ಅಂಬೇಡ್ಕರ್ ಮೌಲಾನ ಆಝಾದ್ ಎಂಬ ರೂಪಕಗಳು ಇಂದಿನ ಸಂದರ್ಭದ ಆವಶ್ಯಕತೆಯೇ?

Update: 2016-10-13 09:27 GMT

ಮೇಲ್ನೋಟಕ್ಕೆ ಅಂಬೇಡ್ಕರ್ ಹಾಗೂ ಆಝಾದ್ ಇಬ್ಬರೂ ಉದಾರವಾದಿಗಳು, ಒಂದು ರೀತಿಯ ಸಮಾಜವಾದವನ್ನು ಒಪ್ಪಿದವರು, ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಒಪ್ಪಿದ ವರು ಹಾಗೂ ಕೋಮುವಾದದ ವಿರೋಗಳು. ಆದರೆ, ಕಾಂಗ್ರೆಸ್ ಹಾಗೂ ಗಾಂಯ ವಿಚಾರ ಬಂದಾಗಲೆಲ್ಲಾ ಪರ-ವಿರೋಗಳಾಗುತ್ತಾರೆ.

ಇತ್ತೀಚಿನ ಒಂದು ಚರ್ಚೆ ಈ ಸಂದರ್ಭದಲ್ಲಿ ಬಹಳ ಮಹತ್ವವೆನಿಸುತ್ತದೆ. ಈ ಚರ್ಚೆ ಮೂಲತಃವಾಗಿ ಇಂದಿನ ದಲಿತ-ಮುಸ್ಲಿಮರ ನಡುವೆ ಸಾಮಾಜಿಕವಾಗಿ ಹಾಗೂ ತಾತ್ವಿಕ ಸಮನ್ವಯತೆಯನ್ನು ಸಾಸಲು ಅಗತ್ಯವಿದೆಯೇ? ಇದ್ದರೆ ಅದು ಯಾವ ಸ್ವರೂಪದಲ್ಲಿರಬೇಕು? ಎರಡನೆಯದಾಗಿ, ಈ ರೀತಿಯ ಸಮನ್ವಯತೆಯನ್ನು ಯಾವ ರೂಪಕಗಳನ್ನು ಉಪಯೋಗಿಸಿ ಸಾಸಬಹುದು? ಸಮುದಾಯಗಳ ಐಡೆಂಟಿಗಳನ್ನು ಪ್ರತಿನಿಸುವ ಅಂಬೇಡ್ಕರ್ ಹಾಗೂ ವೌಲಾನ ಅಬುಲ್ ಕಲಾಂ ಆಝಾದ್‌ರನ್ನು ರೂಪಕಗಳಾಗಿ ಉಪಯೋಗಿಸಬಹುದೇ?

ಈ ರೀತಿಯ ಚರ್ಚೆ ಆರಂಭಗೊಳ್ಳಲು ಕಾರಣಗಳಿವೆ. ದಲಿತ ಮತ್ತು ಮುಸ್ಲಿಂ ಸಮುದಾ ಯಗಳು ಅಭಿವೃದ್ಧಿಯ ‘ಕೊರತೆ’, ಐಡೆಂಟಿಟಿ ಪ್ರಶ್ನೆಗಳಿಂದ, ಮಾರುಕಟ್ಟೆಯ ಅವಕಾಶಗಳಿಂದ, ಗುರುತಿಸುವಿಕೆ ರಾಜಕಾರಣದಿಂದ ಬಳಲುತ್ತಿದ್ದರೂ ಅವರಿಬ್ಬರ ನಡುವೆ ಸಂವಾದಗಳು ಏಕೆ ಅಸಾಧ್ಯವಾಗುತ್ತಿದೆ? ಅವರಿಬ್ಬರ ನಡುವಿನ ಅಂತರ ಏಕೆ ಇನ್ನಷ್ಟು ಹೆಚ್ಚಾಗುತ್ತಿದೆ ? ಇದಕ್ಕೆ ಉತ್ತರವನ್ನು ದಿನನಿತ್ಯದ ದೌರ್ಜನ್ಯದ ಸಂದರ್ಭದಲ್ಲಿ, ಎದುರಿಸುತ್ತಿರುವ ವೈರುಧ್ಯಗಳಲ್ಲಿ, ಅವಕಾಶಗಳ ನಷ್ಟಗಳಲ್ಲಿ ನೋಡಬಹುದು. ದಲಿತರ ಮೇಲಿನ ಜಾತಿಯ ದೌರ್ಜನ್ಯಗಳು ನಡೆದ ಸಂದರ್ಭ ದಲ್ಲಿ ಮುಸ್ಲಿಮರು ಪ್ರತಿಕ್ರಿಯಿಸುವುದೇ ಇಲ್ಲ. ಅದೇ ರೀತಿ ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆದಾಗ ಲೆಲ್ಲ ದಲಿತರು ವೌನಿಗಳಾಗುತ್ತಾರೆ ಪ್ರತಿಕ್ರಿಯಿಸು ವುದಿಲ್ಲ, ಇದಕ್ಕೆ ಕಾರಣಗಳೇನು?


ಇದಕ್ಕೆ ಕಾರಣಗಳನ್ನು ಹುಡುಕಬಹುದು, ದಲಿತರು ಮತ್ತು ಮುಸ್ಲಿಮರು ಇರುವ ಪ್ರದೇಶ ಹೆಚ್ಚು ಕಡಿಮೆ ಬೇರೆ ಬೇರೆ. ನಗರ ಪ್ರದೇಶಗಳಲ್ಲಿ ಅಕವಾಗಿ ಎದುರು ಬದುರಾಗಿ ಜೀವಿಸುವುದು ಈ ಸಮುದಾ ಯಗಳು ಸ್ಲಂಗಳಲ್ಲಿ. ಅದರರ್ಥ ದಲಿತರು ಹಾಗೂ ಮುಸ್ಲಿಮರು ಸಮಷ್ಟಿಯಾದ ಸಮುದಾಯವಾಗಿ ಜೀವಿಸುತ್ತಿದ್ದಾರೆ ಎಂದರ್ಥವಲ್ಲ. ವಾಸ್ತವವಾಗಿ ದಲಿತರಿಗೂ- ಮುಸ್ಲಿಮರ ಜೀವನ ಬದುಕಿಗೂ ವ್ಯತ್ಯಾಸಗಳಿವೆ, ಮುಸ್ಲಿಮರು ದಲಿತರ ಪ್ರಾಥಮಿಕ ವಿರೋಗಳಲ್ಲ ಅಥವಾ ವೈರುಧ್ಯಗಳಲ್ಲ ಅದರೊಂದಿಗೆ ಈ ಸತ್ಯವನ್ನು ಕೂಡ ಅರಿಯಬೇಕು. ದಲಿತರೆಲ್ಲ ಸ್ವತಂತ್ರಗೊಂಡ ಸ್ವಾಯತ್ತ ಸಮುದಾಯಗಳಲ್ಲ. ಹಳ್ಳಿಗಳಲ್ಲಿ ಈಗಲೂ ದಲಿತರ ವಿಮೋಚನೆ ಸಂಪೂರ್ಣಗೊಳ್ಳದ ಪ್ರಕ್ರಿಯೆ. ಅವರಿಗೆ ಭೂ ಸಂಬಂ ವಿಷಯಗಳು ಈಗಲೂ ಪ್ರಮುಖ. ಅವರ ಪ್ರಾಥಮಿಕ ವಿರೋಗಳು ಈಗಲೂ ಸವರ್ಣೀಯರು, ಭೂ ಮಾಲಕರು ಹಾಗೂ ಮೇಲ್ಜಾತಿ ಗಳು. ಆದಕಾರಣ ಗ್ರಾಮೀಣ ಪ್ರದೇಶದಲ್ಲಿ ಜಾತಿಯ ಸಂಘ ರ್ಷದ ಆಳದಲ್ಲಿ ಭೂ ಸಂಬಂ ವಿಷಯಗಳಿರುವುದು ಅಷ್ಟೇ ಸ್ಪಷ್ಟ.

ಮುಸ್ಲಿಮರು ಒಂದು ಸ್ವಾಯತ್ತ ಸಮುದಾಯ. ಅವರಿಗೆ ಭೂ ಸಂಬಂ ವಿಷಯಗಳು ಹಾಗೂ ಅದರೊಟ್ಟಿಗೆ ಸೇರಿಕೊಂಡಿರುವ ಶೋಷಣೆ ಪ್ರಮುಖ ವಿಷಯವಾಗುವುದೇ ಇಲ್ಲ. ಅದರ ನೋವು, ಗಂಭೀರತೆ ಹಾಗೂ ಅದರ ಇತಿಹಾಸ ಮುಸ್ಲಿಮರಿಗೆ ಇಲ್ಲ. ಭೂ ಸಂಬಂ ಸಂಘರ್ಷಗಳು ನಡೆದಾಗಲೆಲ್ಲ ಮುಸ್ಲಿಮರು ಈ ಕಾರಣಕ್ಕಾಗಿಯೇ ವೌನವಾಗುತ್ತಾರೆ.

 ಮುಸ್ಲಿಮರ ಶೋಷಣೆಯ ರೂಪ ಹಾಗೂ ವೈರುಧ್ಯಗಳು ದಲಿತರಿಗಿಂತ ವಿಭಿನ್ನ. ಮುಸ್ಲಿಮರು ಅತೀ ಚಿಕ್ಕ ಮಾರುಕಟ್ಟೆಯಿಂದ ವಿಶಾಲವಾದ ಮಾರುಕಟ್ಟೆಯಲ್ಲಿ ಕಂಡುಬರುವುದು ಸಹಜ. ಗ್ರಾಮೀಣ ಪ್ರದೇಶದಲ್ಲಿ ಚಿಕ್ಕ ಪುಟ್ಟ ವ್ಯಾಪಾರಿಗಳಾಗಿ ಕಂಡುಬಂದರೆ, ನಗರ ಪ್ರದೇಶಗಳಲ್ಲಿ ಈ ಸ್ಥಿತಿಗಿಂತ ವಿಭಿನ್ನವೇನಿಲ್ಲ. ವಿಚಿತ್ರವೆಂದರೆ ಬಹಳಷ್ಟು ಕೋಮು ಸಂಘರ್ಷಗಳು ನಡೆಯುವುದು ಮಾರುಕಟ್ಟೆಯ ವಿಷಯದ ಮೇಲೆ. ಮೇಲ್ನೋಟಕ್ಕೆ ಕೋಮುಗಲಭೆಗಳು ವೈಯಕ್ತಿಕ ನೆಲೆಯಲ್ಲಿ ನಡೆಯಬಹುದು- ಇಲ್ಲವೇ ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯ ಬಹುದು, ಇಲ್ಲವೇ ಹೆಣ್ಣು-ಗಂಡು ವಿಷಯ ಕುರಿತು ಆಗಿರಬಹುದು. ಆದರೆ ಆಳದಲ್ಲಿ ಆರ್ಥಿಕತೆ ಹಾಗೂ ಮಾರುಕಟ್ಟೆಯ ವಿಷಯಗಳು ಪ್ರಮುಖವಾಗಿರುತ್ತವೆ. ಇದನ್ನು ಬೇರೆ ಬೇರೆ ಕೋಮು ಸಂಘರ್ಷದ ಸಂದರ್ಭದಲ್ಲಿ ನೋಡಬಹುದು. (ಉದಾಹರಣೆಗೆ ಮಂಗಳೂರಿನ ಕೋಮುಗಲಭೆ ಅಥವಾ ಬೆಂಗಳೂರಿನ ಕೋಮುಗಲಭೆ ಅಥವಾ ಕೊಡಗಿನ ಕೋಮುಗಲಭೆೆ). ದುರಂತವೆಂದರೆ ದಲಿತರಿಗೆ ವಿಶಾಲ ಮಾರುಕಟ್ಟೆಯ ಅನುಭವಗಳಿಲ್ಲ, ಮಾರುಕಟ್ಟೆಯ ಶೋಷಣೆ ಹಾಗೂ ಸ್ಪರ್ಧೆಯ ಅನುಭವಗಳಿಲ್ಲ. ವಿರೋಧಾಭಾಸವೆಂದರೆ ಮಾರುಕಟ್ಟೆಯ ಯಜಮಾನರು ದಲಿತರಲ್ಲ. ವಿಚಿತ್ರವೆಂದರೆ, ದಲಿತರಿರುವುದು ಸರಕಾರಿ ಶಾಲೆಗಳಲ್ಲಿ, ಕಚೇರಿಗಳಲ್ಲಿಯೇ ಹೊರತು ಮಾರುಕಟ್ಟೆಗಳಲ್ಲಿ ಅಲ್ಲ. ನಗರ ಪ್ರದೇಶಗಳಲ್ಲಿರುವ ಮಾಲ್‌ಗಳಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ, ಹೋಟೆಲ್‌ಗಳಲ್ಲಿ, ಡಿಪಾರ್ಟ್‌ಮೆಂಟ್ ಸ್ಟೋರ್‌ಗಳಲ್ಲಿ, ಹೈಪರ್ ಮಾರ್ಕೆಟ್‌ಗಳಲ್ಲಿ ಅವರ ಹಿಡಿತವಿಲ್ಲ. ಈ ರೀತಿಯ ಅನುಭವದ ಮತ್ತು ಹಿಡಿತದ ಕೊರತೆಯಿಂದಾಗಿ ದಲಿತರು ಕೋಮುಗಲಭೆ ಸಂದರ್ಭ ದಲ್ಲಿ ಮುಸ್ಲಿಮರ ಪರವಾಗಿ ನಿಲ್ಲುವುದಿಲ್ಲ ಹಾಗೂ ಇವ ರಿಬ್ಬರ ನಡುವೆ ಯಾವುದೇ ಸಂವಾದಗಳು ನಡೆ ಯುವುದೇ ಇಲ್ಲ.

ಈ ಸಂವಾದ ವನ್ನು ಹೇಗೆ ನಿರ್ಮಿಸಬಹುದು? ಎರಡು ರಾಷ್ಟ್ರೀಯತೆ, ಉದಾರವಾಗಿ ಹಾಗೂ ಐಡೆಂಟಿಟಿ ಗಳ ಸಂಕೇತಗಳನ್ನು ವರ್ತಮಾನದಲ್ಲಿ ಉಪಯೋಗಿಸಿ ಈ ರೀತಿಯ ಪ್ರಯತ್ನಗಳನ್ನು ಮಾಡಲು ಸಾಧ್ಯವೇ? ಎಂಬ ಪ್ರಶ್ನೆ ಎದುರಾ ಗುವುದು ಸಹಜ. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಹಾಗೂ ವೌಲಾನ ಅಬುಲ್ ಕಲಾಂ ಆಝಾದ್‌ರ ರೂಪಕಗಳನ್ನು ಉಪಯೋಗಿಸಲು ಸಾಧ್ಯವೇ? ಎಂಬ ಪ್ರಶ್ನೆ ಕೂಡ ಉದ್ಭ್ಬವಿಸುತ್ತದೆ.

ಮೇಲ್ನೋಟಕ್ಕೆ ಅಂಬೇಡ್ಕರ್ ಹಾಗೂ ಆಝಾದ್ ಇಬ್ಬರೂ ಉದಾರವಾದಿಗಳು, ಒಂದು ರೀತಿಯ ಸಮಾಜವಾದವನ್ನು ಒಪ್ಪಿದವರು, ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಒಪ್ಪಿದ ವರು ಹಾಗೂ ಕೋಮುವಾದದ ವಿರೋಗಳು. ಆದರೆ, ಕಾಂಗ್ರೆಸ್ ಹಾಗೂ ಗಾಂಯ ವಿಚಾರ ಬಂದಾಗಲೆಲ್ಲಾ ಪರ-ವಿರೋಗಳಾಗುತ್ತಾರೆ. ಅಂಬೇಡ್ಕರ್‌ರವರಿಗೆ ಅಂದಿನ ಕಾಂಗ್ರೆಸ್ ರಾಜಕಾರಣದೊಂದಿಗೆ ಮೂಲಭೂತ ಭಿನ್ನಾಭಿಪ್ರಾಯವಿದ್ದುದು ಎಲ್ಲರಿಗೂ ತಿಳಿದ ವಿಷಯ. ಅದು ಎರಡನೆ ಸುತ್ತಿನ ದುಂಡುಮೇಜಿನ ಪರಷತ್ತಿನ ಸಂದರ್ಭದಲ್ಲಿ, ಪೂನಾ ಒಪ್ಪಂದದಲ್ಲಿ ಇತ್ಯಾದಿಗಳಲ್ಲಿ ನಿಚ್ಚಳವಾಗಿ ಕಂಡು ಬರುತ್ತದೆ.

ಅಂಬೇಡ್ಕರ್ ಪ್ರಕಾರ ಗಾಂಯೊಬ್ಬ ಮಹಾ ‘ಅಹಂಕಾರಿ’ (ಈಗೋಯಿಸ್ಟಿಕ್), ಒಬ್ಬ ‘ಹಿಂದೂ ನಾಯಕ’ ಭಾರತದ ರಾಜಕಾರಣವನ್ನೇ ಸ್ವಂತಿಕೆಯ ಜಗಳದ ವಿಷಯವನ್ನಾಗಿ ಪರಿವರ್ತಿಸಿದವರು. ಅಲ್ಲದೇ ಗಾಂ ಯಾವತ್ತೂ ಟೀಕೆಗಳನ್ನು ಸಂತೋಷದಿಂದ ಒಪ್ಪಿದವರಲ್ಲ ಅಥವಾ ಎದುರಿಸಿ ದವರಲ್ಲ. ಈ ರೀತಿಯ ಕಲ್ಪನೆ ಆಝಾದ್ ರಲ್ಲಿ ಕಂಡು ಬರುವುದಿಲ್ಲ. ದುರಂತವೆಂದರೆ ಗಾಂ-ಅಂಬೇಡ್ಕರ್ ಚರ್ಚೆಯಲ್ಲಿ ಆಝಾದ್ ಎಲ್ಲಿಯೂ ಮುಖಾ ಮುಖಿಯಾಗುವುದಿಲ್ಲ. ಆಝಾದ್‌ರ ನಿಷ್ಠೆ ಮೂಲರ್ತವಾಗಿ ಗಾಂಗೆ ಹಾಗೂ ಕಾಂಗ್ರೆಸ್‌ಗೆ ಇದ್ದುದು ಸರ್ವ ಸತ್ಯ. ಆದಕಾರಣವೇ ಅವರು ಮೂರು ಬಾರಿ ಕಾಂಗ್ರೆಸ್‌ನ ಅಧ್ಯಕ್ಷರಾದರು. ಹತ್ತು ಹಲವು ಬಾರಿ ಕಾಂಗ್ರೆಸಿಗರಂತೆ ವಿವಿಧ ಚಳವಳಿಗೆ ಕೈಜೋಡಿಸಿದರು, ಸೆರೆಮನೆವಾಸ ಕೈಗೊಂಡಿದ್ದರು. ಅವರಿಗೆ ಕಾಂಗ್ರೆಸ್ ಉಸಿರಾಗಿತ್ತು. ಅವರೆಂದೂ ಕಾಂಗ್ರೆಸ್ ಅನ್ನು ವಿರೋಸಲಿಲ್ಲ. ಅಥವಾ ಟೀಕಿಸಲಿಲ್ಲ ಆದರೆ, ಕಾಂಗ್ರೆಸ್‌ನ ಕೆಲವರೊಂದಿಗೆ ಅವರ ಭಿನ್ನಾಭಿಪ್ರಾಯ ಇದ್ದುದು ತಿಳಿದ ಸಂಗತಿ. ಅವರ ಭಿನ್ನಾಭಿಪ್ರಾಯ ಬಹಳ ಮುಖ್ಯವಾಗಿ ಇದ್ದುದು ವಲ್ಲಭ ಬಾಯಿ ಪಟೇಲರೊಂದಿಗೆ. ಪಟೇಲ್ ಅಲ್ಪಸಂಖ್ಯಾತ ವಿರೋ ಧೋರಣೆ ಅವರಿಗೆ ಸೂಕ್ಷ್ಮವಾಗಿ ತಿಳಿದಿತ್ತು. ವಾಸ್ತವವಾಗಿ ಅವರನ್ನು ಕಾಂಗ್ರೆಸ್ ತನ್ನ ಜಾತ್ಯತೀತತೆಯ ಪ್ರತೀಕವೆಂಬಂತೆ ಪ್ರತಿಬಿಂಬಿಸಿತ್ತು. ಈ ಕಾರಣಕ್ಕಾಗಿಯೇ ಅವರನ್ನು ಜಿನ್ನಾ ‘‘ಶೋ ಬಾಯ್’’ ಎಂದು ಕರೆದರು. ವಾಸ್ತವವಾಗಿ ವಸಾಹತುಶಾಹಿ ಸಂದರ್ಭದಲ್ಲಿ ಅವರೊಬ್ಬ ಮುಸ್ಲಿಂ ಉದಾರವಾದಿ ಮುಖವೂ ಆಗಿದ್ದರು. ಇದೇ ಕಾರಣಕ್ಕಾಗಿ ಅವರು ಮುಸ್ಲಿಮರ ಏಕದ್ವತೀಯ ನಾಯಕನಾಗಲು ಅಸಾಧ್ಯವಾಯಿತು. ಇದಕ್ಕೆ ಕಾರಣವಿದೆ. ಒಂದೆಡೆ ಜಿನ್ನಾ ಆ ಸ್ಥಾನವನ್ನು ಕಬಳಿಸಿದರೆ, ಇನ್ನೊಂದೆಡೆ ವೌಲಾನ ಅಬುಲ್ ಕಲಾಂ ಆಝಾದ್‌ಗೆ ಗಟ್ಟಿಯಾದ ಸಾಮಾಜಿಕ ತಳಹದಿ ಇರಲಿಲ್ಲ. ಎಲ್ಲಾ ಮುಸ್ಲಿಮರನ್ನು ಅವರು ಪ್ರತಿನಿಸಲು ಅವರಿಗೆ ಇದೇ ಕಾರಣಕ್ಕಾಗಿ ಸಾಧ್ಯವಾಗಲಿಲ್ಲ. ದುರಂತವೆಂದರೆ ಅವರೊಬ್ಬ ಭಾರತ ವಿಭಜನೆಯನ್ನು ವಿರೋಸುವ ಒಂದು ಕ್ಷೀಣ ಧ್ವನಿಯಾಗಿದ್ದರು. ಇದೇ ಕಾರಣಕ್ಕಾಗಿ ಅವರನ್ನು ರಾಷ್ಟ್ರ ನಿರ್ಮಾಣ ಹಾಗೂ ಜಾತ್ಯತೀತತೆಯ ರೂಪಕವಾಗಿ ಬಳಸಲಾಗುತ್ತಿದೆ.

 ಎರಡನೇ ವಿಚಿತ್ರವೆಂದರೆ ವೌಲಾನ ಆಝಾದ್-ಅಂಬೇಡ್ಕರ್ ತಮ್ಮ ಸಮುದಾಯಗಳನ್ನು ಏಕರೂಪಿಯಾಗಿ ಗುರುತಿಸುವುದಿಲ್ಲ. ಆಝಾದ್ ಮುಸ್ಲಿಮರನ್ನು ಏಕರೂಪಿಯಾದ ಸಮುದಾಯ ಅಥವಾ ‘‘ಖೋಮ್’’ ಆಗಿ ಗುರುತಿಸುವುದಿಲ್ಲ. ಅವರಲ್ಲಿ ವಹಾಬಿಗಳು, ಶಿಯಾ, ಸುನ್ನಿಗಳು ಇತ್ಯಾದಿಗಳಿರುವುದನ್ನು ಗುರುತಿಸಿದರೂ, ಅವರಲ್ಲಿರು ವಿವಿಧ ಜಾತಿಗಳನ್ನು ಗುರುತಿಸದೇ ಹೋಗುತ್ತಾರೆ. ಇದು ಅವರ ಸೋಲು ಕೂಡ ಹೌದು. ದುರಂತವೆಂದರೆ, ಮುಸ್ಲಿಮರಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಅರ್ಜಲ್ಸ್ ಗಳಿರುವುದನ್ನು 1935ರ ಸುಮಾರಿಗೆ ಗುರುತಿಸಿದ್ದು ಅಂಬೇಡ್ಕರ್. ದುರಂತವೆಂದರೆ ಅಂಬೇಡ್ಕರ್‌ರ ಎಲ್ಲಾ ವಾದಗಳು ‘‘ಹಿಂದೂ’’ ಸಮಾಜದ ‘‘ಜಾತಿ’’ಗಳ ವಿಶ್ಲೇಷಣೆಯಿಂದ ಆರಂಭಗೊಳ್ಳುತ್ತವೆ. ಅದು ಮತಾಂತರದ ಕಾಲದ ನಂತರವೂ ನಡೆಯುತ್ತಾ ಹೋಗುತ್ತದೆ. ಹಿಂದೂ ಧರ್ಮ ಅವರ ಪ್ರಕಾರ ಏಕರೂಪಿಯಲ್ಲ. ಅವರು ಮನುಸ್ಮತಿಯನ್ನು ಸಾರ್ವಜನಿಕವಾಗಿ ಸುಟ್ಟಾಗ ಅವರ ಸಿಟ್ಟು ಇಲ್ಲಿ ವ್ಯಕ್ತವಾಗುತ್ತದೆ.

ಮೂರನೆಯದಾಗಿ ರಾಷ್ಟ್ರ ನಿರ್ಮಾಣದ ಸಂದರ್ಭದಲ್ಲಿ ಇವರಿಬ್ಬರೂ ಒಂದಾಗುತ್ತಾರೆ. ಅದಕ್ಕೆ ಪೂರಕವಾಗಿ ನೆಹರೂರವರ ಮಂತ್ರಿಮಂಡಲದಲ್ಲಿ ಮಂತ್ರಿಗಳಾಗುತ್ತಾರೆ. ಅಂಬೇಡ್ಕರ್ ನೆಹರೂರವರ ಸಂಪುಟದಲ್ಲಿ ಕಾನೂನು ಮಂತ್ರಿಯಾದರೂ ತಮ್ಮ ಕ್ರಿಟಿಕಲ್ ಇನ್‌ಸೈಡರ್ (ಆಂತರಿಕ ವಿಮರ್ಶಕ) ಚಿಂತನೆಗಳನ್ನು ಬಿಟ್ಟುಕೊಡುವುದಿಲ್ಲ. ಅದು ಬಹಳ ಮುಖ್ಯವಾಗಿ ವ್ಯಕ್ತವಾಗುವುದು ಅವರು ಕ್ಯಾಬಿನೆಟ್‌ಗೆ 1951ರಲ್ಲಿ ರಾಜೀನಾಮೆ ನೀಡುವ ಸಂದರ್ಭದಲ್ಲಿ. ಈ ರೀತಿಯ ರಾಜಕೀಯದ ಕ್ರಿಟಿಕಲ್ ಇನ್‌ಸೈಡರ್ ಆಗಿ ಆಝಾದ್‌ರಲ್ಲೂ ಕಂಡುಬರುತ್ತದೆ. ಇದು ಸಾಧ್ಯವಾಗುವುದು ಅವರ ಭಾರತ ವಿಭಜನೆಯ ವಿರೋ ಭಾವನೆಯಲ್ಲಿ ಹಾಗೂ ಪಾಕಿಸ್ತಾನದ ಭವಿಷ್ಯದ ಕಲ್ಪನೆಯಲ್ಲಿ ಹೊರತು ಕಾಂಗ್ರೆಸ್‌ನ ಮೂಲಭೂತ ಧೋರಣೆಗಳನ್ನು ವಿರೋಸುವುದರಲ್ಲಿ ಅಥವಾ ವಿಮರ್ಶಾತ್ಮಕ ಚಿಂತನೆಗಳಲ್ಲಿ ಅಲ್ಲ. ಆಝಾದ್ ಮೂಲತಃವಾಗಿ ಸಮಾಜೋ-ಧಾರ್ಮಿಕ ಕ್ರಿಟಿಕಲ್ ಇನ್‌ಸೈಡರ್ ಎಂದರೂ ತಪ್ಪಾಗಲಾರದು. ಸಮುದಾಯದ ಆಧುನಿಕತೆಗೆ ಸಮಾಜೋ-ಧಾರ್ಮಿಕ ಕ್ರಿಟಿಕಲ್ ಇನ್‌ಸೈಡರ್ ಎಷ್ಟು ಮುಖ್ಯವೂ ಅಷ್ಟೇ ಮುಖ್ಯ ರಾಜಕೀಯ ಕ್ರಿಟಿಕಲ್ ಇನ್‌ಸೈಡರ್. ಅಂಬೇಡ್ಕರ್‌ರವರಲ್ಲಿ ಇವೆರಡೂ ಯಥೇಚ್ಚವಾಗಿತ್ತು.
ಕ್ರಿಟಿಕಲ್ ಇನ್‌ಸೈಡರ್( ಆಂತರಿಕ ವಿಮರ್ಶಕರು)

Writer - ಪ್ರೊ. ಮುಝರ್ ಅಸ್ಸಾದಿ

contributor

Editor - ಪ್ರೊ. ಮುಝರ್ ಅಸ್ಸಾದಿ

contributor

Similar News