×
Ad

ಶಂಕಿತ ಐಎಸ್‌ಐ ಏಜೆಂಟರಿಬ್ಬರ ಬಂಧನ

Update: 2016-10-13 23:44 IST

ಕಛ್(ಗುಜರಾತ್), ಅ.13: ತಡ ರಾತ್ರಿಯ ಕಾರ್ಯಾಚರಣೆ ಯೊಂದರಲ್ಲಿ ಗುಜರಾತ್‌ನ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್) ಇಬ್ಬರು ಶಂಕಿತ ಐಎಸ್‌ಐ ಏಜೆಂಟರನ್ನು ಬಂಧಿಸಿದೆ. ಅವರು ಭಾರತದ ಸೇನೆ ಹಾಗೂ ಬಿಎಸ್ಸೆಫ್ ಪಡೆಗಳ ಚಲನವಲನದ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದಲ್ಲಿರುವ ಅವರ ನಿಯಂತ್ರಕರಿಗೆ ಕಳುಹಿಸುತ್ತಿದ್ದರೆಂದು ಆರೋಪಿಸಲಾಗಿದೆ.

ಆರೋಪಿಗಳ ವಿರುದ್ಧವಿಂದು ಅಧಿಕೃತ ಗೌಪ್ಯ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಗಳ ಹಲವು ಸೆಕ್ಷನ್‌ಗಳನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಏಜೆಂಟರಾಗಿ ಆರೋಪಿಗಳ ಶಂಕಿತ ಪಾತ್ರದ ಕುರಿತು ಅರಿತ ಬಳಿಕ ಎಟಿಎಸ್ ಅವರ ಮೇಲೆ ಹದ್ದುಗಣ್ಣಿರಿಸಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ಭುಜ್ ತಾಲೂಕಿನ ಕುಕ್ಮ ಗ್ರಾಮದ ಅಲಾನಾ ಹಮೀರ್ ಸಾಮಾ (40) ಹಾಗೂ ಅದೇ ತಾಲೂಕಿನ ಸುಮ್ರಾಪುರದ ನಿವಾಸಿ ಶಕೂರ್ ಸುಮ್ರಾ (38) ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News