×
Ad

ಪಾಕ್ ಕಲಾವಿದರಿಗೆ ವೀಸಾ ನೀಡಲು ಸಮಸ್ಯೆಯಿಲ್ಲ: ಭಾರತ

Update: 2016-10-15 15:16 IST

ಹೊಸದಿಲ್ಲಿ, ಅ.15: ‘‘ಪಾಕಿಸ್ತಾನಿ ಕಲಾವಿದರಿಗೆ ವೀಸಾ ನೀಡುವುದಕ್ಕೆ ಭಾರತ ಸರಕಾರಕ್ಕೆ ಯಾವುದೇ ಅಭ್ಯಂತರವಿಲ್ಲ, ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಬ್ಬ ವ್ಯಕ್ತಿ ವೀಸಾಗೆ ಅರ್ಜಿ ಸಲ್ಲಿಸಿದರೆ ಮತ್ತು ಆತ ಅದಕ್ಕೆ ಅಗತ್ಯವಾದ ಷರತ್ತುಗಳನ್ನು ಪೂರೈಸಿದಲ್ಲಿ ಆತನಿಗೆ ವೀಸಾ ನೀಡಲಾಗುವುದು. ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡಬಾರದೆಂದೇನೂ ಇಲ್ಲ,’’ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನಿ ಕಲಾವಿದರು ನಟಿಸಿರುವ ಚಿತ್ರಗಳನ್ನು ಮಹಾರಾಷ್ಟ್ರ, ಗೋವಾ ಮತ್ತು ಗುಜರಾತಿನ ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಿ ಪ್ರದರ್ಶಿಸಲು ಅನುಮತಿಸುವುದಿಲ್ಲವೆಂದು ಸಿನೆಮಾ ನಿರ್ಮಾಪಕರು ಮತ್ತು ಪ್ರದರ್ಶನಕಾರರ ಸಂಘ ಹೇಳಿದ ನಂತರ ಸರಕಾರದ ಈ ಹೇಳಿಕೆ ಬಂದಿದೆ.

ಒಟ್ಟು 19 ಯೋಧರನ್ನು ಬಲಿ ತೆಗೆದುಕೊಂಡ ಉರಿ ದಾಳಿಯ ನಂತರ ಪಾಕಿಸ್ತಾನಿ ಕಲಾವಿದರಿಗೆ ದೇಶ ತೊರೆಯುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಹೇಳಿತ್ತಲ್ಲದೆ ಯೇ ದಿಲ್ ಹೇ ಮುಷ್ಕಿಲ್, ರಾಯೀಸ್ ನಂತಹ ಪಾಕಿಸ್ತಾನಿ ಕಲಾವಿದರು ನಟಿಸಿರುವ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದೂ ಬೆದರಿಕೆ ಹಾಕಿತ್ತು.

ಎರಡು ರಾಷ್ಟ್ರಗಳ ನಡುವಣ ಸಂಬಂಧ ಸಹಜಗೊಳ್ಳುವ ತನಕ ಪಾಕಿಸ್ತಾನದ ಕಲಾವಿದರನ್ನು ಹಾಕಿ ಯಾವುದೇ ಚಿತ್ರಗಳನ್ನು ನಿರ್ಮಿಸದಂತೆ ಭಾರತೀಯ ಚಿತ್ರ ನಿರ್ಮಾಪಕರಿಗೆ ಭಾರತೀಯ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್‌ ಅಸೋಸಿಯೇಶನ್ ಕೂಡ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News