ಮಹಾರಾಷ್ಟ್ರದ ಶಾಲೆಗಳಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ: ಸರಕಾರಕ್ಕೆ ದೂರು

Update: 2016-10-15 14:29 GMT

ಮುಂಬೈ, ಅ.15: ಕೆಲವು ಖಾಸಗಿ ಸನಿವಾಸ ಶಾಲೆಗಳಲ್ಲಿ ಬುಡಕಟ್ಟು ಮಕ್ಕಳನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆಯೆಂಬ ದೂರುಗಳು ಮಹಾರಷ್ಟ್ರ ಸರಕಾರಕ್ಕೆ ಬಂದಿವೆಯೆಂದು ಬುಡಕಟ್ಟು ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ಶಾಲೆಗಳಲ್ಲಿ ಬುಡಕಟ್ಟು ಮಕ್ಕಳಿಗೆ ತರಗತಿಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ, ಇತರ ವಿದ್ಯಾರ್ಥಿಗಳ ಜೊತೆ ಬೆರೆಯಲು ಅವಕಾಶ ನೀಡದಿರುವುದು ಅಥವಾ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪಾಠ ಮಾಡುವುದು ಇತ್ಯಾದಿ ತಾರತಮು ಅನುಕರಿಸಲಾಗುತ್ತಿದೆಯೆಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯು, ಸಮಸ್ಯೆ ನಿವಾರಣೆಗಾಗಿ ಮುಂದಿನ ವಾರ ನವಿ ಮುಂಬೈಯ ವಾಶಿಯಲ್ಲಿ ಸನಿವಾಸ ಶಾಲೆಗಳ ನಿರ್ದೇಶಕರು ಹಾಗೂ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜಂಟಿ ಸಭೆಯೊಂದನ್ನು ಕರೆಯಲು ನಿರ್ಧರಿಸಲಾಗಿದೆಯೆಂದು ಅವರು ಹೇಳಿದ್ದಾರೆ.

ದೂರುಗಳನ್ನು ಗಮನಿಸಿದ ಬುಡಕಟ್ಟು ಅಭಿವೃದ್ಧಿ ಸಚಿವ ವಿಷ್ಣು ಸಾವರ ಸಭೆಯೊಂದನ್ನು ಕರೆದು, ಯೋಜನೆಯ ಹಿಂದಿರುವ ಸರಕಾರದ ಉದ್ದೇಶವನ್ನು ಶಾಲೆಗಳಿಗೆ ಎಚ್ಚರಿಕೆ ನೀಡುವಂತೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ದೂರುಗಳು ಬಂದಿರುವುದನ್ನು ಖಚಿತಪಡಿಸಿರುವ ಸಚಿವ, ಸೋಮವಾರ ಸಭೆ ನಡೆಸಿ ಶಾಲೆಗಳ ಕಡೆಯ ವಾದವನ್ನೂ ಆಲಿಸಲಾಗುವುದು. ಆದರೆ, ಬುಡಕಟ್ಟು ಮಕ್ಕಳನ್ನು ಅನವಶ್ಯವಾಗಿ ಗುರಿ ಮಾಡಿದರೆ, ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News