‘ಡ್ರಾಗನ್’ ಮತ್ತು ‘ಆನೆ’ ಜೊತೆಯಾಗಿ ಜೀವಿಸಬಲ್ಲವು: ಚೀನಾ
Update: 2016-10-13 23:04 IST
ಬೀಜಿಂಗ್, ಅ. 13: ಚೀನಾ-ಭಾರತ ಬಾಂಧವ್ಯದಲ್ಲಿನ ನಕಾರಾತ್ಮಕ ಅಂಶಗಳ ಹೊರತಾಗಿಯೂ, ‘ಡ್ರಾಗನ್’ ಮತ್ತು ‘ಆನೆ’ಗಳು ಜೊತೆಯಾಗಿ ಜೀವಿಸಬಲ್ಲವು ಎಂಬುದನ್ನು ಇತ್ತೀಚಿನ ವರ್ಷಗಳಲ್ಲಿ ಬಾಂಧವ್ಯದಲ್ಲಿ ಆಗಿರುವ ಸ್ಥಿರ ಬೆಳವಣಿಗೆಗಳು ತೋರಿಸಿಕೊಟ್ಟಿವೆ ಎಂದು ಚೀನಾ ಇಂದು ಹೇಳಿದೆ.
‘‘ಒಂದು ಕಾಲದಲ್ಲಿ, ನಮ್ಮ ಭವಿಷ್ಯದ ಸಂಬಂಧಗಳ ಕುರಿತ ಮಾತುಗಳು ಡ್ರಾಗನ್ (ಚೀನಾವನ್ನು ಪ್ರತಿನಿಧಿಸುವ ಪೌರಾಣಿಕ ಪ್ರಾಣಿ) ಮತ್ತು ಆನೆ (ಭಾರತದ ಪ್ರತಿನಿಧಿ)ಗಳ ನಡುವಿನ ವೈರತ್ವವನ್ನು ಅವಲಂಬಿಸಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧದಲ್ಲಿ ಆಗಿರುವ ನಿರಂತರ ಅಭಿವೃದ್ಧಿಯು ಡ್ರಾಗನ್ ಮತ್ತು ಆನೆಗಳು ಪರಸ್ಪರ ಕೈಜೋಡಿಸಿ ಕುಣಿಯಬಲ್ಲವು ಎಂಬುದನ್ನು ತೋರಿಸಿದೆ’’ ಎಂದು ಹೊಸದಿಲ್ಲಿಯ ಚೀನಾ ರಾಯಭಾರ ಕಚೇರಿಯಲ್ಲಿ ಮಿನಿಸ್ಟರ್ ಕೌನ್ಸಿಲರ್ ಆಗಿರುವ ಚೆಂಗ್ ಗುವಾಂಗ್‌ಝಾಂಗ್ ಹೇಳಿದರು.