕು. ಮಂಡಿಸಿದ ಅನುವಾದದ ಬಗ್ಗೆ ಎಲ್ಲರೂ ಚರ್ಚಿಸಿ ಅದ ಕ್ಕೊಂದು ರೂಪ ಕೊಡ ಲಾಗುತ್ತದೆ. ಪಾರಿಭಾಷಿಕ ಪದಗಳು ಹೇಗಿರಬೇಕು ಅನುವಾದ ಹೇಗಿರ ಬೇಕು ಎಲ್ಲವನ್ನೂ ಎಚ್ಚೆಸ್ಕೆ ಯವರು ಎಳೆಎಳೆ ಯಾಗಿ ವಿವರಿಸುತ್ತಾರೆ. ಮಾರ್ಗ ದರ್ಶನ ಮಾಡುತ್ತಾರೆ. ಸಂಜೆ ಹೊತ್ತು ಕಮ್ಮಟಿಗರ ಪ್ರತಿಭಾ ಪ್ರದರ್ಶನ, ರಸಪ್ರಶ್ನೆ, ಸಂಗೀತ, ನಾಟಕ ಇತ್ಯಾದಿ ಕಾರ್ಯಕ್ರಮಗಳಿ ರುತ್ತವೆ. ಕೊನೇ ದಿನ ಎಲ್ಲ ಕಮ್ಮಟಿಗರಿಗೂ ಬಿರುದು ಪ್ರದಾನ ಕಾರ್ಯಕ್ರಮವೂ ಇರುತ್ತದೆ. ಅದಕ್ಕೆಂದು ಸಮಿತಿಯೂ ಇರುತ್ತದ. ಉದಾಹರಣೆಗೆ ಎಚ್ಚೆಸ್ಕೆ ಯವರಿಗೆ ‘ಶತಕಮ್ಮಟಾೀಶ’ ನನಗೆ ‘ಕಮ್ಮಟ ಚಿತ್ರಕಾರ’, ಹೆಚ್ಚು ಮಾತನಾಡದ ಮಹಿಳೆಗೆ ‘ವೌನ ಕಮ್ಮಟಗಿತ್ತಿ’, ವಟವಟ ಮಾತನಾಡುವ ರಾಜೇಶ್ವರಿಗೆ ‘ವಟವಟೇಶ್ವರಿ’ ಹೀಗೆ ಬಿರುದು ಭಾವಲಿ ನೀಡಲಾಗುತ್ತದೆ.

ಈ ಕಮ್ಮಟಗಳ ಮೂಲಕ ಬ್ಯಾಂಕಿಂಗ್ ಸಾಹಿತ್ಯಕ್ಕೆ ನೀಡಿದ ಅತ್ಯಂತ ಮಹ ತ್ವದ ಕೊಡುಗೆ ಎಂದರೆ ಇಂಗ್ಲಿಷಿನ 3,000 ಬ್ಯಾಂಕಿಂಗ್ ಪದಗಳಿಗೆ ಕನ್ನಡದ ಸಮಾ ನಾರ್ಥಕ ಪದಗಳನ್ನು, ಅವುಗಳಿಗೆ ಅರ್ಥ ವಿವರಣೆಯನ್ನೂ ನೀಡುವ ‘ಬ್ಯಾಂಕಿಂಗ್ ನಿಘಂಟು’ ಪ್ರಕಟನೆ. ಇದು ಎಚ್ಚೆಸ್ಕೆಯವರು ಕನ್ನಡ ಬ್ಯಾಂಕಿಂಗ್ ಜಗತ್ತಿಗೆ ನೀಡಿದ ಅತ್ಯಂತ ವೌಲಿಕ ಕೊಡುಗೆ.
ಸಾಹಿತ್ಯ, ಚಿತ್ರಕಲೆ, ನಾಟಕ, ಸಿನೆಮಾ, ಪಠ್ಯ ಪುಸ್ತಕ ಹೀಗೆ ಅನೇಕ ಬಗೆಯ ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೇನೆ. ಆದರೆ ಈ ಬ್ಯಾಂಕಿಂಗ್ ಕಮ್ಮಟ ಮಾತ್ರ ಅದೆಲ್ಲಕ್ಕಿಂತ ಬೇರೇ ವಿಶಿಷ್ಟ ಅನುಭವ ನೀಡಿದ್ದು ಸುಳ್ಳಲ್ಲ. ಇದೆಲ್ಲ 80-90ರ ದಶಕದ ಕನ್ನಡ ಬ್ಯಾಂಕಿಂಗ್ ಪ್ರಪಂಚದ ಸಮಾಚಾರ ಮತ್ತೆ ಎಚ್ಚೆಸ್ಕೆ ಸಂಪಾದಕತ್ವದ ‘ಬ್ಯಾಂಕಿಂಗ್ ಪ್ರಪಂಚ’ ತ್ರೈಮಾಸಿಕ 1983ರಿಂದ 1997 ರವರೆಗೆ ಪ್ರಕಟ ಗೊಂಡು 2002ರಲ್ಲೊಂದು ಸಂಚಿಕೆ ಪ್ರಕಟಿಸಿ ಕೊನೆಯುಸಿ ರೆಳೆಯಿತು.
1980ರಿಂದ ಆರಂಭವಾದ ಈ ಕನ್ನಡದ ಕುರಿತು ಹೋರಾಟ ಹಾರಾಟಗಳೆಲ್ಲ 2000ದ ಹೊತ್ತಿಗೆ ನಿಲ್ಲುವ ಹಂತಕ್ಕೆ ತಲುಪಿದವು. 90ರ ದಶಕದಲ್ಲಿ ಆರಂಭವಾದ ಜಾಗತೀಕರಣದ ಅಲೆಗಳು ಕನ್ನಡದ ಕುರಿತಾದ ಹೋರಾಟದ ಹುಮ್ಮಸ್ಸನ್ನೇ ಕಸಿಯತೊಡಗಿದವು. ತಂತ್ರಜ್ಞಾನದ ಅಳವಡಿಕೆ, ಜಾಗತೀಕರಣದ ಪ್ರಭಾವದಿಂದಾಗಿ ಬ್ಯಾಂಕ್‌ಗಳಲ್ಲಿ ಭಾಷೆಯ ಕುರಿತ ದೃಷ್ಟಿಕೋನವೂ ಬದಲಾಗುತ್ತ ಹೋಯಿತು. ಹೋರಾಟದ ಹುಮ್ಮಸ್ಸು ಆರುವುದಕ್ಕೆ ಇನ್ನೊಂದು ಕಾರಣ ಆಂಗ್ಲ ಮಾಧ್ಯಮದಲ್ಲಿ ಓದಿ ಬಂದ ಹೊಸ ಪೀಳಿಗೆಯ ಉದ್ಯೋಗಿಗಳಿಗೆ ಕನ್ನಡ ಭಾಷೆಯ ಕುರಿತು ಅಷ್ಟಾಗಿ ಪ್ರೀತಿ ಗೌರವವಿಲ್ಲದಿರುವುದು.

ಕಳೆದೊಂದು ದಶಕದಲ್ಲಿಯೂ ಬ್ಯಾಂಕಿನಲ್ಲಿ ಕನ್ನಡ ಸಂಘಗಳ ಕಾರ್ಯ ಕ್ರಮದಲ್ಲಿ ಹೊಸ ತರುಣ ಮುಖಗಳಿಗಿಂತ, ಹಳೆಯ ನಿವೃತ್ತಿಯಂಚಿನ, ನಿವೃತ್ತಗೊಂಡ ಮುಖಗಳೇ ಕಾಣಿಸುತ್ತಿವೆ. ಹಾಗಂತ ಹಿಂದೆಲ್ಲ ಕನ್ನಡದ ಅಭಿಮಾನ ಉಕ್ಕಿ ಹರಿಯುತ್ತಿತ್ತು ಎಂದರ್ಥವಲ್ಲ.
ಕಡೆಗೂ ನಾವೆಲ್ಲ ಕಂಡುಕೊಂಡ ‘ಸತ್ಯ’ ವೆಂದರೆ ಬ್ಯಾಂಕಿನಲ್ಲಿ ಕನ್ನಡ ಬಳಕೆಗೆ ಹಲವು ಮಿತಿಗಳಿವೆ ಎಂದು. ಹಾಗಂತ ನಮ್ಮಲ್ಲಿ ಬಹುಪಾಲು ಉದ್ಯೋಗಿಗಳು ಅದೇ ಮಿತಿಯನ್ನೇ ನೆಪವಾಗಿಸಿಕೊಂಡು ಇಂಗ್ಲಿಷಿನ ಮೊರೆಹೋದರು. ತಮಿಳರು, ಮಲೆಯಾಳಿಗಳು ಬ್ಯಾಂಕಿಂಗನ್ನೇ ತಮ್ಮ ಭಾಷೆಯ ಲಯಕ್ಕೆ ಒಗ್ಗಿಸಿಕೊಂಡರೆ ಆ ಬಗೆಯ ಬದ್ಧತೆಯಾಗಲಿ. ಅಸೀಮ ಭಾಷಾ ಪ್ರೇಮವಾಗಲಿ ನಮಗಿಲ್ಲವಾದುದರಿಂದ ನಾವು ಬ್ಯಾಂಕಿಂಗನ್ನು ಆಂಗ್ಲ ಭಾಷೆಗೊಗ್ಗಿಸಿಕೊಂಡೆವು.!!
ಈಗೀಗ ಬ್ಯಾಂಕ್‌ನಲ್ಲಿ ಕನ್ನಡದ ಬಗ್ಗೆ ಮಾತನಾಡುವುದಕ್ಕೆ ಅಂತಹ ಉತ್ಸಾಹವೇ ಉಳಿದಿಲ್ಲ. ಸ್ವಾರಸ್ಯದ ಸಂಗತಿ ಎಂದರೆ 80-90ರ ದಶಕಗಳಲ್ಲಿ ತಮಿಳು, ತೆಲುಗು, ಮಲಯಾಳಿಗಳು ನಮಗೆ ಪರಭಾಷಿಕರಾಗಿದ್ದರು. ಆದರೆ ಈಗ ಅವರೆಲ್ಲ ನಮ್ಮವರೇ ಆಗಿ, ಬಿಹಾರ, ಒಡಿಶಾ, ಜಾರ್ಖಂಡ್, ಉತ್ತರಪ್ರದೇಶದವರೆಲ್ಲ ನಮಗೆ ಪರಭಾಷಿಕರಾಗಿದ್ದಾರೆ. ಇನ್ನೇನು ಇಲ್ಲಿನ ಎಲ್ಲ ಬ್ಯಾಂಕ್‌ಗಳಲ್ಲೂ ಕನ್ನಡಿಗರು ಅಲ್ಪಸಂಖ್ಯಾಕರಾಗುವ ದಿನ ದೂರವಿಲ್ಲ.

90ರ ದಶಕದ ವರೆಗೆ ಬ್ಯಾಂಕ್‌ಗಳಲ್ಲಿ ನೇಮಕಾತಿಗೆ ಸ್ಥಳೀಯ ಭಾಷಾಜ್ಞಾನ ಕಡ್ಡಾಯವಾಗಿತ್ತು. ಅನಂತರ ಅದನ್ನು ಅಪೇಕ್ಷಣೀಯ ಅಂತ ಬದಲಾಯಿಸಲಾಯಿತು. ಈ ಬದಲಾವಣೆ ವಿರುದ್ಧ ಸಾಕಷ್ಟು ಹೋರಾಟ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ. ಈಗ ನೀವು ಯಾವುದೇ ಬ್ಯಾಂಕ್‌ಗೆ ಹೋಗಿ. ‘‘ಕನ್ನಡ್ ಸಮಜ್‌ತಾ ನಹೀ.. ಹಿಂದೀ ಮೇ ನೈತೋ ಅಂಗ್ರೇಜಿ ಮೇ ಬೋಲಿಯೇ..’ ಅನ್ನು ಸದ್ದೇ ಕೇಳಿಬರುತ್ತದೆ..!!
ಇದನ್ನೆಲ್ಲ ಕಂಡ ಒಬ್ಬ ಕನ್ನಡ ಭಾಷಾಭಿಮಾನಿ ಗೆಳೆಯ ‘ಬ್ಯಾಂಕ್‌ನಲ್ಲಿ ಕನ್ನಡ ಭಾಷೆಯ ಮೆರವಣಿಗೆ ಎಂದೋ ನಿಂತು ಹೋಗಿದೆ. ಈಗ ನಡೀತಿರೋದು ಕನ್ನಡಾಭಿಮಾನಗಳ ಶವದ ಪೆಟ್ಟಿಗೆಯ ಮೆರವಣಿಗೆ ಮಾತ್ರ’ ಅಂತ ನೋವಿನಿಂದ ಹೇಳುತ್ತಾನೆ. ಈ ಮಾತು ಕೇಳುವುದಕ್ಕೆ ಅತ್ಯಂತ ಕ್ರೂರ ಅನ್ನಿಸಬಹುದು. ಆದರೆ ಅದು ಒಪ್ಪಿಕೊಳ್ಳಲೇಬೇಕಾದ ಕಟು ಸತ್ಯವೂ ಹೌದು..!!

Writer - ಗಿರಿಧರ ಕಾರ್ಕಳ

contributor

Editor - ಗಿರಿಧರ ಕಾರ್ಕಳ

contributor

Similar News